ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಸಿಹಿಸುದ್ದಿಯನ್ನು ನೀಡಿದೆ. ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ರಾಜ್ಯದ ಜನತೆಗೆ ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವುದಕ್ಕಾಗಿ ಜನಸೇವಕ ಯೋಜನೆ ( janasevaka scheme )ಯನ್ನು ಆರಂಭಿಸಿದೆ. ಹೌದು, ಇನ್ಮುಂದೆ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಕಚೇರಿಗಳ ಮುಂದೆ ಸರದಿಸಾಲಿನಲ್ಲಿ ನಿಲ್ಲಬೇಕಿಲ್ಲ, ಮನೆಯಿಂದಲೇ ಸರ್ಕಾರಿ ಸೇವೆಗಳನ್ನು ಪಡೆಯಬಹುದು. ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆಯನ್ನು ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಮೈಸೂರು, ಹುಬ್ಬಳ್ಳಿ, ಮಂಗಳೂರು, ಧಾರವಾಡ ಸೇರಿದಂತೆ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
janasevaka scheme ಯಲ್ಲಿ ಯಾವ ಯಾವ ಸೌಲಭ್ಯಗಳಿವೆ?
ಜನಸೇವಕ ಯೋಜನೆಯಡಿಯಲ್ಲಿ ನಾಗರಿಕರು ತಮ್ಮ ಕುಂದುಕೊರತೆಗಳನ್ನು ನಿವಾರಿಸಲು ಮತ್ತೆ ಮತ್ತೆ ಕಚೇರಿಗಳಿಗೆ ಹೋಗಬೇಕಿಲ್ಲ. 080 44554455 ಸಹಾಯವಾಣಿಗೆ ಕರೆ ಮಾಡುವ ಮೂಲಕ ಅಥವಾ www.janasevaka.karnataka.gov.in ಜಾಲತಾಣವನ್ನು ಸಂಪರ್ಕಿಸುವ ಮೂಲಕ ಅಥವಾ ಮೊಬೈಲ್ ಒನ್ ಮೂಲಕ ಮನೆಯಿಂದಲೇ ಸರ್ಕಾರಿ ಸೇವೆಗಳನ್ನು ಬುಕ್ ಪಡೆಯಬಹುದು.
ಪ್ರಸ್ತುತ 8 ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಪಡಿತರ ಚೀಟಿ, ಆಧಾರ್ ಕಾರ್, ಆರೋಗ್ಯ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಬಿಬಿಎಂಪಿ ಖಾತಾ ಸೇವೆಗಳು, ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಕಾರ್ಮಿಕ ಇಲಾಖೆ, ವಿಧವಾ ವೇತನ, ವೃದ್ಯಾಪ್ಯ ವೇತನ ಸೇರಿದಂತೆ ಒಟ್ಟು 58 ಸೇವೆಗಳನ್ನು ಜನಸೇವಕ ಯೋಜನೆಯಡಿ ರಾಜ್ಯದ ಜನತೆಗೆ ನೀಡಲಾಗುವುದು.
ಜನಸೇವಕ ಮನೆಬಾಗಿಲಗೆ ಹೇಗೆ ಬರಲಿದ್ದಾರೆ
ಜನಸೇವಕ ಸಹಾಯವಾಣಿ ಅಥವಾ ವೆಬ್ ಸ್ಟೈಟ್ ನಲ್ಲಿ ತಾವು ಪಡೆಯುವ ಸರ್ಕಾರಿ ಸೇವೆಗಳನ್ನು ಬುಕ್ ಮಾಡಿದ ನಂತರ ಸರ್ಕಾರವು ನೇಮಿಸಿದ ಜನಸೇವಕ ನಿಗದಿಯಾದ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳೊಂದಿಗೆ ಜನರ ಮನೆ ಬಾಗಿಲಿಗೆ ಬರಲಿದ್ದಾರೆ.ಅರ್ಜಿದಾರ ಕೋರಿದ ಸೇವೆಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಪಡೆದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೇವಾ ಸಿಂಧು ತಂತ್ರಾಂಶದ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಾರೆ. ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರ ಬಯಸಿದ ಸೇವೆಯನ್ನು ನಾಗರಿಕರು ಸೂಚಿಸಿದ ದಿನಾಂಕದಂದು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು.
janasevaka scheme ಗೆ ನಿಗದಿಪಡಿಸಲಾದ ಶುಲ್ಕ
ಈ ಯೋಜನೆಯ ಸೇವೆಯನ್ನು ಪಡೆಯಲು ನಾಗರಿಕರು 115 ರೂಪಾಯಿ ಹಾಗೂ ಇಲಾಖೆಯ ಶುಲ್ಕ ಮತ್ತು ಮುದ್ರಣ ಶುಲ್ಕ ಪಾವತಿಸಬೇಕಾಗುತ್ತದೆ. ನಾಗರಿಕರು ಅನುಕೂಲಕರ ಸಮಯದ ಪ್ರಕಾರ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು. ಇಲಾಖಾ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಜನಸೇವಕ ಯೋಜನೆಯಿಂದ ನಾಗರಿಕರಿಗೆ ನಾಗರಿಕ ಸೇವಾ ಕೇಂದ್ರಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.ಈ ಯೋಜನೆಯು ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರು, ದೈಹಿಕ ಅಂಗವಿಕಲರಿಗೆ ಹೆಚ್ಚು ಸಹಾಯವಾಗುತ್ತದೆ. ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
ನಾಗರಿಕರು ಸ್ಲಾಟ್ ಬುಕ್ ಮಾಡಲು https://www.janasevaka.karnataka.gov.in/report_bookslot/bookslot_kn.html
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಜನಸೇವಕ ಪೇಜ್ ನ ಇನ್ನೊಂದು ಪುಟ ತೆರೆಯುಲ್ಪಡುತ್ತದೆ. ಅಲ್ಲಿ ನೀವು ಯಾವ ಸೌಲಭ್ಯ ಪಡೆದುಕೊಳ್ಳಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ ಸೌಲಭ್ಯ ಪಡೆಯಬಹುದು.
ಇದನ್ನೂ ಓದಿ Annabhagya ಹಣ ಈ ಲಿಸ್ಟ್ ನಲ್ಲಿರುವವರಿಗೆ ಜಮೆ: ಚೆಕ್ ಮಾಡಿ
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದು. ಜನಸೇವಕ ಪೇಜ್ ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಎಂಬ ಲಿಂಕ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿ ಅಪ್ಲಿಕೇಷನ್ ನಂಬರ್ ನಮೂದಿಸಿ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಬಹುದು.