Your land survey number information ರೈತರು ತಮ್ಮ ಜಮೀನಿನ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಕೇವಲ ಸರ್ವೆ ನಂಬರ್ ಹಾಕಿದರೆ ಸಾಕು, ಆ ಸರ್ವೆ ನಂಬರಿನಲ್ಲಿರುವ ರೈತರ ಹೆಸರಿನೊಂದಿಗೆ ಯಾರ ಹೆಸರಿಗೆ ಎಷ್ಟು ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಇದೇನಪಾ ಸರ್ವೆ ನಂಬರ್ ನಮೂದಿಸಿ ಆ ಸರ್ವೆ ನಂಬರಿನಲ್ಲಿರುವ ಇತರ ರೈತರ ಹೆಸರಿಗೆ ಎಷ್ಟುಜಮೀನಿದೆ ಎಂಬುದನ್ನು ಅದು ಹೇಗೆ ಚೆಕ್ ಮಾಡಬೇಕೆಂಬುದು ಪ್ರಶ್ನೆ ಮೂಡುತ್ತಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಅತೀ ಸುಲಭವಾಗಿ ರೈತರು ಮನೆಯಲ್ಲಿಯೇ ಕುಳಿತು ಯಾರ ಸಹಾಯವೂ ಇಲ್ಲದೆ ತಮ್ಮ ಜಮೀನಿನ ಮಾಹಿತಿಯನ್ನು ಚೆಕ್ ಮಾಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ಸಿಗುತ್ತದೆ.
Your land survey number information ಮೊಬೈಲ್ ನಲ್ಲೇ ಪಹಣಿಯ (ಆರ್.ಟಿಸಿ) ಮಾಹಿತಿ ವೀಕ್ಷಿಸುವುದು ಹೇಗೆ?
ರೈತರು ಮನೆಯಲ್ಲಿಯೇ ಕುಳಿತು ತಮ್ಮ ಪಹಣಿಯ ಮಾಹಿತಿ ವೀಕ್ಷಿಸಲು ಈ
https://mahitikanaja.karnataka.gov.in/Revenue/RevenueRTCInfo?ServiceId=1020&Type=TABLE&DepartmentId=2066
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ತೆರೆದುಕೊಳ್ಳುತ್ತದೆ. ಇಲ್ಲಿ ರೈತರು ಕೇವಲ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡರೆ ಸಾಕು, ಎಲ್ಲಾ ಮಾಹಿತಿ ವೀಕ್ಷಿಸಬಹುದು. ಆರಂಭದಲ್ಲಿ ರೈತರು ಯಾವ ಜಿಲ್ಲೆಯವರಾಗಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಮೀನಿನ ಯಾವ ಪಹಣಿ ಸರ್ವೆ ನಂಬರ್ ವೀಕ್ಷಿಸಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. ಸರ್ವೆ ನಂಬರ್ ನಮೂದಿಸಿದ ನಂತರ ಸಲ್ಲಿಸಿ ಮೇಲೆ ಒತ್ತಬೇಕು. ಇದಾದ ಮೇಲೆ ಹಿಸ್ಸಾ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಲ್ಯಾಂಡ್ ಕೋಡ್ ಹಾಗೂ ಹಿಸ್ಸಾ ಸಂಖ್ಯೆ ಕಾಣುತ್ತದೆ. ಅದರ ಮುಂದುಗಡೆಯಿರುವ ಆರ್.ಟಿ.ಸಿ ಮಾಹಿತಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು.ನಿಮ್ಮ ಪಹಣಿಯ ಸರ್ವ ಮಾಹಿತಿಯೂಅಲ್ಲಿ ಕಾಣುತ್ತದೆ. ಈ ಪಹಣಿಯ ಮಾಹಿತಿ ಯಾವ ದಿನಾಂಕದವರೆಗೆ ಮಾನ್ಯವಾಗಿದೆ, ಆಯ್ಕೆ ಮಾಡಿದ ಸರ್ವೆ ನಂಬರ್ ಯಾವ ತಾಲೂಕಿನಲ್ಲಿದೆ.
ಯಾವ ಹೋಬಳಿ ಹಾಗೂ ಗ್ರಾಮದಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು. ರೈತರು ನಮೂದಿಸಿದ ಸರ್ವೆ ನಂಬರಿನಲ್ಲಿರುವ ವಿಸ್ತೀರ್ಣ ಚೆಕ್ ಮಾಡಬಹುದು. ಇದರ ಕೆಳಗಡೆ ರೈತರು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ.ಅವರ ಹೆಸರು, ತಂದೆಯ ಹೆಸರು ಅವರ ಹೆಸರಿಗೆ ಎಷ್ಟು ಜಮೀನು ಇದೆ, ಖಾತಾ ಸಂಖ್ಯೆಯ ಮಾಹಿತಿ ಸಹ ಕಾಣುತ್ತದೆ.
ಈ ಆರ್.ಟಿಸಿ ಮಾಹಿತಿಯಿಂದಾಗಿ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಯಾವ ರೈತರಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತದೆ.ಇದರೊಂದಿಗೆ ಅವರಿಗೆ ಎಷ್ಟು ಎಕರೆ ಜಮೀನಿದೆ ಎಂಬದನ್ನು ಸಹ ರೈತರುಮನೆಯಲ್ಲಿಯೇ ಕುಳಿತು ನೋಡಬಹುದು.
ಇದನ್ನೂ ಓದಿ : ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಸ್ಟೇಟಸ್
ಜಮೀನಿನ ಮಾಲಿಕರ ಹೆಸರಿನೊಂದಿಗೆ ಜಂಟಿಯಾಗಿ ಹೆಸರಿದ್ದರೆ ಯಾರ ಯಾರ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬುದು ಸಹ ಕಾಣುತ್ತದೆ. ಒಂದು ವೇಳೆ ರೈತರ ಹೆಸರು ಜಂಟಿಯಾಗಿದ್ದರೆ ಅದನ್ನು ಪ್ರತ್ಯೇಕವಾಗಿ ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಳ್ಳಬಹುದು. ಹೌದು, ಜಮೀನಿಗೆ ಪೋಡಿ ಮಾಡಲು ಅರ್ಜಿ ಸಲ್ಲಿಸಿದರೆ ಸಾಕು, ಪ್ರತ್ಯೇಕವಾಗಿ ರೈತರ ಹೆಸರಿಗೆ ಪೋಡಿಯಾಗುತ್ತದೆ. ಆಗ ಜಂಟಿಯಲ್ಲಿ ಹೆಸರು ಇರುವುದಿಲ್ಲ. ಜಂಟಿಯಲ್ಲಿ ಹೆಸರು ಇದ್ದರೆ ಕೆಲವು ಸಲ ಸಾಲ ಸೌಲಭ್ಯ ಪಡೆಯುವಾಗ ಅಡೆತಡೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಂಟಿಯಲ್ಲಿ ಹೆಸರಿದ್ದರೆ ವೈಯಕ್ತಿಕವಾಗಿ ತಮ್ಮ ಹೆಸರು ಬರಲು ಪೋಡಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.