ಪಿಎಂ ಕಿಸಾನ್ ಹಣ ನಿಮಗೇಕೆ ಜಮೆಯಾಗಿಲ್ಲ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Why these farmers not received pmkisan money ಪಿಎಂ ಕಿಸಾನ್ ಯೋಜನೆಯ 16ನೇ ಕಂತು ಕೆಲವು ರೈತರಿಗೆ ಜಮೆಯಾಗಿದ್ದರೆ, ಇನ್ನೂ ಕೆಲವು ರೈತರಿಗೇಕೆ ಜಮೆಯಾಗಿಲ್ಲ ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರಿಗೆ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಆದರೆ ಪಿಎಂ ಕಿಸಾನ್ ಯೋಜನೆಗೆ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿದ್ದರೂ ಜಮೆಯಾಗಿಲ್ಲ. ಇನ್ನೂ ಕೆಲವು ರೈತರಿಗೆ ಕಳೆದ 15ನೇ ಕಂತಿನ ಹಣ ಜಮೆಯಾಗಿದೆ. ಆದರೆ 16ನೇ ಕಂತಿನ ಹಣ ಜಮೆಯಾಗಿಲ್ಲ? ಏಕೆ ಹೀಗಾಗಿದೆ? ಇದಕ್ಕೆ ಕಾರಣವೇನು? ಜಮೆಯಾಗದೆ ಇರುವ ಕಾರಣ ತಿಳಿದುಕೊಳ್ಳಬೇಕೇ? ಈ ಕೆಲಸ ಮಾಡಿ.

Why these farmers not received pmkisan money ಪಿಎಂ ಕಿಸಾನ್ ಹಣ ನಿಮಗೇಕೆ ಜಮೆಯಾಗಿಲ್ಲ? ಹೀಗೆ ಚೆಕ್ ಮಾಡಿ

ರೈತರು ತಮಗೆ ಪಿಎಂ ಕಿಸಾನ್ ಏಕೆ ಜಮೆಯಾಗಿಲ್ಲವೆಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Enter value ಕೆಳಗಡೆ ತಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾಕೋಡ್ ಹಾಕಿ Get Data ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಪಿಎಂ ಕಿಸಾನ್ ಹಣ ಏಕೆ ಜಮೆಯಾಗಿಲ್ಲವೆಂಬುದನ್ನು ಚೆಕ್ ಮಾಡಬಹುದು.

ಅಲ್ಲಿ ತೆರೆದುಕೊಳ್ಳುವ ಬೆನಿಫಿಶಿಯರಿ ಸ್ಟೇಟಸ್ ಪೇಜ್ ನಲ್ಲಿ ರೈತರು ಮೊದಲು ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದು ಚೆಕ್ ಮಾಡಬೇಕು. ಇಕೆವೈಸಿ ಡನ್ ಎದುರುಗಡೆ Yes ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು. ಅಲ್ಲಿ ನಿಮಗೆ ನೋ ಇದ್ದರೆ ನಿಮ್ಮ ಆಧಾರ್ ನಂಬರ್ ಇಕೆವೈಸಿ ಆಗಿಲ್ಲವೆಂದರ್ಥ. ಇಕೆವೈಸಿ ನೋ ಇದ್ದರೆ ರೈತರು ಕೂಡಲೇ ಹತ್ತಿರದ ಗ್ರಾಮ ಒನ್ ಅಥವಾ ಸಿಎಸ್ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ : ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ

ನಿಮ್ಮ ಆಧಾರ್ ನಂಬರ್, ಜಮೀನಿನ ಪಹಣಿ (ಉತಾರ) ಹಾಗೂ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿಯೊಂದಿಗೆ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬೇಕು.

ಎಲಿಜಿಬಿಲಿಟಿ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಯೋಜನೆಗೆ ಎಲಿಜಿಬಿಲಿಟಿ ಅಂದರೆ ಅರ್ಹತೆ ಪಡೆದಿದ್ದಾರೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು. ಎಲಿಜಿಬಿಲಿಟ್ ನೋ ಇದ್ದರೆ ನೀವೇಕೆ ಅರ್ಹತೆ ಪಡೆದಿಲ್ಲವೆಂಬುದು ಅಲ್ಲಿ ಬರೆಯಲಾಗಿರುತ್ತದೆ.

ಲ್ಯಾಂಡ್ ಸೀಡ್ಲಿಂಗ್ ಯಸ್ ಆರ್ ನೋ ಚೆಕ್ ಮಾಡಿ

ರೈತರು ಲ್ಯಾಂಡ್ ಸೀಡಿಂಗ್ ಎದುರುಗಡೆ ಒಂದು ವೇಳೆ No ಇದ್ದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲ. ಏಕೆಂದರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ದಾಖಲೆಯಲ್ಲಿ ಹೆಸರು ಒಂದೇ ರೀತಿಯಿರುವುದಿಲ್ಲ. ಹೆಸರು ಹೊಂದಾಣಿಕೆಯಾಗದರೆ ಇರುವುದರಿಂದ ನಿಮಗೆ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿರುತ್ತದೆ. ಹಾಗಾಗಿ ರೈತರು  ತಮ್ಮ ಜಮೀನಿನ ಉತಾರ ಅಥವಾ ಪಹಣಿಯಲ್ಲಿ ಆಧಾರ್ ಕಾರ್ಡ್ ನಲ್ಲಿ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ತರಹ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು.

ಇಕೆವೈಸಿ, ಎಲಿಜಿಬಿಲಿಟಿ ಲ್ಯಾಂಡ್ ಸೀಡಿಂಗ್ ಈ ಮೂರು ಕಡೆ ಯಸ್ ಇದ್ದರೂ ನಿಮ್ಮ ಕುಟಂಬದ ಸರ್ಕಾರಿ ನೌಕರರು ಯಾರೂ ಇಲ್ಲದಿದ್ದರೆ ಹಾಗೂ ನೀವು 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ (Pension) ಪಡೆಯುತ್ತಿಲ್ಲವಾದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೆಂದರೆ ನೀವು ಉಚಿತ ಸಹಾಯವಾಣಿಗೆ ಕರೆ ಮಾಡಬೇಕು. ಪಿಎಂ ಕಿಸಾನ್ ಉಚಿತ ಸಹಾಯವಾಣಿ 155261 ಅಥವಾ 01124300606ಗೆ ಕರೆ ಮಾಡಬಹುದು.

Leave a Comment