ನವೆಂಬರ್ 14 ರಿಂದ ನಡೆಯುವ ಕೃಷಿ ಮೇಳದಲ್ಲಿ ಏನೇನಿರಲಿದೆ? ಇಲ್ಲಿದೆ ಮಾಹಿತಿ

Written by Ramlinganna

Published on:

Krishimela in GKVK Bangalore : ಬೆಂಗಳೂರು ನಗರದ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನವೆಂಬರ್ 14 ರಿಂದ 17 ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಆಯೋಜಿಸಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಈ ಬಾರಿ ಆಯೋಜಿಸಲಿರುವ ಬಹು ನಿರೀಕ್ಷಿತ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಕೃಷಿ ಗೆ ಒತ್ತು ನೀಡಲಾಗಿದೆ. ಆದ್ದರಿಂದ ಈ ಸಲ ಹವಾಮಾನ ಚತುರ – ಡಿಜಿಟಲ್ ಕೃಷಿ ಘೋಷವಾಕ್ಯದಡಿ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ 19 ನೂತನ ತಾಂತ್ರಿಕತೆಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.

ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕವೇ ರೈತರಿಗೆ ಮಾಹಿತಿ ನೀಡಲು ಸಿದ್ದತೆ ಕೈಗೊಳ್ಳಲಾಗುತ್ತಿದೆ.

ಪ್ರಾತ್ಯಕ್ಷಿಕೆ ನೀಡಲು ಅನುಕೂಲವಾಗಲೆಂದು ಕೃಷಿ ಮೇಳ ಮೈದಾನದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

Krishimela in GKVK Bangalore ಬಹುಪಯೋಗಿ ಚಾಲಕರಹಿತ ಟ್ಯಾಕ್ಟರ್

ಅಟೋಮ್ಯಾಟಿಕ್ ಟ್ರ್ಯಾಕ್ಟರ್ ಮೌಂಟೆಡ್ ಸ್ಪೇಯರ್ ಪ್ರದರ್ಶನವಿದ್ದು, ಚಾಲಕರಹಿತ ಟ್ರ್ಯಾಕ್ಟರ್ ನಿಂದ ದ್ರವ ರೂಪದ ರಸಗೊಬ್ಬರ, ಕಳೆ ನಾಶಕ, ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಯಾವ ರೀತಿ ಸಿಂಪಡಿಸಬಹುದು ಎಂಬುದನ್ನು ಪ್ರದರ್ಶಿಸಲಾಗುವುದು.

ಸಾಧನಗಳು

ರಾಗಿ ಬೀಜದೊಂದಿಗೆ ಗೊಬ್ಬರವನ್ನು ಸೇರಿಸಿ ಬಿತ್ತನೆ ಮಾಡುವ ಕೈಚಾಲಿತ ಕೂರಿಗೆ ಸಾಧನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಶೇಂಗಾ ಗಿಡ, ಮುಸುಕಿನ ಜೋಳದ ತೆನೆ, ಸೂರ್ಯಕಾಂತಿಯಿಂದ ಕಾಯಿ ಕಾಳುಗಳನ್ನು ಬೇರ್ಪಡಿಸುವ ಬಹು ಬೆಳೆ ಸಂಸ್ಕರಣಾ ಯಂತ್ರವನ್ನು ವಿಜ್ಞಾನಿಗಳು ಅವಷ್ಕರಿಸಿದ್ದಾರೆ . ಈ ಯಂತ್ರಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಸುಮಾರು 750 ಮಳಿಗೆಗಳಿಗೆ ಅವಕಾಶವಿರಲಿದ್ದು, ಕೃಷಿ ವಲಯದ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಬೆಂಗಳೂರು ಕೃಷಿ ವಿವಿ ಮತ್ತು ಸಂಬಂಧಿತ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಉತ್ಪನ್ನಕ್ಕೆ ಅವಕಾಶ ನೀಡುವ ಊರು – ಕೇರಿಯ ಉತ್ಪನ್ನಗಳೂ ಲಭಿಸಲಿದೆ. ನರ್ಸರಿ, ವಿವಿಧ ತಳಿಯ ಕುರಿ, ಕೋಳಿ, ಜಾನುವಾರುಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.

ಹೊಸ ತಳಿಗಳು 

ಮೇದಳದಲ್ಲಿ ವಿಶೇಷವಾಗಿ ಅಧಿಕ ಇಳುವರಿ ನೀಡುವ ನಾಲ್ಕು ಮೆಕ್ಕೆಜೋಳದ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಅಲಸಂಧೆ, ಜೋಳ, ಸೂರ್ಯಕಾಂತಿಯ ಹೊಸ ತಳಿಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೆ ಕಳೆ ನಿರ್ಮೂಲನೆ, ಕೀಟ ನಿಯಂತ್ರಕ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತದೆ.

ನೂತನ ತಾಂತ್ರಿಕತೆ

ಮುಸುಕಿನ ಜೋಳದಲ್ಲಿ ಕಳೆ ನಿರ್ವಹಣೆ, ರಸಗೊಬ್ಬರಗಳ ಸಮರ್ಪಕ ಬಳಕೆ, ತೇಗದಲ್ಲಿ ಅಂತರ ಬೆಳೆಯಾಗಿ ಮೇವಿನ ಹುಲ್ಲುಗಳು, ನೈಸರ್ಗಿಕ ಪದ್ಧತಿಯಲ್ಲಿ ಇಲಿಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೋರಕದ ನಿರ್ವಹಣೆ ಸೇರಿದಂತೆ ತಾಂತ್ರಿಕತೆಗಳು ಮೇಳದಲ್ಲಿ ಅನಾವರಣಗೊಳ್ಳಲಿದೆ.

ಮೇಳದಲ್ಲಿಮಳಿಗೆ ಕಾಯ್ದಿರಿಸುವಿಕೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080 23638883, 23330153ಗೆ ಸಂಪರ್ಕಿಸಬಹುದು ಎಂದು ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾಧಿಕಾರಿ ವಿ.ಎಲ್. ಮಧುಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಶೇಂಗಾವನ್ನು ಗಿಡದಿಂದ ಬೇರ್ಪಡಿಸುವ ಯಂತ್ರವನ್ನು ಆವಿಷ್ಕರಿಸಿದೆ. ಶೇಂಗಾ ಜೊತೆಗೆ ಸೂರ್ಯಕಾಂತಿ, ಮೆಕ್ಕೆಜೋಳ ಬೀಜಗಳನ್ನು ಬೇರ್ಪಡಿಸಲು ಈ ಯಂತ್ರಗಳನ್ನು ಬಳಸಬಹುದು. ಇದರೊಂದಿಗೆ ಅನೇಕ ಹಸು, ಹೋರಿ ತಳಿಗಳನ್ನು ಖರೀದಿಸಬಹುದು. ಹೈನುಗಾರಿಕೆ, ತೋಟಗಾರಿಕೆಗೆ ಇನ್ನಿತರ ವಾಣಿಜ್ಯ ಬೆಳೆಗಳಿಗೆ ಉಪಯುಕ್ತ ಸಲಹೆಗಳು ಇಲ್ಲಿ ನೀಡಲಾಗುತ್ತಿದೆ.

ಒಂದು ಹೆಕ್ಟೇರಿಗೆ80 ದಿನಗಳಲ್ಲಿ 24 ಕ್ವಿಂಟಾಲ್ ನಷ್ಟು ಇಳುವರಿ ನೀಡುವ ಕೆಬಿಎಸ್.ಎಚ್ 90 ಸೂರ್ಯಕಾಂತಿ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಿದೆ.

ಇದೇ ವೇಳೆಯಲ್ಲಿ ಕೃಷಿ ವಲಯದಲ್ಲಿ ಅಸಾಧಾರಣ ಸಾಧನೆ ಮಾಡಿದವರನ್ನು ವಿಶ್ವವಿದ್ಯಾಲಯ ಸನ್ಮಾನಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment