ನಿಮ್ಮ ಜಮೀನಿನ ಮ್ಯಾಪ್ ಮೊಬೈಲಿನಲ್ಲಿ ಹೀಗೆ ಡೌನ್ಲೋಡ್ ಮಾಡಿ

Written by Ramlinganna

Updated on:

ರೈತರು ತಮ್ಮ ಜಮೀನಿನ ಮ್ಯಾಪ್ ಪಡೆಯಲು ಈಗ ಕಚೇರಿಗಳ ಮುಂದೆ ಹೋಗಿ ಕೈಕಟ್ಟಿ ನಿಂತುಕೊಳ್ಳಬೇಕಿಲ್ಲ. ಕಂದಾಯ ಇಲಾಖೆ, ನಾಡ ಕಚೇರಿಗಳಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ land Map mobile ನಲ್ಲಿ ಪಡೆದುಕೊಳ್ಳಬಹುದು.

ಯೂಟೂಬ್ ಚಾನೆಲಿಗೆ ಸಬಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದೇನಿದು? ತಾಲೂಕುಗಳು ಮ್ಯಾಪ್, ಜಿಲ್ಲೆಯ ಮ್ಯಾಪ್, ರಾಜ್ಯ , ದೇಶ ಹಾಗೂ ಜಗತ್ತಿನ ಮ್ಯಾಪ್ ಗ್ಲೋಬ್ ನೋಡಿದ್ದೇವು. ನಮ್ಮೂರಿನಲ್ಲಿರುವ ಜಮೀನಿನ ಮ್ಯಾಪ್ ಸಹ ಮೊಬೈಲ್ ನಲ್ಲಿ ಪಡೆಯುವುದು ಹೇಗಪ್ಪಾ ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ರೈತರಿಗೆ ಜಮೀನಿನ ಪಹಣಿ, ಮುಟೇಶನ್, ಖಾತಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳುವಂತೆ ಈಗ ತಮ್ಮೂರಿನ ಸುತ್ತಮುತ್ತಲಿರುವ ಜಮೀನುಗಳ ಮ್ಯಾಪ್ ಸಹ ಡೌನ್ಲೋಡ್ ಮಾಡಿಕೊಳ್ಳಬಹುದು.

land Map mobile ನಲ್ಲಿ ಡೌನ್ಲೋಡ್ ಹೇಗೆ ಮಾಡಬೇಕು?

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರೈತರಿಗೆ ತಮ್ಮ ಊರಿನ ಸುತ್ತಮುತ್ತಲಿರುವ ಜಮೀನುಗಳ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ ವ್ಯವಸ್ಥೆ ಮಾಡಿದೆ. ರೈತರು ಈ ಮ್ಯಾಪ್ ಮೂಲಕ ತಮ್ಮ ಜಮೀನುಗಳ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳು, ತಮ್ಮೂರಿನ ಸುತ್ತಮುತ್ತಲಿರುವ ಕೆರೆಕಟ್ಟೆಗಳು, ಬಂಡಿದಾರಿ, ಕಾಲುದಾರಿ, ಸೇರಿದಂತೆ ಇನ್ನಿತರ ಮಾಹಿತಿ ಪಡೆಯಹಬುದು.

ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡುವುದು ಹೇಗೆ?

ರೈತರು ತಮ್ಮೂರಿನ ಸುತ್ತಮುತ್ತಲಿರುವ ಜಮೀನುಗಳ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ

https://landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ರೆವುನ್ಯೂ ಮ್ಯಾಪ್ಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಜಿಲ್ಲೆಗಳು, ತಾಲೂಕು, ಹೋಬಳಿ, ಗ್ರಾಮ, ಪಿಡಿಎಫ್ ಫೈಲ್ ಹೀಗೆ ಆಯ್ಕೆಗಳು ಕಾಣುತ್ತದೆ. ರೆವುನ್ಯೂ ಮ್ಯಾಪ್ಸ್ ಕೆಳಗಡೆ ಕಾಣುವ Disrict ಕಾಲಂನಲ್ಲಿ ನೀವು ಯಾವ ಜಿಲ್ಲೆಗೆ ಸೇರಿದ್ದೀರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣುತ್ತದೆ.  Map Types ನಲ್ಲಿ cadastral maps ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಊರಿನ ಮುಂದುಗಡೆಯಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮೂರಿನ ಮ್ಯಾಪ್ ಓಪನ್ ಆಗುತ್ತದೆ.

ಊರಿನ ಮ್ಯಾಪ್ ನಲ್ಲಿ ಯಾವ ಯಾವ ಮಹಿತಿ ಇರುತ್ತದೆ?

ನಿಮ್ಮೂರಿನ ಮ್ಯಾಪ್ ನಲ್ಲಿ ನಿಮ್ಮ ಗ್ರಾಮದ ಸುತ್ತಮುತ್ತಲಿರುವ ಜಮೀನುಗಳ ಸರ್ವೆ ನಂಬರ್ ಕಾಣುತ್ತವೆ. ಸ್ವಲ್ಪ ಝೂಮ್ ಮಾಡಿ ನೋಡಿದರೆ ಸಾಕು, ನಿಮ್ಮ ಜಮೀನಿನ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳು ಕಾಣುತ್ತವೆ.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ- ನಿಮ್ಮ ಹೆಸರಿದೆಯೇ? ಇಲ್ಲೆ ಚೆಕ್ ಮಾಡಿ

ನಿಮ್ಮ ಊರಿನಿಂದ ನಿಮ್ಮ ಊರಿನ ಅಕ್ಕಪಕ್ಕದಲ್ಲಿರುವ ಊರುಗಳಿಗೆ ಹೋಗುವ ಮಾರ್ಗ ಕಾಣಿಸುತ್ತದೆ. ಅಲ್ಲಿ ಗ್ರಾಮಗಳ ಹೆಸರು ಸಹ ನಮೂದಿಸಲಾಗಿರುತ್ತದೆ.  ನಿಮ್ಮೂರಿನ ಸುತ್ತಮುತ್ತಲು ಎಲ್ಲೆಲ್ಲಿ ಗುಡ್ಡಬೆಟ್ಟಗಳಿವೆ ಎಂಬುದನ್ನು ನಮೂದಿಸಲಾಗಿರುತ್ತದೆ.  ನಿಮ್ಮೂರಿನ ಗಡಿರೇಖೆಯನ್ನು ಎಳೆಯಲಾಗಿರುತ್ತದೆ. ನಿಮ್ಮೂರಿನ ಯಾವ ಸರ್ವೆ ನಂಬರ್ ಪಕ್ಕದಲ್ಲಿ ಗಡಿರೇಖೆ ಇದೆಯೋ ನೀವು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಸರ್ವೆ ನಂಬರ್ ಗಡಿ, ಕಾಲುದಾರಿ ಯಾವ ಜಮೀನುಗಳ ಮೂಲಕ ಹಾದು ಹೋಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಅದೇ ರೀತಿ ಬಂಡಿದಾರಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ.

ನಿಮ್ಮೂರಿನ ಸುತ್ತಮುತ್ತ ಹಳ್ಳ, ನದಿ, ಕೆರೆಗಳಿದ್ದರೂ ಎಲ್ಲೆಲ್ಲಿ ನದಿ ಕೆರೆಗಳಿವೆ? ಚೆಕ್ ಮಾಡಬಹುದು. ಇದೇ ರೀತಿ ನೀರು ಹಳ್ಳದ ನೀರು ಯಾವ ಮಾರ್ಗದಿಂದ ಯಾವ ಮಾರ್ಗದ ಕಡೆ ಹರಿದು ಹೋಗುತ್ತಿದೆ ಅದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಮಾಡಬಹುದು. ನಿಮ್ಮ ಊರಿನಲ್ಲಿ ಹಳೆಯ ದೇವಸ್ಥಾನವಿದ್ದರೆ ಯಾವ ಸ್ಥಳದಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು.

Leave a Comment