Grahalakshmi status: ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆಯಾಗಲಿದೆ. ಹೌದು, ಈಗ ಮಹಿಳೆಯರು ಹೆಚ್ಚು ದಿನ ಕಾಯಬೇಕಿಲ್ಲ. ಎರಡೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಯಾವ ಯಾವ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಇಲ್ಲೇ ಚೆಕ್ ಮಾಡಿ
ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣವನ್ನು ಇನ್ನೂ 2 ದಿನಗಳ ಒಳಗಾಗಿ ಖಾತೆಗೆ ವರ್ಗಾಯಿಸಲಾಗುವುದು.
ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ 2 ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ ಡಿಬಿಟಿ ತಾಂತ್ರಿಕ ಕಾರ್ಯಗಳು ನಡೆಯುತ್ತಿವೆ. ಇನ್ನೆರಡು ದಿನಗಳಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ.
Grahalakshmi status ಗೃಹಲಕ್ಷ್ಮೀ ಹಣ ಯಾರಿಗೆ ಜಮೆಯಾಗಲಿದೆ? ನಿಮಗೆಷ್ಟು ಜಮೆ ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಹಣ ಯಾರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.dbtkarnataka
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಡಿಬಿಟಿ ಆ್ಯಪ್ ತೆರೆದುಕೊಳ್ಳುತ್ತದೆ. ಅಥವಾ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡಿಬಿಟಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳೆಯ ಆಧಾರ್ ಕಾರ್ಡ್ ನಮೂದಿಸಬೇಕು.
ಐ ಅಗ್ರಿ ಬಾಕ್ಸ್ಆಯ್ಕೆ ಮಾಡಿಕೊಂಡು ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮಆಧಾರ್ ಕಾರ್ಡಿಗೆ ಓಟಿಪಿ ಸಂಖ್ಯೆ ಬರುವುದು. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ನಮೂದಿಸದ ನಂತರ ನೀವು ಪಿನ್ ನಂಬರ್ ಕ್ರಿಯೇಟ್ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಎಟಿಎಂ ಕಾರ್ಡ್ ನಂಬರ್ ನಂತೆ ನೀವು ಯಾವುದಾದರೂ ನಂಬರ್ ಗಳನ್ನು ನಮೂದಿಸಿ ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಭಾವಚಿತ್ರ ಕಾಣಿಸುತ್ತದೆ.
ಇದನ್ನೂ ಓದಿ : ಮುಟೇಶನ್ ಪ್ರಕಾರ ನಿಮಗೆಷ್ಟು ಎಕರೆ ಜಮೀನಿದೆ? ಇಲ್ಲೇ ಚೆಕ್ ಮಾಡಿ
ಅಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು, ನಿಮ್ಮ ಊರು, ನಿಮ್ಮ ಜನ್ಮ ದಿನಾಂಕ ಕಾಣಿಸುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಓಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಕಾಣುವ ಮೂರು ಆಯ್ಕೆಗಳಲ್ಲಿ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಯಾವ ಯಾವ ಯೋಜನೆಗಳಿಂದ ಹಣ ಜಮೆಯಾಗಿದೆ. ಅಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಿಂದ ಎಷ್ಟು ಹಣ ಜಮೆಯಾಗಿದೆ? ಯಾವಾಗ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
Grahalakshmi status ಗೃಹಲಕ್ಷ್ಮೀ ಯೋಜನೆ ಕೆಲವು ಅರ್ಹತೆಗಳು
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯುವ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ. ಕುಟುಂಬ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರಿಗೆ ಹಣ ಜಮೆಯಾಗುವುದಿಲ್ಲ.