IPL starts from may 17th : ಭಾರತ ಪಾಕಿಸ್ತಾನ ಸೇನಾ ಸಂಘರ್ಷ ಕಾರಣ ಸ್ಥಗಿತಗೊಂಡ ಇಂಡಿಯನ್ ಪ್ರಿಮಿಯರ್ ಲೀಕ್ ಟೂರ್ನಿ ಇದೇ ಮೇ 17 ರಿಂದ ಆರಂಭಗೊಳ್ಳಲಿದೆ. ಫೈನಲ್ ಪಂದ್ಯವನ್ನು ಕೋಲ್ಕತ್ತಾದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ.
ಹೌದು, ಮಿತ್ರರೇ ಮೇ 17 ರಿಂದ ಐಪಿಎಲ್ ಪಂದ್ಯಗಳು ಮತ್ತೆ ಪ್ರಾರಂಭವಾಗಲಿವೆ ಎಂದು ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ.
ಒಟ್ಟು 17 ಪಂದ್ಯಗಳು ಮೇ 17 ರಿಂದ ಜೂನ್ 3 ರವರೆಗೆ ಆರು ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿವೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯುವ ದಿನಾಂಕ ಪ್ರಕಟವಾಗಿದೆಯೇ ಹೊರತು ಸ್ಥಳ ನಿಗದಿಯಾಗಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾಗುತ್ತದೆ. ಈ ಪಂದ್ಯ ಮೇ 17 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪಾಕ್ ವಾಯುದಾಳಿಯ ಅಲರ್ಟ್ ಹಿನ್ನೆಲೆಯಲ್ಲಿ ರದ್ದಾದ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮೇ 24 ರಂದು ಜೈಪುರದಲ್ಲಿ ಮತ್ತೆ ನಡೆಯಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯ ಮೇ 29 ರಂದು ನಡೆಯುತ್ತದೆ. ಎಲಿಮಿನೇಟರ್ ಪಂದ್ಯ ಮರುದಿನ ನಡೆಯಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಜೂನ್ 1 ರಂದು ಎರಡನೇ ಕ್ವಾಲಿಫೈಯರ್‌ನಲ್ಲಿ ಸೆಣಸಲಿವೆ. IPL 2025 ರ ಫೈನಲ್ ಪಂದ್ಯ ವಾರಾಂತ್ಯಕ್ಕೆ ಬದಲಾಗಿ ವಾರದ ಮದ್ಯದಲ್ಲಿ (ಮಂಗಳವಾರ) ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಿಳಿಸಿದ್ದಾರೆ.
IPL starts from may 17th ಪಂದ್ಯಗಳ ಅಂಕಪಟ್ಟಿ
ರಾಯಲ್ ಚಾಲೆಂಜರ್ಸ್ ತಂಡ ಮೇ 17ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ, ಮೇ 23ರಂದು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ಸೆಣೆಸಲಿದೆ. ಈ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಮೇ 27ರಂದು ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಸೋಲು ಕಂಡಿರುವ ಆರ್ ಸಿಬಿಯು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಯಾವ ಯಾವ ಸರ್ವೆ ನಂಬರಿಗೆ FID ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ
ಅಷ್ಟೇ ಅಂಕಗಳನ್ನು ಕಲೆ ಹಾಕಿರುವ ಗುಜರಾತ್ ಜೈಂಟ್ಸ್ ಪ್ರಥಮ ಸ್ಥಾನದಲ್ಲಿದೆ. 15 ಅಂಕ ಗಳಿಸಿರುವ ಪಂಜಾಬ್ ಕಿಂಗ್ಸ್ 3ನೇ ಸ್ಥಾನದಲ್ಲಿ, 14 ಅಂಕ ಗಳಿಸಿರುವ ಮಿಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿ ಇವೆ. 13 ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ 5, 12 ಅಂಕ ಗಳಿಸಿರುವ ಕೋಲ್ಕತಾ ನೈಟ್ ರೈಡರ್ಸ್ 6 ಮತ್ತು 10 ಅಂಕ ಗಳಿಸಿರುವ ಲಖನೌ 7ನೇ ಸ್ಥಾನದಲ್ಲಿವೆ. ಸನ್ ರೈಸರ್ಸ್ ಹೈದರಾಬಾದ್ , ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿವೆ.