sell fertilizer at the old rate ರಸಗೊಬ್ಬರಗಳ ಧಾರಣೆ ಎಪ್ರೀಲ್-2021 ರಿಂದ ಏರಿಕೆಯಾಗಿದೆ ಎಂಬ ಕಾರಣಕ್ಕೆ ಮಾರ್ಚ್-2021 ರ ವರೆಗೆ ಹೊಂದಿರುವ ಹಳೆಯ ರಸಗೊಬ್ಬರ ದಾಸ್ತಾನನ್ನು ಪರಿಷ್ಕೃತ ದರದ ಬದಲಾಗಿ ಹಳೆಯ ದರದಲ್ಲಿಯೆ ಮಾರಾಟ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಅವರು ಜಿಲ್ಲೆಯ ಎಲ್ಲಾ ಸಗಟು, ಕಿರುಕುಳ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದ್ದಾರೆ.
ವಿಶೇಷವಾಗಿ ಚಿಲ್ಲರೆ ಮಾರಾಟಗಾರರು ಪಾಯಿಂಟ್ ಆಫ್ ಸೇಲ್ ಉಪಕರಣದಲ್ಲಿ ಹಳೆಯ ಗೊಬ್ಬರ ದಾಸ್ತಾನನ್ನು ಪರಿಷ್ಕೃತವಲ್ಲದ ದರದಲ್ಲಿ ಮಾರಾಟ ಮಾಡಲು ತಿಳಿಸಿದೆ. ರೈತರಿಗೆ ಈ ದಾಸ್ತಾನನ್ನು ಆದ್ಯತೆ ಮೇಲೆ ಮಾರಾಟ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
sell fertilizer at the old rate ಹಳೆಯ ರಸಗೊಬ್ಬರ ಹಳೆಯ ದರದಲ್ಲಿಯೇ ಮಾರಾಟ ಮಾಡಲು ಸೂಚನೆ
ರಸಗೊಬ್ಬರಗಳ ಮಾರಾಟ ಮಳಿಗೆ ಮುಂದೆ ಗೋಚರವಾಗಿ ಕಾಣುವಂತೆ ದಾಸ್ತಾನು ಮತ್ತು ದರಗಳ ಬೋರ್ಡ್ ಪ್ರದರ್ಶಿಸುವುದು ಕಡ್ಡಾಯ. ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ ಎಂದು ರತೇಂದ್ರನಾಥ ಸುಗೂರು ಅವರು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತ ಬಾಂಧವರು ಎಂ.ಆರ್.ಪಿ. ದರದಲ್ಲಿಯೇ (ಚೀಲದ ಮೇಲೆ ಮುದ್ರಿಸಿದಂತೆ) ರಸಗೊಬ್ಬರಗಳನ್ನು ಖರೀದಿಸುವುದು ಮತ್ತು ಖರೀದಿಸಿದಕ್ಕೆ ಅಂಗಡಿಯವರಿAದ ರಸೀದಿ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.
ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಕೃಷಿ ಸಿಂಚಾಯಿ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಕಲಬುರಗಿ, ದಾವಣಗೆರೆ ಜಿಲ್ಲೆ ಹಾಗೂ ಹೊಸಪೇಟೆ ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಪ್ರಸಕ್ತ 2023-24ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತಬಳಕೆಗಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರಸಕ್ತ ಸಾಲಿಗೆ ಸಹಾಯಧನ ನೀಡಲು ಅರ್ಜಿ ಆಙ್ವಾನಿಸಲಾಗಿದೆ.ಹೌದು, ಕಲಬುರಗಿ ಹಾಗೂ ಕಮಲಾಪುರ ತಾಲೂಕಿನ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಸಾಮಾನ್ಯ ವರ್ಗದ ರೈತರಿಗೆ ಶೇ. 75 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯದನ ನೀಡಲು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಸಂಬಂಧಪಟ್ಟ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ತಾಲೂಕಿನ ರೈತರು ಮೊಬೈಲ್ ಸಂಖ್ಯೆ 9008101303, ಪಟ್ಟಣ 9164835917, ಫರಹತಾಬಾದ್ 9686214111, ಅವರಾದ (ಬಿ) 6366591631, ಮಹಾಗಾಂವ 9738416930 ಹಾಗೂ ಕಮಲಾಪುರ7259866723 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.