ಹಸು ಎಮ್ಮೆ ಖರೀದಿಗೆ 1.20 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

1.20 lakh subsidy : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ ಸಬ್ಸಿಡಿಯಲ್ಲಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಕಲಬುರಗಿ ವತಿಯಿಂದ 2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಸಮುದಾಯಗಳ ನಿರುದ್ಯೋಗಿ ಯುವಕ, ಯುವತಿಯರ ಅಭಿವೃದ್ದಿಗಾಗಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಹಾಗೂ ಸ್ವ-ಸಹಾಯ ಗುಂಪುಗಳಿಂದ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ಕಾರ್ಯಕ್ರಮಗಳಾದ ಸ್ವಯಂ ಉದ್ಯೋಗ (ನೇರ ಸಾಲ) ಯೋಜನೆ, ಉದ್ಯಮ ಶೀಲತಾ ಅಭಿವೃದ್ದಿ (ಹೈನುಗಾರಿಕೆ) ಯೋಜನೆ,  ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ,  ಸಮಗ್ರ ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ  ಹಾಗೂ ಮೈಕ್ರೋಕ್ರೇಡಿಟ್(ಪ್ರೇರಣಾ) ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.

1.20 lakh subsidy for animal husbandry ಹೈನುಗಾರಿಕೆಗೆ ಸಹಾಯಧನ

ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ ಅಥವಾ ಎರಡು ಹಸುಗಳಿಗೆ ಘಟಕ ವೆಚ್ಚದ ಶೇ. 50 ರಷ್ಟು  ಅಂದರೆ ಗರಿಷ್ಠ 1.20 ಲಕ್ಷ ರೂಪಾಯಿಗಳ ಸಹಾಯಧನ ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ

ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸರಕು ವಾಹನ ಅಥವಾ ಟ್ಯಾಕ್ಸಿ ಹಳದಿ ಬೋರ್ಡ್ ವಾಹನ ಖರೀದಿಗೆ ಶೇ. 75 ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳ ಸಹಾಯಧನ ನೀಡಲಾಗುವುದು.

ಗಂಗಾಕಲ್ಯಾಣ ಯೋಜನೆ

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್ ಸೆಟ್ ಅಳವಡಿಸಿ ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.

ಘಟಕ ವೆಚ್ಚ 4.75 ಲಕ್ಷ ರೂಪಾಯಿ ಅದರಲ್ಲಿ  3.75 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುವುದು. 50 ಸಾವಿರ ರೂಪಾಯಿ ಸಾಲ ಸೇರಿರುತ್ತದೆ.

ನೇರ ಸಾಲ ಯೋಜನೆ

ಕಿರು ಆರ್ಥಿಕ ಚಟವಟಿಕೆಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುವುದು.

ಮೈಕ್ರೋ ಕ್ರೆಡಿಟ್ (ಪ್ರೇರಣಾ ಯೋಜನೆ)

ಮಹಿಳಾ ಸ್ವ ಸಹಾಯ ಸಂಘಗಳಿಗೆ ಕನಿಷ್ಠ 10 ಸದಸ್ಯರು ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕದ ವೆಚ್ಚ 5 ಲಕ್ಷ ರೂಪಾಯಿ  ಇರುತ್ತದೆ. ಇದರಲ್ಲಿ 2.50 ಲಕ್ಷ ರೂಪಾಯಿ ಸಬ್ಸಿಡಿ ಹಾಗೂ 2.50 ಲಕ್ಷ ರೂಪಾಯಿ ಶೇ. 4 ರಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.

ಇದನ್ನೂ ಓದಿ ನಿಮಗೆ ಗೊತ್ತಿಲ್ಲದೆ ನಿಮ್ಮ ಜಮೀನಿನ ಮೇಲೆ ಸಾಲಪಡೆದಿದ್ದಾರೆಯೇ? ಇಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಸಲಿಚ್ಛಿಸುವ ಪರಿಶಿಷ್ಟ ಪಂಗಡದ ಸಮುದಾಯಗಳ ಜನಾಂಗದ ಫಲಾಪೇಕ್ಷಿಗಳು ಸೇವಾಸಿಂಧು ಪೋರ್ಟಲ್

https://Sevasindhu.karnatak.gov.in

ವೆಬ್‌ಸೈಟ್‌ದಲ್ಲ್ಲಿ ಆನ್‌ಲೈನ್ ಮೂಲಕ 2025ರ ಸೆಪ್ಟೆಂಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು.  ಷರತ್ತುಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನೆಲಮಹಡಿಯಲ್ಲಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9482 9482300 400 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment