ಉಚಿತವಾಗಿ ಹೈನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

animal husbandry training ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ 2 ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ರೈತರಿಗೆ ಎರಡು ದಿನಗಳ ಕಾಲ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ. ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಗಸ್ಟ್ 19 ಮತ್ತು 20 ರಂದು ಎರಡು ದಿನಗಳ ಕಾಲ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಬ್ಯಾಚ್ನಲ್ಲಿ 25 ಜನ ರೈತರಿಗೆ ತರಬೇತಿ ನೀಡಲಾಗುವುದು. ಮೊದಲು ಬಂದವರಿಗೆ ಅವಕಾಶ ನೀಡಲಾಗುವುದು. ಆಯಾ ದಿನಗಳಂದು 10 ಗಂಟೆಗೆ ಕಡ್ಡಾಯವಾಗಿ ಹಾಜರಿರಬೇಕು. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕನ್ನು ರೈತರೇ ತರಬೇಕು. ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಮಧ್ಯಾಹ್ನ ಅಲ್ಪೋಹಾರ  ನೀಡಲಾಗುವುದು. ಎರಡು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಗೆ ಹಾಜರಾದವರಿಗೆ ಮಾತ್ರ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು.

ಈ ತರಬೇತಿಗೆ ಹಾಜರಾಗುವ ರೈತರು ಅರ್ಜಿಯ ಜೊತೆಗೆ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಬೇಕು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ಸೇಡಂ ರಸ್ತೆ ಕಲಬುರಗಿ ವಿಳಾಸಕ್ಕೆ  ಅಥವಾ ಕಚೇರಿ ದೂರವಾಣಿ ಸಂಖ್ಯೆ 08472 220576 ಗೆ ಸಂಪರ್ಕಿಸಲು ಕೋರಲಾಗಿದೆ.

ಪಶುಪಾಲನೆಯಲ್ಲಿ ಆಸಕ್ತಿಯಿರುವ ರೈತರಿಗೆ ತರಬೇತಿ ನೀಡಲು ರಾಜ್ಯದಲ್ಲಿ 25 ಕೇಂದ್ರಗಳಿವೆ. ಹೌದು ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಕ್ಷೇತ್ರಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುವುದು. ಪ್ರಸ್ತುತರಾಜ್ಯದಲ್ಲಿ 25 ತರಬೇತಿ ಕೇಂದ್ರಗಳಿವೆ.

ತರಬೇತಿ ಕೇಂದ್ರಗಳು ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿವೆ ಎಂಬುದನ್ನುಚೆಕ್ ಮಾಡಲು ಈ

 https://www.ahvs.kar.nic.in/kn-institutionstrg.html

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರಾಜ್ಯದ ಎಲ್ಲೆಲ್ಲಿತರಬೇತಿ ಕೇಂದ್ರಗಳಿವೆ ಎಂಬ ಪಟ್ಟಿ ಕಾಣುತ್ತದೆ. ಕೆಳಗಡೆ ತರಬೇತಿ ವೇಳಾಪಟ್ಟಿಯ ಮೇಲೆ ಕ್ಲಿಕ್ ಮಾಡಿದರೆ ಸಾಕು,  ಯಾವ ಯಾವ ತಿಂಗಳಲ್ಲಿ ಏನೇನು ತರಬೇತಿ ನೀಡಲಾಗುವುದು ಎಂಬ ಮಾಹಿತಿ ಸಿಗುತ್ತದೆ.

ಉದಾಹರಣೆಗೆ  ಆಗಸ್ಟ್ ತಿಂಗಳಲ್ಲಿ ಯಾವ ಯಾವ ತರಬೇತಿ ಯಾವ ದಿನಾಂಕದಂದು ಆಯೋಜಿಸಲಾಗಿದೆ ಎಂಬ ಪಟ್ಟಿ ಕಾಣುತ್ತದೆ. ಆಗಸ್ಟ್ 16 ರಿಂದ 17 ರವೆಗೆ ಎರಡುದಿನಗಳ ಕಾಲ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುವುದು.  ಅದೇ ರೀತಿ ಆಗಸ್ಟ್ 19 ರಿಂದ 20 ರವರೆಗೆ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುವುದು. ಆಗಸ್ಟ್ 22 ರಿಂದ 23 ರವರೆಗೆ ಮತ್ತೆ ಕುರಿ ಮಕೇ ಸಾಕಾಣಿಕೆ ತರಬೇತಿನೀಡಲಾಗುವುದು. ಆಗಸ್ಟ್ 25 ರಿಂದ 25 ರವರೆಗೆ ಹೈನುಗಾರಿಕೆ ಹಾಗೂ 29 ರಿಂದ 30 ರವರೆಗೆ ಕುರಿ ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುವುದು. ಅದೇ ರೀತಿ ಸೆಪ್ಟೆಂಬರ್ ತಿಂಗಳಲ್ಲಿ ಯಾವ ದಿನಾಂಕದಂದು ಏನೇನು ತರಬೇತಿ ನೀಡಲಾಗುವುದು ಎಂಬ ಮಾಹಿತಿ ಕಾಣುತ್ತದೆ.

animal husbandry training ಪಶುಪಾಲನೆ ಕುರಿತಂತೆ ಮಾಹಿತಿ ನೀಡಲು ಆರಂಭವಾಗಿದೆ ಪಶುಪಾಲನಾ ಸಹಾಯವಾಣಿ

ರೈತರು ಮನೆಯಲ್ಲಿಯೇ ಕುಳಿತು ಉಚಿತವಾಗಿ ಪಶುಪಾಲನಾ ಕುರಿತಂತೆ ಮಾಹಿತಿ ಕೇಳಲು  8277 100 200 ಗೆ ಕರೆ ಮಾಡಿದರೆ ಸಾಕು ಸಂಪೂರ್ಣ ಮಾಹಿತಿ ನೀಡಲಾಗುವುದು.

Leave a Comment