Goat unit subsidy here : ಕುರಿ/ಮೇಕೆಗಳ ಸಾಕಾಣಿಕೆ ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಡಿಸೆಂಬರ್ 6 ರೊಳಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಪಡೆಯಿರಿ.
ಇಂತಹ ಮಾಹಿತಿ ಪಡೆಯಲು ಸಬಸ್ಕ್ರೈಬ್ ಮಾಡಿ
ಹೌದು, ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನಲ್ಲಿ ಮಂಜೂರಾದ ಗಿರಿಜನ ಉಪ ಯೋಜನೆಯಡಿ 10+1 ಕುರಿ ಅಥವಾ ಮೇಕೆಗಳ ಸಾಕಾಣಿಕೆಗಾಗಿ ಘಟಕಗಳನ್ನು ಸ್ಥಾಪಿಸಿಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಉಪ ನಿರ್ದೇಶಕರ ಶಿವಕುಮಾರಎಸ್. ಹೊಳೆಪ್ಪಗೊಳ ಅವರಿ ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ಕಚೇರಿ ನಿಗಮದಲ್ಲಿನೋಂದಾಯಿತ, ಕಲಬುರಗಿ ಜಿಲ್ಲೆಯ ಸಕ್ರೀಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಪಂಗಡ ವರ್ಗದ ಮಹಿಳಾ ಸದಸ್ಯರು ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
Goat unit subsidy here
ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಡಿಸೆಂಬರ್ 6 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 237772 ಗೆ ಸಂಪರ್ಕಿಸಲು ಕೋರಲಾಗಿದೆ.
ಪಶುಪಾಲನೆಯಲ್ಲಿ ತರಬೇತಿ ಪಡೆಯಬೇಕೆ? ಇಲ್ಲಿದೆ ಮಾಹಿತಿ
ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶುಪಾಲನಾ ಇಲಾಖೆಯ ಪಶು ವೈದ್ಯಕೀಯ ತರಬೇತಿ ಕೇಂದ್ರ ವತಿಯಿಂದ ಪಶುಪಾಲನೆ ತರಬೇತಿಯನ್ನು ಏರ್ಪಡಿಸಲಾಗುವುದು.
ತರಬೇತಿ ಕೇಂದ್ರಗಳು ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿವೆ ಎಂಬುದನ್ನುಚೆಕ್ ಮಾಡಲು ಈ
https://www.ahvs.kar.nic.in/kn-institutionstrg.html
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯದ ಎಲ್ಲೆಲ್ಲಿತರಬೇತಿ ಕೇಂದ್ರಗಳಿವೆ ಎಂಬ ಪಟ್ಟಿ ಕಾಣುತ್ತದೆ.
ಹೈನುಗಾರಿಕೆಯಲ್ಲಿ ಏನೇನು ತರಬೇತಿ ನೀಡಲಾಗುವುದು?
ತರಬೇತಿಯ ಮೊದಲ ದಿನ ತಳಿಗಳಲ್ಲಿನ ವೈವಿದ್ಯತೆ ಮತ್ತು ಹೈನು ರಾಸುಗಳ ತಳಿಗಳ ಪರಿಚಯ ಹಾಗೂ ತಳಿ ಸಂವರ್ಧನನೀತಿ, ಉತ್ತಮ ಹೈನು ರಾಸುಗಳ ಆಯ್ಕೆ, ಸುಧಾರಿತ ಮೇವಿನ ಬೆಳೆಗಳು ಸೇರಿದಂತೆ ಇನ್ನಿತರ ಮಾಹಿತಿ ನೀಡಲಾಗುವುದು.
ತರಬೇತಿಯ ಎರಡನೇ ದಿನ ಮಿಶ್ರತಳಿ ಸಂವರ್ಧನೆ, ಬೆದೆಯ ಲಕ್ಷಣಗಳು ಮತ್ತು ಕೃತಕ ಗರ್ಭದಾರಣೆಯ ಅನುಕೂಲತೆಗಳ ಬಗ್ಗೆ ಮಾಹಿತಿ. ರಾಸುಗಳಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳು, ಹೈನುರಾಸುಗಳ ಸಾಕಾಣಿಕೆಯಲ್ಲಿನ ಸಾಮಾನ್ಯ ನಿರ್ವಹಣೆ ಪದ್ಧತಿಗಳು.ಗರ್ಭದ ರಾಸುಗಳ ಕರುಗಳ ಹಾಗೂ ಕಡಸುಗಳ ನಿರ್ವಹಣೆ , ಜಾನುವಾರು ವಿಮೆ ಕುರಿತಂತೆ ಮಾಹಿತಿ ನೀಡಲಾಗುವುದು.
ಇದನ್ನೂ ಓದಿ : ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಇಲ್ಲೇ ಚೆಕ್ ಮಾಡಿ
ಮೂರನೇದಿನ ಹೈನುಗಾರಿಕೆ ಆರ್ಥಿಕತೆ, ಪ್ರಗತಿಪರ ರೈತರು ಹಾಗೂ ಪ್ರಾತ್ಯಕ್ಷಿಗಳ ಭೇಟಿ, ಹೈನೋತ್ಪನ್ನಗಳ ಮೌಲ್ಯವರ್ಧತೆ ಕುರಿತಂತೆ ಮಾಹಿತಿ ನೀಡಲಾಗುವುದು.
ಕೋಳಿ ಸಾಕಾಣಿಕೆಯಲ್ಲಿ ಏನೇನು ತರಬೇತಿ ನೀಡಲಾಗುವುದು.
ಕೋಳಿ ಸಾಕಾಣಿಕೆಯಲ್ಲಿ ಮೊದಲ ದಿನ
ಕೋಳಿಯ ಮೊಟ್ಟೆ ಮತ್ತು ಮಾಂಸದ ಪೌ ಷ್ಠಿಕತೆ, ಕೋಳಿ ಸಾಕಾಣಿಕೆಯ ಅನುಕೂಲತೆಗಳಉಹಾಗೂ ಕೋಳಿ ಕ್ಷೇತ್ರದಲ್ಲಿ ಸಾಮಾನ್ಯ ನಿರ್ವಹಣೆ ಕುರಿತಂತೆ ಮಾಹಿತಿ ನೀಡಲಾಗುವುದು.
ಕುರಿ ಮೇಕೆ ಸಾಕಾಣಿಕೆಯಲ್ಲೇ ಏನೇನು ತರಬೇತಿ ನೀಡಲಾಗುವುದು?
ಕುರಿ ಮತ್ತು ಮೇಕೆ ಸಾಕಾಣಿಕೆಯ ಅನುಕೂಲತೆಗಳು ಹಾಗೂ ಅವುಗಳ ತಳಿಗಳು, ಕುರಿ ಮತ್ತು ಮೇಕೆಗಳಿಗೆ ಸೂಕ್ತ ವಸತಿ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ, ಕುರಿ ಮತ್ತು ಮೇಕೆಗಳ ತಳಿ ಸಂವರ್ಧನೆ ಕುರಿತು ಮೊದಲ ದಿನ ತರಬೇತಿ ನೀಡಲಾಗುವುದು.
ಎರಡನೆಯ ದಿನ ಕುರಿ ಮತ್ತುಮೇಕೆಗಳ ಸೂಕ್ತ ಮೇವಿನ ಬೆಳೆಗಳು ಕುರಿತು ತರಬೇತಿ ನೀಡಲಾಗುವುದು.ಮೂರನೇದಿನ ಕುರಿ ಮತ್ತು ಮೇಕೆಗಳಿಗೆ ಸಮತೋಲನ ಆಹಾರದ ಪೂರೈಕೆ, ಕುರಿ ಮತ್ತು ಮೇಕೆಗಳಲ್ಲಿ ಸಾಮಾನ್ಯ ರೋಗಗಳು ಹಾಗೂ ಅವುಗಳ ಪ್ರತಿಬಂಧನೆ ಕುರಿತಂತೆ ತರಬೇತಿ ನೀಡಲಾಗುವುದು.
ಪಶುಪಾಲನೆ ಕುರಿತಂತೆ ಮಾಹಿತಿ ನೀಡಲು ಆರಂಭವಾಗಿದೆ ಪಶುಪಾಲನಾ ಸಹಾಯವಾಣಿ
ರೈತರು ಮನೆಯಲ್ಲಿಯೇ ಕುಳಿತು ಉಚಿತವಾಗಿ ಪಶುಪಾಲನಾ ಕುರಿತಂತೆ ಮಾಹಿತಿ ಕೇಳಲು 8277 100 200 ಗೆ ಕರೆ ಮಾಡಿದರೆ ಸಾಕು ಸಂಪೂರ್ಣ ಮಾಹಿತಿ ನೀಡಲಾಗುವುದು.