ಬೆಳೆ ಹಾನಿಯಾದ ರೈತರಿಗೆ ಎಕರೆಗೆ 20 ಸಾವಿರ ನೀಡಲು ಒತ್ತಾಯ

Written by Ramlinganna

Published on:

Crop loss 20 thousand compensation : ಮುಂಗಾರು ಬೆಳೆಗಳಾದ ಹೆಸರು ಉದ್ದು ಬೆಳೆಗಳು ಈ ತಿಂಗಳು ಸುರಿದ ಮಳೆಯಿಂದಾಗಿ ಹಾನಿಯಾಗಿವೆ. ಬೆಳೆ ಹಾನಿಯಾಗಿರುವ ರೈತರಿಗೆ ಎಕರೆಗೆ 20 ಸಾವಿರ ರೂಪಾಯಿ ನೀಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಒತ್ತಾಯಿಸಿದ್ದಾರೆ.

ಆಗಸ್ಟ್ ತಿಗಳಲ್ಲಿ ಸಾಮಾನ್ಯವಾಗಿ ಯಾವುದು ಸೈಕ್ಲೋನ್ ಬರುವುದಿಲ್ಲ ವಾಡಿಕೆಯಂತೆ ನವೆಂಬರ್ ನಲ್ಲಿ ಸೈಕ್ಲೋನ್ ಬರುತ್ತವೆ. ಆದರೆ ಈ ಸಲ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ರೈತರ ಶೇ. 60 ರಷ್ಟು  ಹೆಸರು ಹಾಗೂ ಶೇ. 80 ರಷ್ಟು ಉದ್ದು ಕಟಾವು ಹಂತದಲ್ಲಿದ್ದು,  ಸಂಪೂರ್ಣವಾಗಿ ನಾಶವಾಗಿದೆ. ಅಲ್ಲದೆ ಕೂಲಿ ದರ ಹೆಚ್ಚಳವಾಗಿರುತ್ತದೆ. ಬಿತ್ತನೆಗೆ ಹಾಕಿರುವ ಬಂಡವಾಳ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬೆಳೆಗಳ ಹಾನಿ ಸಮೀಕ್ಷೆ ಕೈಗೊಂಡು ರೈತರಿಗೆ ಕನಿಷ್ಟ ಎಕರಗೆ 20 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Crop loss 20 thousand compensation ಕೃಷಿ ಪಂಪ್ ಗೆ ಆಧಾರ್ ಲಿಂಕ್ ಮಾಡದಿದ್ರೆ ಸಬ್ಸಿಡಿ ಕಡಿತವಿಲ್ಲ

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಶೇ. 95 ರಷ್ಟು ಕೃಷಿ ಪಂಪ್ ಸೆಟ್ ಗಳಿಗೆ ಈಗಾಗಲೇ ಆಧಾರ್ ಲಿಂಕ್ ಆಗಿದೆ. ಲಿಂಕ್ ಮಾಡದವರ ಸಹಾಯಧನ ಕಡಿತದ ಚಿಂತನೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ ನಿಮ್ಮ ಹೊಲಕ್ಕೆ ಹೋಗಲು ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ

10 ಹೆಚ್.ಪಿ ವರೆಗಿನ ಕೃಷಿ  ಪಂಪ್ ಸೆಟ್ ಸ್ಥಾವರಗಳ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಹಾಯಧನ ತಡೆಹಿಡಿಯುವುದಾಗಿ ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚಿಸಿತ್ತು. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾರ್ಜ್, ರಾಜ್ಯದಲ್ಲಿರುವ ಒಟ್ಟು 34 ಲಕ್ಷ ಕೃಷಿ ಪಂಪ್ ಸೆಟ್ ಗಳ ಪೈಕಿ 32 ಲಕ್ಷ ಪಂಪ್ ಸೆಟ್ ಗೆ ಆಧಾರ್ ಲಿಂಕ್ಆಗಿದೆ. ಇದರಿಂದ ಅರ್ಹರಿಗೆ ಸಹಾಯಧನ ಹೋಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತದೆ. ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತದ ಉದ್ದೇಶವಿಲ್ಲ ಎಂದರು.

ಲಿಂಕ್ ಮಾಡದೆ ಇರುವವರಿಗೆ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಆಧಾರ್ ಲಿಂಕ್ ಮಾಡುವ ಮೂಲಕ ದುರ್ಬಳಕೆ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ಮೊಬೈಲ್ ನಲ್ಲಿ ಪಹಣಿ ಆಧಾರ್ ಲಿಂಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಹಣಿ ಆಧಾರ್ ಲಿಂಕ್ ಮಾಡಲು ಈ

https://landrecords.karnataka.gov.in/service4

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ನಾಗರಿಕ ಸೇವೆಗಳು (Bhoomi Citizen Services) ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಹಾಕಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ Send OTP ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ಬಾಕ್ಸ್ ನಲ್ಲಿ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಲಿಂಕ್ ಮಾಡಬೇಕು.

ನಕಲಿ ಭೂ ದಾಖಲೆಗಳ ಹಾವಳಿ ತಡೆಗೆ ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 15 ಲಕ್ಷ ಪಹಣಿ ಮಾಲಿಕರು ಆಧಾರ್ ಸಂಖ್ಯೆ ಜೋಡಣೆಗೆ ಓಪ್ಪಿಗೆ ಸೂಚಿಸಿದ್ದಾರೆ. ಅಭಿಯಾನದಲ್ಲಿ ಈವರೆಗೆ 8.80 ಲಕ್ಷ ಕೃಷಿ ಭೂಮಿ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

Leave a Comment