Fruits plant available ವಿವಿಧ ಹಣ್ಣಿನ ಸಸಿಗಳು ಇಲ್ಲಿ ಸಿಗುತ್ತವೆ

Written by Ramlinganna

Published on:

Fruits plant available: ತೋಟಗಾರಿಕೆ ಹಣ್ಮಿನ ಸಸಿಗಳು ಎಲ್ಲಿ ಸಿಗುತ್ತವೆ? ಯಾರನ್ನು ಕೇಳಬೇಕೆಂದುಕೊಂಡಿದ್ದೀರಾ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇಲ್ಲಿ ಕಡಿಮೆ ದರದಲ್ಲಿ ಹಣ್ಣಿನ ತೋಟಗಾರಿಕೆ ಅಲಂಕಾರಿಕ ಸಸಿಗಳು ಸಿಗುತ್ತವೆ. ರೈತರು, ಸಾರ್ವಜನಿಕರು ಈ ಸಸಿಗಳ ಸೌಲಭ್ಯ ಪಡೆದುಕೊಳ್ಳಭಹುದು. ತೋಟಗಾರಿಕೆ ಸಸಿಗಳು ಎಲ್ಲೆಲ್ಲಿ ಸಿಗುತ್ತವೆ? ಯಾರನ್ನು ಸಂಪರ್ಕಿಸಬೇಕೆಂದುಕೊಂಡಿದ್ದೀರೋ ಇಲ್ಲಿದೆ ನೋಡಿ ತಾಲೂಕುವಾರು ನಂಬರಗಳು.

Fruits plant available ಕಲಬುರಗಿ ಜಿಲ್ಲೆಯ ಯಾವ ಯಾವ ತಾಲೂಕಿನಲ್ಲಿ ಸಸಿಗಳು ಲಭ್ಯವಿದೆ?

ಕಲಬುರಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರ / ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ವಿವಿಧ ಹಣ್ಣಿನ ಕಸಿ / ಸಸಿಗಳು  ಹಾಗೂ ಅಲಂಕಾರಿಕ ಸಸಿಗಳು ಕುಂಡಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಇಲಾಖಾ ದರದಲ್ಲಿ ಮಾರಟಕ್ಕೆ ಲಭ್ಯವಿದೆ.

ಕಲಬುರಗಿ ಜಿಲ್ಲೆಯ ಆಸಕ್ತಿಯುಳ್ಳ ರೈತರು ಹಾಗೂ ಸಾರ್ವಜನಿಕರು ತಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಕ್ಷೇತ್ರ / ನರ್ಸರಿಗಳಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ (ಜಿಪಂ) ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಮದಾರ ಅವರು ತಿಳಿಸಿದ್ದಾರೆ.

ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಕ್ಷೇತ್ರ ನರ್ಸರಿಯಲ್ಲಿ ಮಾವು, ಸೀಬೆ, ನಿಂಬೆ, ನುಗ್ಗೆ, ಕರಿಬೇವು, ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಹಾಗೂ ಎರೆಹುಳು ಗೊಬ್ಬರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ 9008556488 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ತಾಲೂಕಿನ ಕೆಸರಟಗಿ ಕ್ಷೇತ್ರ ನರ್ಸರಿಯಲ್ಲಿ ಮಾವು, ಸೀಬೆ, ಸೀತಾಫಲ, ನಿಂಬೆ, ನುಗ್ಗೆ, ಕರಿಬೇವು, ತರಕಾರಿ ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಜಯಮಾಲ ಮೊಬೈಲ್ ನಂಬರ್ 9606401269 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ತಾಲೂಕಿನ ಮಾಲಗತ್ತಿ ಕ್ಷೇತ್ರ ನರ್ಸರಿಯಲ್ಲಿಸೀಬೆ, ನಂಬೆ, ನುಗ್ಗೆ, ಕರಿಬೇವು, ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ತಿಪ್ಪಮ್ಮ ಇವರ ಮೊಬೈಲ್ ಸಂಖ್ಯೆ 9060394179 ಇವರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವವರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ

ಅಫಜಲ್ಪುರ ತಾಲೂಕಿನ ಗೂಡೂರು ಕ್ಷೇತ್ರ ನರ್ಸರಿಯಲ್ಲಿ ಸೀಬೆ, ನಿಂಬೆ, ಕರಿಬೇವು ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ರಾಜೇಶ 7019727185 ಗೆ ಸಂಪರ್ಕಿಸಬೇಕು.

ಕಲಬುರಗಿ ತಾಲೂಕಿನ ಬಡೇಪೂರ ಕ್ಷೇತ್ರ ನರ್ಸರಿಯಲ್ಲಿ ನುಗ್ಗೆ, ಕರಿಬೇವು, ತೆಂಗು ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಸುರೇಶ 9591482423 ಗೆ ಸಂಪರ್ಕಿಸಬೇಕು.

ಕಲಬುರಗಿ ಐವಾನ್ ಶಾಹಿ ಕ್ಷೇತ್ರ ನರ್ಸರಿಯಲ್ಲಿ ಕರಿಬೇವು, ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಮಮತಾ ಇವರ ಮೊಬೈಲ್ ಸಂಖ್ಯೆ 9916812666 ಗೆ ಸಂಪರ್ಕಿಸಲು ಕೋರಲಾಗಿದೆ.

ಚಿತ್ತಾಪುರ ತಾಲೂಕಿನ ಗೋಳಾ (ಕೆ) ಕ್ಷೇತ್ರ ನರ್ಸರಿಯಲ್ಲಿ ತೆಂಗು, ನಿಂಬೆ, ಮತ್ತು ಕರಿಬೇವು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ರೇಣುಕಾ ಇವರ ಮೊಬೈಲ್ ಸಂಖ್ಯೆ  7892038243 ಗೆ ಸಂಪರ್ಕಿಸಬಹುದು.

ಸೇಡಂ ಕಚೇರಿ ನರ್ಸರಿಯಲ್ಲಿ ನುಗ್ಗೆ, ತೆಂಗು, ಮತ್ತು ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಮಮತಾ ಇವರ ಮೊಬೈಲ್ ಸಂಖ್ಯೆ 9538622086 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೇಕೆ ತಡ ಕೂಡಲೇ ನಿಮ್ಮ ಹತ್ತಿರದ ನರ್ಸರಿ ಕಚೇರಿಗೆ ತೆರಳಿ ಸಸಿಗಳನ್ನು ಪಡೆಯಬಹುದು. ಸಸಿಗಳು ಕಡಿಮೆ ದರದಲ್ಲಿಸಿಗುತ್ತವೆ.ಹಾಗಾಗಿ ಈ ಸಸಿಗಳನ್ನುಪಡೆದು ಹೆಚ್ಚು ಇಳುವರಿ ಪಡೆದುಕೊಳ್ಳಬಹುದು.

ಇಲ್ಲಿ ನಿಮಗೆ ಬೇಕಾದಷ್ಟು ಸಸಿಗಳು ಸಿಗುತ್ತವೆ. ಇದರೊಂದಿಗೆ ಅಲಂಕಾರಿಕ ಸಸಿಗಳು ಸಿಗುತ್ತವೆ.

Leave a Comment