Udyogini scheme subsidy here : ಉದ್ಯೋಗಿನಿ ಯೋಜನಯಡಿ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಬಡ್ಡಿರಹಿತ 4 ಲಕ್ಷ ರೂಪಾಯಿಯವರೆಗೆ ಸಾಲ ಸಿಗಲಿದೆ.
ಹೌದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಸಿಗಲಿದೆ.
2025-26ನೇ ಸಾಲಿನ ಉದ್ಯೋಗಿನಿ, ಚೇನತಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಅರ್ಹ ಮಹಿಳೆಯರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ನಲ್ಲಿ ಡಿಸೆಂಬರ್ 15 ರೊಳಗಾಗಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ಮಹಿಳೆಯರು ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು. ಈ ಸಾಲದ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ. ಎಸ್.ಸಿ, ಎಸ್.ಟಿ ವಿಧವೆ ಮತ್ತು ದಿವ್ಯಾಂಗ ಮಹಿಳೆಯರಿಗೆ ಸಾಲದ ಮೊತ್ತದ ಮೇಲೆ ಶೇಕಡಾ 50 ರಷ್ಟು ಅಂದರೆ ಗರಿಷ್ಠ 90 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ಪಡೆಯಬಹುದು.
ಇದನ್ನೂ ಓದಿ : Anganawadi naukari job apply ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಸರ್ಕಾರವು ಈ ಯೋಜನೆಡಿ ಸಾಲದ ಒಂದು ಭಾಗವನ್ನು ಸ್ವತ ಪಾವತಿಸುವುದರಿಂದ ಮಹಿಳೆಯರ ಮೇಲೆ ಬರುವ ಹಣಕಾಸು ಒತ್ತಡ ಕಡಿಮೆಯಾಗುತ್ತದೆ.
Udyogini scheme subsidy here ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಬೇಕಾಗುವ ಅರ್ಹತೆ ಮತ್ತು ವಯೋಮಿತಿ
ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ರಿಂದ 55 ವಯೋಮಾನದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮೀರಬಾರದು. ಹಿಂದೆ ಪಡೆದ ಸಾಲಗಳನ್ನು ಮರುಪಾವತಿಸದವರು ಈ ಯೋಜನೆಗೆ ಅರ್ಹರಾಗುವುದಿಲ್ಲ.
ಸಾಲ ಯಾವಾಗ ಮರುಪಾವತಿ ಮಾಡಬೇಕು
ಸಾಲವನ್ನು 3 ರಿಂದ 5 ವರ್ಷಗಳ ಒಳಗೆ ಮರುಪಾವತಿಸಬಹುದು. ಮರುಪಾವತಿ ಅವಧಿಯು ಸಾಲದ ಮೊತ್ತ ವ್ಯವಹಾರದ ಸ್ವರೂಪ ಮತ್ತು ಬ್ಯಾಂಕಿನ ನೀತಿಗಳ ಮೇಲೆ ಅವಲಂಬಿಸಿರುತ್ತದೆ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು ?
ಅರ್ಜಿ ಸಲ್ಲಿಸುವ ಮಹಿಳೆಯರ ಬಳಿ ಆಧಾರ್ ಕಾರ್ಡ್ ಇರಬೇಕು. ಜನನ ದಿನಾಂಕ ಪ್ರಮಾಮ ಪತ್ರ ಹೊಂದಿರಬೇಕು. ವಿಳಾಸ ಪ್ರಮಾಣ ಪತ್ರ ಇರಬೇಕು. ಕುಟುಂಬದ ಆದಾಯ ಪ್ರಮಾಣ ಪತ್ರ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಪಡಿತರ ಚೀಟಿ ಹೊಂದಿರಬೇಕು. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಇರಬೇಕು.
ಅರ್ಜಿ ಎಲ್ಲಿ ಸಲ್ಲಿಸಬೇಕು ?
ಮಹಿಳೆಯರು ಈ ಯೋಜನೆ ಯಾವುದೇ ವಾಣಿಜ್ಯ, ಗ್ರಾಮೀಣ ಅಥವಾ ಸಹಕಾರಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹತ್ತಿರದ ಬ್ಯಾಂಕ್ ಅಥವಾ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಲಭ್ಯವಿದೆ.
ಉದ್ಯೋಗಿನಿ ಯೋಜನೆಯಡಿ ಯಾವ ಯಾವುದಕ್ಕೆ ಸಾಲ ಸೌಲಭ್ಯ ನೀಡಲಾಗುವುದು ?
ಬೇಕರಿ ಮತ್ತು ಕ್ಯಾಂಟಿನ್ ಸೇವೆಗಳಿಗೆ ಸಾಲ ಸಿಗುವುದು. ಇದರೊಂದಿಗೆ ಬ್ಯೂಟ್ ಪಾರ್ಲರ್, ಅಡುಗೆ ಎಣ್ಣೆ ಮತ್ತು ಆಹಾರ ಉತ್ಪಾದನೆಗಳ ತಯಾರಿಗೆ, ಕೈಮಗ್ಗ ಮತ್ತು ಕಸೂತಿ ಕೆಲಸ, ಹಪ್ಪಳ, ಜ್ಯಾಪ್ ಜೆಲ್ಲಿ ತಯಾರಿಕೆ ಪುಸ್ತಕ ಮತ್ತು ನೋಟಬುಕ್ ತಯಾರಿಕೆ ಸೇರಿದಂತೆ ಇನ್ನಿತರ ವ್ಯವಹಾರಗಳಿಗಾಗಿ ಸಾಲ ಸೌಲಭ್ಯ ನೀಡಲಾಗುವುದು.
ಇದನ್ನೂ ಓದಿ : ರೈತ ಮಿತ್ರರೇ ನಿಮ್ಮ ಬೆಳೆ ಸಮೀಕ್ಷೆ ಹೀಗಾದರೆ ಮಾತ್ರ ಬೆಳೆ ಪರಿಹಾರ ಸಿಗಲಿದೆ ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಬಳಿ ಎಲ್ಲಾ ದಾಖಲೆ ಇರಬೇಕು. ಇದರೊಂದಿಗೆ ಅರ್ಜಿ ನಮೂನೆ ಸಹ ಇರಬೇಕು.





