ಇಂದಿನಿಂದ ಈ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ

Written by Ramlinganna

Published on:

Four days again rain : ರಾಜ್ಯದಲ್ಲಿ ಮತ್ತೆ ನಾಲ್ಕು ದಿನ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ತೇವಾಂಶ ಭರಿತ ಮೋಡಗಳಿಂದಾಗಿ ರಾಜ್ಯದಲ್ಲಿ ಈಗಾಗಲೇ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಈಗ ಮತ್ತೆ ಮುಂದಿನ ನಾಲ್ಕು ದಿನ ಆಲಿಕಲ್ಲಿನೊಂದಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆ ಹೊರತುಪಡಿಸಿ  ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆಲಿಕಲ್ಲು ಮಳೆಯಾಗಲಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳಲ್ಲಿಯೂ ಸಹ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಲಿದೆ.  ಮಳೆಯೊಂದಿಗೆ ಪ್ರಬಲ ಗಾಳಿ, ಗುಡುಗು, ಮಿಂಚಿನ ಆರ್ಭಟ ಸಹ ಕಂಡುಬರಲಿದೆ. ಕೆಲ ಸ್ಥಳಗಳಲ್ಲಿ ಗಾಳಿಯ ವೇಗ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Four days again rain ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ? ಈ ನಂಬರಿಗೆ ಕರೆ ಮಾಡಿ

ಇಂದು ಯಾವ ಯಾವ ಊರಿನಲ್ಲಿ ಮಳೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ವರುಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ಸಿಗುತ್ತದೆ. ಈ ನಂಬರ್  ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.  ನೀವು ಇದ್ದ ಊರಿನಲ್ಲಿಯೂ ಮುಂದಿನ ಐದು ದಿನದ ಹವಾಮಾನದ ವರದಿಯನ್ನು ನೀಡಲಾಗುವುದು. ಇದಕ್ಕಾಗಿ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ.

ಇದನ್ನೂ ಓದಿ ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಇಲ್ಲೆ ಚೆಕ್ ಮಾಡಿ

ಇನ್ನೇಕೆ ತಡ ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿ  ನಿಮ್ಮೂರಿನ ಸುತ್ತಮುತ್ತ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಪಡೆಯಿರಿ.

Four days rain alert again  ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿ  ಐದು ದಿನ ಮೊದಲೇ ಮಳೆಯ ಮಾಹಿತಿ ಪಡೆಯುವುದು ಹೇಗೆ?

ರೈತರು ಮನೆಯಲ್ಲಿಯೇ ಕುಳಿತು ಐದು ದಿನ ಮೊದಲೇ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಹೌದು,  ಈ

https://play.google.com/store/apps/details?id=com.aas.meghdoot&hl=en_IN&gl=US

ಲಿಂಕ್ ಮೇಲ ಕ್ಲಿಕ್ ಮಾಡಿ ಮೇಘದೂತ್ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಬಹುದು. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನೀವು ಯಾವ ಭಾಷೆಯಲ್ಲಿ ಮಾಹಿತಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು, ನಂತರ ಮುಂದೆ ಮೇಲೆ ಕ್ಲಿಕ್ ಮೇಘದೂತ್ ಆ್ಯಪ್ ಲಾಗಿನ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಬೇಕು. ನಂತರ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜಿಲ್ಲೆಯ ಕನಿಷ್ಠ, ಗರಿಷ್ಠ ತಾಪಮಾನ, ಗಾಳಿಯ ವೇಗ ಹಾಗೂ ಗಾಳಿಯ ದಿಕ್ಕು ತೇವಾಂಶದ ಮಾಹಿತಿ ಕಾಣಿಸುತ್ತದೆ.

Leave a Comment