ರೈತರಿಗೆ ಎಷ್ಟು ಸಾಲಮನ್ನಾ ಆಗಬೇಕು? ಇಲ್ಲೇ ಕಾಮೆಂಟ್ ಮಾಡಿ ತಿಳಿಸಿ

Written by Ramlinganna

Updated on:

agriculture crop loan waive : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗಾಗಿ ಸರ್ಕಾರವು ಎರಡು ಲಕ್ಷ ರೂಪಾಯಿಯವರೆಗೆ ಕೃಷಿ ಸಾಲಮನ್ನಾ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

ಅವರು ಗುರುವಾರ ಬರಗಾಲ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮತನಾಡಿದ ಅವರು ಸರ್ಕಾರಕ್ಕೆ ಪ್ರಚಾರದ ಮೇಲೆ ಇರುವ ಆಸಕ್ತಿ ರೈತರ ಬಗ್ಗೆ ಇಲ್ಲ. ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಅಸಡ್ಡೆತನ ಆಶ್ಚರ್ಯವನ್ನುಂಟು ಮಡಿದೆ. ಕಳೆದ ಆರು ತಿಂಗಳಿಂದ ಕೇವಲ ಗ್ಯಾರೆಂಟಿ ಯೋಜನೆಗಳ ಬಗ್ಗೆೆ ಕೆಲಸ ಮಾಡುತ್ತಿರುವ ಈ ಸರ್ಕಾರ, ಆರ್ಥಿಕ ಹೊರೆಯನ್ನುತನ್ನ ಮೇಲೆ ಎಳೆದುಕೊಳ್ಳುತ್ತಿದೆ. ಬೆಳೆ ನಾಶದಿಂದ ಅತೀವ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಸಾಲಮನ್ನಾ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಬರಪೀಡಿತ 216 ತಾಲೂಕುಗಳ ನಷ್ಟದ ಬಗ್ಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರ ನೀಡಿರುವ ಅಂದಾಜಿನ ಪ್ರಕಾರ ರೈತರು ಅನುಭವಿಸಿರುವ ಬೆಳೆ ನಷ್ಟದ ಶೇ. 10 ರಷ್ಟು ಬೆಳೆ ನಷ್ಟಕ್ಕೂ ಪರಿಹಾರ ಕೊಡಲಾಗುವುದಿಲ್ಲ. ಹೀಗಾಗಿ ರೈತರು ಸರ್ಕಾರದಿಂದ ನೆರವು ಬಯಸುತ್ತಿದ್ದಾರೆ ಎಂದರು.

agriculture crop loan waive 2018 ರ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಘೋಷಣೆ ಮಾಡಿದ್ದರು. ಆಗ ಕೆಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕರೆ ಇನ್ನೂ ಕೆಲವರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿರಲಿಲ್ಲ. ಆಗ ನೀವು ಸಾಲಮನ್ನಾ ಪಟ್ಟಿಯಲ್ಲಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ವಾಣಿಜ್ಯ ಬ್ಯಾಂಕ್ ಸಾಲಮನ್ನಾ ವರದಿ ಕೆಳಗಡೆ ರೈತ ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು.ನಂತರ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರಿಗೆ ಸಾಲಮನ್ನಾ ಸಿಕ್ಕಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯೇ ಹಾಗೂ ನಿಮಗೆಷ್ಟು ಸಾಲಮನ್ನಾ ಸಿಕ್ಕಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು

ಈ ವರ್ಷ ಸಾಲಮನ್ನಾ ಮಾಡಬೇಕೋ ಇಲ್ಲವೋ? ಎಷ್ಟು ಸಾಲಮನ್ನಾ ಮಾಡಬೇಕು? ಕಾಮೆಂಟ್ ಮಾಡಿ

ತಮಗೆಲ್ಲಾ ಗೊತ್ತಿದ್ದ ಹಾಗೆ ಪ್ರಸಕ್ತ ವರ್ಷ ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಾಗೂ ಬರಗಾಲ ಘೋಷಣೆಯಾದರೂ ಬರಗಾಲ ಪರಿಹಾರ ಹಣ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ನೀಡಲು ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ತಿಂಗಳು ರಾಜ್ಯದ ರೈತರಿಗೆ 2 ಸಾವಿರ ರೂಪಾಯಿ ಬರಗಾಲ ಹಣ ಜಮೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ :  ರೈತರಿಗೆ 2 ಸಾವಿರ ಬೆಳೆ ನಷ್ಟ ಪರಿಹಾರ ಜಮೆ ಸಿಎಂ ಸಿದ್ದರಾಮಯ್ಯ

ಈ ವರ್ಷ ರೈತರಿಗೆ ಎಷ್ಟು ಸಾಲಮನ್ನಾಮಾಡಬೇಕು ಯಾವಾಗ ಮಾಡಬೇಕೆಂಬುದರ ಕುರಿತು ಕೆಳಗಡೆ ಕಾಮೆಂಟ್ ನಲ್ಲಿ ತಿಳಿಸಿ. ನಿಮ್ಮ ಹೆಸರು ಬರೆದು ರಿಪ್ಲೈ ಮಾಡಬಹುದು.ರೈತರ ಸಂಕಷ್ಟ ಸರ್ಕಾರಕ್ಕೆ ಮುಟ್ಟಲಿ ಎಂಬ ನಮ್ಮ ಆಶಯ. ಹಾಗಾಗಿ ಕಾಮೆಂಟ್ ಮಾಡಿ ನಿಮ್ಮ ಸಂದೇಶ ಸರ್ಕಾರಕ್ಕೆ ಮುಟ್ಟಿಸಬಹುದು. ಇನ್ನೇಕೆ ತಡ? ಈಗಲೇ ಸಾಲಮನ್ನಾ ಕುರಿತು ಕಾಮೆಂಟ್ ಮಾಡಬಹುದು.

ರೈತರ 2 ಲಕ್ಷ ರೂಪಾಯಿ ಸಾಲಮನ್ನಾಕ್ಕೆ ಆರ್. ಅಶೋಕ್ ಆಗ್ರಹ    

ರಾಜ್ಯದಲ್ಲಿ ಬರ ಘೋಷಣೆಯಾಗಿ ತಿಂಗಳುಗಳು ಕಳೆದರೂ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಎಲ್ಲಾ ರೈತರ 2 ಲಕ್ಷ ರೂಪಾಯಿಯವರಗೆ ಬೆಳೆ ಸಾಲಮನ್ನಾ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಬರಗಾಲ ಕುರಿತು ವಿಶೇಷ ಚರ್ಚೆ ಮುಂದುವರಿಸಿ 2 ಲಕ್ಷ ರೂಪಾಯಿ ರೈತರ ಬೆಳೆ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Leave a Comment