use pulse magic ತೊಗರಿ, ಉದ್ದು ಹಾಗೂ ಹೆಸರು ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆಯೇ ಅಥವಾ ಹೂವು ಕಾಯಿ ಉದುರುತ್ತಿವೆಯೇ…. ಚಿಂತಿಸಬೇಡಿ, ರಾಯಚೂರುಪ ಕೃಷಿ ವಿಶ್ವವಿದ್ಯಾಲಯ ಕಲಬುರಗಿ ಸಂಶೋಧನಾ ಮತ್ತು ಕೃಷಿ ವಿಜ್ಞಾನ ಕೇಂದ್ರವು ತಂದಿರುವ ಪಲ್ಸ್ ಮ್ಯಾಜಿಕ್ ಬಳಸಿ (pulse magic ) ಇಳುವರಿ ಹೆಚ್ಚಿಸಿಕೊಳ್ಳಬಹುದು.
use pulse magic ಇಳುವರಿ ಹೆಚ್ಚಿಸಲು ಪಲ್ಸ್ ಮ್ಯಾಜಿಕ್ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ತೊಗರಿ, ಹೆಸರು, ಉದ್ದುವಿನಲ್ಲಿ ಹೂವು ಉದುರಿ ಇಳುವರಿ ಕಡಿಮೆಯಾಗುತ್ತದೆ. ಇದೊಂದು ರೈತರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ರೈತರ ಸಮಸ್ಯೆಯನ್ನು ನೀಗಿಸಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪಲ್ಸ್ ಮ್ಯಾಜಿಕ್ ಹೆಸರಿನ ಹೊಸ ಪೋಷಕಾಂಶವನ್ನು ಕಂಡುಹಿಡಿದಿದ್ದಾರೆ.
ಹವಾಮಾನ ಬದಲಾವಣೆಯಿಂದ ತೇವಾಂಶದ ಕೊರತೆಯಾಗಿ ತೊಗರಿ, ಉದ್ದು, ಹೆಸರು, ಕಡಲೆ ಬೆಳೆಯಲ್ಲಿ ಹೂವ ಉದುರುತ್ತದೆ. ಬೆಳೆಯ ಶೇ. 90 ರಷ್ಟು ಹೂವು-ಕಾಯಿ ಉದುರಿ ರೈತರಿಗೆ ನಷ್ಟವಾಗುತ್ತಿರುತ್ತದೆ. ಈ ಪಲ್ಸ್ ಮ್ಯಾಜಿಕ್ ಬಳಸಿದರೆ ಬೆಳೆಯ ಬೆಳವಣಿಗೆ ಹೆಚ್ಚಾಗುತ್ತದೆ. ಹೂವು ಮತ್ತು ಕಾಯಿ ಉದುರುವುದನ್ನು ತಡೆಗಟ್ಟುತ್ತದೆ. ತೊಗರಿ ಬೆಳೆಗೆ ಎರಡು ಸಲ ಸಿಂಪರಣೆ ಮಾಡಬಹುದು. ತೊಗರಿಗೆ ಹೂವಾಡುವಾಗ ಮತ್ತು ಹೂವಾಡುವ ನಂತರ 15 ದಿನಗಳಲ್ಲಿ ಸಿಂಪರಣೆ ಮಾಡಬಹುದು. ಹೆಸರು ಮತ್ತು ಉದ್ದು ಬೆಳೆಗೆ ಹೂವಾಡುವ ಹಂತದಲ್ಲಿ ಸಿಂಪರಣೆ ಮಾಡಬೇಕು. ಇದರಿಂದ ಹೂವು ಉದುರುವನ್ನು ತಡೆಗಟ್ಟಿ ಶೇ. 17 ರಿಂದ 20ರವರೆಗೆ ಇಳುವರಿ ಹೆಚ್ಚಾಗುತ್ತದೆ ಎಂದುಪ ಕೃಷಿ ತಜ್ಞರ ಅಭಿಪ್ರಾಯವಾಗಿದೆ.
2 ಕೆಜಿಯ ಈ ಪೊಟ್ಟಣ (ಪ್ಯಾಕೇಟ್) ಬೆಲೆ 390 ರೂಪಾಯಿ ನಿಗದಿಪಡಿಸಲಾಗಿದೆ. 2 ಕೆಜಿಯ ಪೊಟ್ಟಣದಲ್ಲಿ 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಇದನ್ನು ಸಿಂಪರಣೆ ಮಾಡುವುದರಿಂದ ಹೂವು-ಕಾಯಿ ಉದುರುವಿಕೆ ತಡೆಗಟ್ಟಿ ಕಾಯಿ ಕಟ್ಟುವಿಕೆಯನ್ನು ಹೆಚ್ಚಿಸುತ್ತದೆ. ಕಾಳು ಸಹ ದಪ್ಪವಾಗಿ ತೂಕ ಹೆಚ್ಚುತ್ತದೆ. ಪ್ರತಿ ಗಿಡಗಳಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಾಗಿ ಮಾಗುವಿಕೆ ಸಮನಾಗಿರುತ್ತದೆ.
ಇದನ್ನೂ ಓದಿ :ರೈತರಿಗೆ ಸಂತಸದ ಸುದ್ದಿ: ಹೆಚ್ಚು ಇಳುವರಿ ಕೊಡುವ ಶೇಂಗಾ (High yielding Groundnut varieties) ತಳಿಗಳ ಮಾಹಿತಿ ಇಲ್ಲಿದೆ
ಪ್ರತಿ ಎಕರೆಗೆ ಎರಡು ಕೆಜಿ ಶಿಫಾರಸ್ಸು ಮಾಡಲಾಗಿದೆ. ಪುಡಿಯ ರೂಪದಲ್ಲಿ ಮತ್ತು ದ್ರವ್ಯ ರೂಪದಲ್ಲಿಯೂ ಲಭ್ಯವಿದೆ. ಪಲ್ಸ್ ಮ್ಯಾಜಿಕ್ ಬೆಳಗ್ಗೆ ಮತ್ತು ಸಾಯಂಕಾಲದ ಅವಧಿಯಲ್ಲಿ ಸಿಂಪರಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಕೃಷಿ ವಿಜ್ಞಾನ ಕೇಂದ್ರದಲ್ಲಿಯೇ ಪಲ್ಸ್ ಮ್ಯಾಜಿಕ್ ಪೊಟ್ಟಣ ಸಿಗುತ್ತದೆ. ಈಗ ಹೆಸರು, ಉದ್ದು ಹೂವಾಡುವ ಹಂತಕ್ಕೆ ಬಂದಿರುವುದರಿಂದ ರೈತರು ಪಲ್ಸ್ ಮ್ಯಾಜಿಕ್ ಪಡೆದು ಸಿಂಪರಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರವೇ ಖರೀದಿ ಮಾಡಿ ನಿಮ್ಮ ಬೆಳೆಗಳಿಗೆ ಉಪಯೋಗಿಸಬೇಕು.