ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಮಂಡ್ಯ, ಮೈಸೂರು ಕೊಡಗಿನಲ್ಲಿ ಇಂದು (ಮಾರ್ಚ್ 28) ಮಳೆಯಾಗುವ ಸಾದ್ಯತೆಯಿದೆ (Weather forecast five days rain alert) ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗಿನಲ್ಲಿ 29 ರಂದು ಸಹ ಅಲ್ಲಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು, ಮಂಡ್ಯದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಉತ್ತರ ಕನ್ನಡ, ದಕ್ಷಿಣಕನ್ನಡ, ಬೆಳಗಾವಿ, ಬೆಂಗಳೂರು, ಹಾಸನ, ರಾಮನಗರ, ಬಿಜಾಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಗದಗ, ದಾವಣಗೇರೆ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಎಂದಿನಂತೆ ಒಣಹವೆ ಮುಂದುವರೆಯಲಿದೆ.
ಇನ್ನೂ ಎರಡು ದಿನ ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಇದೇ ರೀತಿಯ ಮಳೆ ಸುರಿಯುವ ನಿರೀಕ್ಷೆ ಇದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಜನವರಿ 8ರ ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಜಿಲ್ಲೆಯಲ್ಲೇ ಗರಿಷ್ಠ 54 ಮಿ.ಮೀ ಮಳೆಯಾಗಿದೆ.
ಅಕಾಲಿಕಮಳೆಯಿಂದ ಮಂಗಳೂರು ನಗರ, ಉಳ್ಳಾಲ ಸೇರಿದಂತೆ ನಗರ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ದಿಢೀರನೆ ಮಳೆ ಸುರಿದಿದ್ದರಿಂದ ಅನೇಕ ಸಾಮಾಜಿಕ, ಧಾರ್ಮಿಕ, ಶುಭ ಕಾರ್ಯಗಳಿಗೆ ಸಮಸ್ಯೆ ಉಂಟಾಯಿತು.
ಇದೀಗ ಜಿಲ್ಲಾದ್ಯಂತ ಅಡಕೆ ಒಣಗಿಸುವ ಸಮಯವಾಗಿದ್ದರಿಂದ ಅಡಕೆ ಬೆಳೆಗಾರರನ್ನು ಮಳೆ ತೀವ್ರ ಸಂಕಷ್ಟಕ್ಕೆ ದೂಡಿದೆ.ಇನ್ನೂ ತರಕಾರಿ ಹೂಗಳು ಮಳೆಗೆ ಹಾಳಾಗುವುದರಿಂದ ರೈತರು ಬವಣೆ ಪಡವಂತಾಗಿದೆ.
weather ಉಡುಪಿಯಲ್ಲಿ ಉತ್ತಮ ಮಳೆ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಮಾಮ ಗುರುವಾರ ಮುಂಜಾನೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 15.60 ಮಿ.ಮೀ ಮಳೆಯಾಗಿದೆ
ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಹಾಗಾಗಿ ಕರಾವಳಿಯಲ್ಲಿು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಅಕಾಲಿಕ ಮಳೆಯಿಂದ ವಿಶೇಷವಾಗಿ ಅಡಕೆ ಬೆಳೆಗಾರರಿಗೆ ನಷ್ಟವಾಗಿದೆ. ಒಣಗಲು ಹಾಕಿದ್ದ ಅಡಕೆ, ಕರಿಮೆಣಸು, ಧಾನ್ಯಗಳು ಮಳೆಯಿಂದ ನೆನೆದಿದ್ದು, ಹಾಳಾಗುವ ಸಾಧ್ಯತೆಯಿದೆ.
ನಿಮ್ಮ ಜಿಲ್ಲೆಯಲ್ಲಿ ಇಂದು ಮಳೆಯಾಗುವುದೇ?
ನಿಮ್ಮೂರಿನಲ್ಲಿ ಇಂದು ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ವರಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಬಹುದು. ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿ ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೈತರು ಸಹಾಯವಾಣಿ ನಂಬರ್ ಗೆ ಕರೆ ಮಾಡಿ ಹವಾಮಾನ ವರದಿಯನ್ನು ಪಡೆಯಬಹುದು. ಹೌದು ಈಗಲೇ ಕರೆ ಮಾಡಿ ನಿಮ್ಮೂರಿನ ಮಳೆಯ ಮಾಹಿತಿ ಪಡೆಯಿರಿ