Free 20 chicks distribution : ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು, ಗ್ರಾಮಾಂತರ ಪ್ರದೇಶದಲ್ಲಿವಾಸಿಸುತ್ತಿರುವ ಮಹಿಳೆಯರಿಗೆ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು ಎಂಬುದರ ಮಾಹಿತಿ ಇಲ್ಲಿದೆ.
ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ರಾಜ್ಯದ ಮಹಿಳಾ ಫಲಾನಭವಿಗಳಿಗೆ ಉಚಿತವಾಗಿ 20 ನಾಟಿ ಕೋಳಿ ಮರಿಗಳ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಐದು ವಾರದ ಕೋಳಿ ಮರಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು.
ಗ್ರಾಮೀಣ ಭಾಗದ ಎಸ್.ಸಿ, ಎಸ್.ಟಿ ಮಹಿಳೆಯರು ಸೇರಿದಂತೆ ಸಾಮಾನ್ಯ ವರ್ಗದ ಮಹಿಳಯರಿಗೂ ತಲಾ 20 ನಾಟಿ ಕೋಳಿ ಮರಿಗಳನ್ನು ನೀಡಲಾಗುವುದು.
Free 20 chicks distribution ಅರ್ಜಿ ಯಾರು ಯಾರು ಸಲ್ಲಿಸಬೇಕು?
ಮಹಿಳೆಯರ ಬಳಿ ಆಧಾರ್ ಕಾರ್ಡ್ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಯಾವ ತಾಲೂಕಿನಲ್ಲಿ ಅರ್ಜಿ ಸಲ್ಲಿಸುತ್ತಾರೋ ಆ ಆ ತಾಲೂಕಿನ ನಿವಾಸಿಯಾಗಿರಬೇಕು. ಇದೇ ರೀತಿ ಸ್ವ ಸಾಹಯ ಗುಂಪಿನ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಿರುವ ಮಹಿಳಾ ಸದಸ್ಯರು ಮತ್ತು ರೈತ ಉತ್ಪಾದಕರ ಸಂಸ್ಥೆಯ ಫಲಾನುಭವಿಗಳು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿ ಎಲ್ಲಿ ಯಾವಾಗ ಸಲ್ಲಿಸಬೇಕು?
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಮಹಿಳೆಯರು ಡಿಸೆಂಬರ್ 15 ರೊಳಗಾಗಿ ಆಯಾ ತಾಲೂಕಿನ ಪಶು ವೈದ್ಯಾಧಿಕಾರಿ ಅಥವಾ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ಸರ್ವೆ ನಂಬರ್ ಹಾಕಿ ಜಮೀನಿನ ಮುಟೇಶನ್ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿನೀಡಲಾಗಿರುವ ಮೊಬೈಲ್ ನಂಬರಿಗೆ ಸಂಪರ್ಕಿಸಬಹುದು.
ಚಿತ್ರದುರ್ಗ ತಾಲೂಕಿನವರು : 9482943111, ಚಳ್ಳಕೆರೆ ತಾಲೂಕಿನವರು: 9448816499, ಹೊಳಲ್ಕೆರೆ ತಾಲೂಕಿನವರು : 9972965479, ಹೊದುರ್ಗ ತಾಲೂಕಿನವರು: 9945298407, ಹಿರಿಯೂರು ತಾಲೂಕಿನವರು: 9483451044, ಮೊಳಕಾಲ್ಮೂರು ತಾಲೂಕಿನವರು: 9900964820 ಮೊಬೈಲ್ ನಂಬರುಗಳಿಗೆ ಸಂಪರ್ಕಿಸಬಹುದು.
ಇದೇ ರೀತಿ ರಾಜ್ಯದ ವಿವಿದ ಜಿಲ್ಲೆ, ತಾಲ್ಲೂಕುಗಳಲ್ಲೂ ಉಚಿತ ನಾಟಿಕೋಳಿ ಮರಿ ವಿತರಣೆ ಕಾರ್ಯ ಆರಂಭವಾಗಿದ್ದು ಆಯಾ ಜಿಲ್ಲಾವಾರು ಅರ್ಜಿ ಕರೆದಾಗ ಫಲಾನುಭವಿಗಳು ಅರ್ಜಿ ಸಲ್ಲಿಸಿ ಕೋಳಿ ಮರಿಗಳನ್ನು ಪಡೆಯಬಹುದು.
ಒಂದು ಎತ್ತಿನ ಬೆಲೆ 13 ಲಕ್ಷ ರೂಪಾಯಿ
ಒಂದು ಎತ್ತಿನ ಬೆಲೆ ಅಬ್ಬಬ್ಬಾ ಎಂದರೆ 50 ಸಾವಿರ ಇಲ್ಲ ಒಂದು ಲಕ್ಷ ರೂಪಾಯಿ ಇರಬಹುದು. ಇದಕ್ಕಿಂತ ಹೆಚ್ಚು ಬೆಲೆ ಮಾರಾಟವಾಗುವುದು ಅಪರೂಪ. ಆದರೆ ಇಲ್ಲೊಬ್ಬ ರೈತನ ಎತ್ತು ಮಾರಾಟವಾಗಿದ್ದ ಬೆಲೆ ಕೇಳಿದರೆ ನೀವು ಶಾಕ್ ಆಗ್ತಿರಾ. ಹೌದು, ರೈತ ಮಿತ್ರರೇ ನಮ್ಮಕರ್ನಾಟಕದ ಎತ್ತು ಬರೋಬ್ಬರಿ 13 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಅದು ಯಾವ ಜಿಲ್ಲೆಯ ಎತ್ತು ಯಾವ ತಳಿಯ ಎತ್ತು ಏಕೆ ಈ ಎತ್ತಿಗೆ ಇಷ್ಟೊಂದು ಬೆಲೆ ಇಲ್ಲಿದೆ ಮಾಹಿತಿ.
ಮಂಡ್ಯ ಜಿಲ್ಲೆಯ ಹಳ್ಳಿಕಾರ್ ತಳಿಯ ಎತ್ತು 13 ಲಕ್ಷ ಐದು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಎತ್ತು ವಿವಿಧೆಡೆ ಸ್ಪರ್ಧೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಗೆದ್ದಿದೆ.
ಮಂಡ್ಯ ನಗರದ ತಾವರಗೆರೆಯ ಎ1 ಟೈಗ್ ಎಂದೇ ಹೆಸರಾಗಿರುವ ಈ ಹಳ್ಳಿಕಾರ್ ಎತ್ತನ್ನು ಕಾಂತಾರಾಜು ಎಂಬುವವರು ಸಾಕಿದ್ದರು. ಇದನ್ನು ಅವರು 13.5 ಲಕ್ಷ ರೂಪಾಯಿ ತಮಿಳುನಾಡಿನ ಎಸ್.ವಿ ರಾಜನ್ ಎಂಬುವವರು ಖರೀದಿಸಿದ್ದಾರೆ. ಇನ್ನೂ ಎರಡು ಹಲ್ಲುಗಳ ಚಿಕ್ಕ ವಯಸ್ಸಿನ ಎತ್ತು ದೊಡ್ಡ ಮೊತ್ತಕ್ಕೆ ಖರೀದಿಯಾಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಹಳ್ಳಿಕಾರ್ ತಳಿ ಎತ್ತುಗಳ ವಿಶೇಶತೆ ಏನಿದೆ? ಏಕೆ ಈ ಎತ್ತುಗಳು ದುಬಾರಿ ಬೆಲೆಗೆ ಮಾರಾಟವಾಗುತ್ತವೆ?
ಹಳ್ಳಿಕಾರ್ ತಳಿಯ ಈ ಎತ್ತು ಸತತ 24 ಗಂಟೆಗಳ ಕಾಲ ಕೆಲಸ ಮಾಡುವ ತಾಕತ್ತು ಹೊಂದಿರುತ್ತವೆ. ಇದರೊಂದಿಗೆ 10 ರಿಂದ14 ಟನವರೆಗೆ ಭಾರ ಎಳೆಯಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಹಾಗೂ ಅತಿ ವೇಗವಾಗಿ ನಡೆಯುವ ಈ ಅಪರೂಪದ ತಳಿ ಹಳ್ಳಿಕಾರ್ ಎತ್ತುಗಳು ದಿನಕ್ಕೆ 49 ರಿಂದ 50 ಮೈಲಿ ದೂರವನ್ನು ಯಾವ ವಿಶ್ರಾಂತಿಯ ಅಗತ್ಯವಿಲ್ಲದೆ ನಡೆಯುತ್ತವೆ. ರೈತರು ತಮ್ಮ ಜಮೀನುಗಳಲ್ಲಿ ಉಳುಮೆಗೆ ಎತ್ತು ಮತ್ತು ಹಸು ಎರಡನ್ನೂ ಬಳಸಬಹುದಾದ ವಿಶ್ವದ ಏಕೈಕ ತಳಿ ಇದಾಗಿದೆ.