Check your pahani : ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ಯಾವ ರೈತರ ಪಹಣಿಗಳಲ್ಲಿ ಸೇರ್ಪಡೆಯಾಗಿದೆ ಹಾಗೂ ಸೇರ್ಪಡೆಯಾಗಿಲ್ಲ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಮಾಹಿತಿ.
ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ
Check your pahani ಪಹಣಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ಮಾಡಲಾಗಿದೇಯೇ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ದಾಖಲೆಗಳನ್ನು ನೋಡುವ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಕರೆಂಟ್ ಇಯರ್ ಪಕ್ಕದಲ್ಲಿರುವ Old Year ಬಾಕ್ಸ್ ಮೇಲೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಯಾವ ಜಿಲ್ಲೆಯವರು ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು. ಇದಾದ ಮೇಲೆ Go ಮೇಲೆ ಕ್ಲಿಕ್ ಮಾಡಬೇಕು. ಸೆಲೆಕ್ಟ್ ಸರ್ನೋಕ್ ನಲ್ಲಿ (ಸ್ಟಾರ್) * ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಹಿಸ್ಸಾನಲ್ಲಿ ನಿಮ್ಮ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.
ಒಂದು ವೇಳೆ ನಿಮಗೆ ನಿಮ್ಮ ಹಿಸ್ಸಾ ನಂಬರ್ ಗೊತ್ತಿಲ್ಲದಿದ್ದರೆ ಅಲ್ಲಿ ಕಾಣುವ ನಾಲ್ಕೈದು ಹಿಸ್ಸಾ ನಂಬರ್ ಗಳಲ್ಲಿ ಒಂದೊಂದಾಗಿ ಆಯ್ಕೆ ಮಾಡಿ ಚೆಕ್ ಮಾಡಬಹುದು. ಸೆಲೆಕ್ಟ್ ಪಿರಿಯಡ್ ನಲ್ಲಿ ಮೇಲ್ಗಡೆ ಕಾಣುವ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ನಲ್ಲಿಯೂ ಮೇಲ್ಗಡೆ ಕಾಣುವ ವರ್ಷ ಆಯ್ಕೆಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಹಿಸ್ಸಾ ನಂಬರ್ ನಲ್ಲಿರುವ ಮಾಲಿಕರ ಹೆಸರು ಕಾಣುತ್ತದೆ.
ಹಿಸ್ಸಾ ನಂಬರ್ ನಲ್ಲಿ ಹೆಸರು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನಲ್ಲಿ ಜಂಟಿಯಾಗಿದೆಯೋ ಅವರ ಹೆಸರು ಕಾಣುತ್ತದೆ. ಜಮೀನಿನ ಮಾಲಿಕರು ಒಬ್ಬರೆ ಆಗಿದ್ದರೆ ಅವರ ಹೆಸರು ಕಾಣುತ್ತದೆ. ಇದಾದ ನಂತರ ಡಿಟೇಲ್ಸ್ ನಲ್ಲಿ ಗ್ರಾಮ, ಸರ್ವೆ ನಂಬರ್, ಹಿಸ್ಸಾ ನಂಬರ್, ನೀವು ನಮೂದಿಸಿದ ವರ್ಷ ಕಾಣುತ್ತದೆ.
ಇದನ್ನೂ ಓದಿ : ಅರ್ಹತೆಯಿದ್ದರೂ ಪಿಎಂ ಕಿಸಾನ್ ಜಮೆಯಾಗುತ್ತಿಲ್ಲವೇ? ಇಲ್ಲಿದೆ ಮಾಹಿತಿ
ಅಲ್ಲಿ View ಮೇಲೆ ಕ್ಲಿಕ್ ಮಾಡಬೇಕು. ಆಗ ಪಹಣಿ ಓಪನ್ ಆಗುತ್ತದೆ. Valid From ಮುಂದುಗಡೆ ದಿನಾಂಕ, ತಿಂಗಳು ಹಾಗೂ ವರ್ಷ ಅಂದರೆ ಯಾವ ವರ್ಷದಲ್ಲಿ ನಿಮ್ಮ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ. ನೀವು ನಮೂದಿಸಿದ ಸರ್ವೆ ನಂಬರಿನಲ್ಲಿರುವ ಹಿಸ್ಸಾ ನಂಬರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಮಾಲಿಕರ ಹೆಸರು ಕಾಣುತ್ತದೆ. ನೀವು ಬೆಳೆದ ಬೆಳೆಗಳ ಸಮೀಕ್ಷೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯೂ ಪಹಣಿಯ ಕೊನೆಯಲ್ಲಿ ಕಾಣುತ್ತದೆ. ಇದರೊಂದಿಗೆ ನಿಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಸೇರ್ಪಡೆಯಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ವಕ್ಫ್ ಬೋರ್ಡ್ ಆಸ್ತಿಗಳಲ್ಲಿ ಹೆಸರು ಸೇರ್ಪಡೆ ಮಾಡದೆ ಮನಸೋ ಇಚ್ಚೆ ತಮಗೆ ಬೇಕಾದ ಜಮೀನು ಹುಡುಕಿ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತದೆ ಅಸ್ಟೇ ಅಲ್ಲ, ಕೆಲವು ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಸಹ ಮಾಡಲಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ರೈತರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದರು. ಆಗ ರಾಜ್ಯ ಸರ್ಕಾರ ಹೇಳಿಕೆ ನೀಡಿ ನೋಟಿಸ್ ವಾಪಸ್ ಪಡೆಯುವುದಾಗಿ ತಿಳಿಸಿದೆ
ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.