ಈ ಜಿಲ್ಲೆಯ ರೈತರಿಗೆ ಜಮೆಯಾಯಿತು ಬೆಳೆ ವಿಮೆ ಹಣ

Written by Ramlinganna

Updated on:

78.39crore insurance amount released : ಸೆಪ್ಟೆಂಬರ್ ವೇಳೆಗೆ ರೈತರ ಖಾತೆಗೆ ಜಮಾ ಆಗಬೇಕಿದ್ದ ಬೆಳೆ ವಿಮಾ ಪರಿಹಾರ ಈಗ ಬಂದಿದೆ. ಒಟ್ಟು78.39 ಕೋಟಿ ರೂಪಾಯಿ ಜಿಲ್ಲೆಗೆ ಪರಿಹಾರ ಬಿಡುಗಡೆಯಾಗಿದೆ.

ಒಂದೆಡೆ ಬರಗಾಲ, ಮತ್ತೊಂದೆಡೆ ಅಡಕೆ ತೋಟಕ್ಕೆ ಬಂದ ಎಲೆಚುಕ್ಕೆ ರೋಗದಿಂದ ಈ ವರ್ಷ ರೈತರು ಕಂಗಾಲಾಗಿದ್ದರು. ಈಗ ಬೆಳೆ ವಿಮೆ ಹಣ ಬಿಡುಗಡೆಯಾಗಿದ್ದರಿಂದ ರೈತರಿಗೆ ಸಂತಸವಾಗಿದೆ.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳು ಮೆಣಸು ಕ್ಷೇತ್ರದ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟ 79,197 ಪ್ರಸ್ತಾವಗಳಿಗೆ ಒಟ್ಟು 78.39 ಕೋಟಿ ವಿಮಾ ಪರಿಹಾರ ಘೋಷಣೆ ಆಗಿದ್ದು, ಆಧಾರ್ ಲಿಂಕ್ ಆದ ರೈತರ ಉಳಿತಾಯ ಖಾತೆಗಳಿಗೆ ಬೆಳೆ ವಿಮೆಹಣ ಜಮೆಯಾಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಶಿರಸಿ ತಾಲೂಕಿನಲ್ಲಿ ಪ್ರತಿ ಗುಂಟೆಗೆ ಸರಾಸರಿ 414.66 ರಂತೆ 29.57 ಕೋಟಿ, ಸಿದ್ದಾಪೂರ ತಾಲೂಕಿನಲ್ಲಿ ಪ್ರತಿ ಗುಂಟೆಗೆ 328.60 ರಂತೆ 13.48 ಕೋಟಿ ರೂಪಾಯಿ, ಮಂಡಗೊಡ ತಾಲೂಕಿನಲ್ಲಿ ಪ್ರತಿ ಗುಂಟೆಗೆ 625.93 ರಂತೆ 9.26 ಕೋಟಿ ರೂಪಾಯಿ, ಯಲ್ಲಾಪೂರ ತಾಲೂಕಿನಲ್ಲಿ ಪ್ರತಿ ಗುಂಟೆಗೆ 458.88 ರಂತೆ 16.78 ಕೋಟಿ ರೂಪಾಯಿ, ಜೋಯಿಡಾ ತಾಲೂಕಿನಲ್ಲಿ ಪ್ರತಿ ಗುಂಟೆಗೆ 269.75 ರಂತೆ 1.31 ಕೋಟಿ ರೂಪಾಯಿ, ಅಂಕೋಲ ತಾಲೂಕಿನಲ್ಲಿ ಪ್ರತಿ ಗುಂಟೆಗೆ 471.96 ರಂತೆ 4.69 ಕೋಟಿ ರೂಪಾಯಿ, ಕುಮಟಾ ತಾಲೂಕಿನಲ್ಲಿ ಪ್ರತಿ ಗುಂಟೆಗೆ 191.73 ರಂತೆ 52.82 ಲಕ್ಷರೂಪಾಯಿ, ಹೊನ್ನಾವರ ತಾಲೂಕಿನಲ್ಲಿ ಪ್ರತಿ ಗುಂಟೆಗೆ 190.17 ರಂತೆ 1.76 ಕೋಟಿ ರೂಪಾಯಿ, ಭಟ್ಕಳ ತಾಲೂಕಿನಲ್ಲಿ ಪ್ರತಿ ಗುಂಟೆಗೆ 335.56 ರಂತೆ 1.06 ಕೋಟಿ ರೂಪಾಯಿ ಪರಿಹಾರ ದೊರಕಿದೆ. ಹಳಿಯಾಳ ಮತ್ತು ಕಾರವಾರ ತಾಲೂಕುಗಳಿಗೆ ಪರಿಹಾರ ದೊರೆತಿಲ್ಲ. ಮುಂದಿನ ಕಂತಿನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅಡಿಕೆ ಬೆಳೆಗೆ 75776  ಪ್ರಸ್ತಾವಗಳಿಗೆ 77.18 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ದೊರಕಿದ್ದು, ಕಾಳುಮೆಣಸು ಬೆಳೆಗೆ ಸಂಬಂಧಿಸಿ 3421 ಪ್ರಸ್ತಾವಗಳಿಗೆ 1.21 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ದೊರಕಿದೆ. ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆಯ ಪರಿಹಾರವು ಜಮೆ ಆಗಿರುವುದು ವರದಾನವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು 2022-23ನೇ ಸಾಲಿನ ಹಂಗಾಮಿಗೆ ಸಂಬಂಧಿಸಿ ಬೆಳೆವಿಮೆ ಹಣ ರೈತರಿಗೆ ಸಕಾಲದಲ್ಲಿ ದೊರೆತಿರುವುದು ಕೆಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶೃತಿಯಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೆ ಸ್ಪಂದಿಸಲು ಬ್ಯಾಂಕ್ ಸದಾ ಸಿದ್ದ ಎಂದು ತಿಳಿಸಿದ್ದಾರೆ.

78.39crore insurance amount released ನಿಮ್ಮ ಖಾತೆಗೆ ಬೆಳೆ ವಿಮೆ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ 2022 2023 ಆಯ್ಕೆ ಮಾಡಿಕೊಳ್ಳಬೇಕು.ನಂತರ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ Check status ಮೇಲೆ ಕ್ಲಿಕ್ ಮಾಡಬೇಕು. ನಂತರ ತೆರೆದುಕೊಳ್ಳುವ ಇನ್ನೊಂದು ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ತಮಗೆ ಹಣ ಜಮಯಾಗಿರುವುದನ್ನು ಚೆಕ್ ಮಾಡಬಹುದು.

Leave a Comment