ಉಚಿತವಾಗಿ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆಗೆ ಅರ್ಜಿ ಆಹ್ವಾನ

Written by Ramlinganna

Published on:

Three wheeler bike free distribute ಯಂತ್ರಚಾಲಿತ ತ್ರಿಚಕ್ರ ವಾಹನ ಉಚಿತವಾಗಿ ವಿತರಣೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2025-26ನೇ ಸಾಲಿನ ಜಿಲ್ಲಾ ಪಂಚಾಯತ್ ಅನಿಬಂಧಿತ ಅನುದಾನದಲ್ಲಿ ಅಂಗವಿಕಲರಿಗೆ ಉಚಿತವಾಗಿ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗದಗ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗದ್ಯ ದಾಖಲಾತಿಗೊಳೊಂದಿಗೆ ಮಾರ್ಚ್ 9 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿದಾರರ ವಯಸ್ಸು 20 ರಿಂದ 60 ವಯಸ್ಸಿನೊಳಗಿರಬೇಕು. ಯುಡಿಐಡಿ ಕಾರ್ಡ್ ನಲ್ಲಿ ಶೇ. 75 ಅಥವಾ ಅದಕ್ಕಿಂತ ಹೆಚ್ಚು ದೈಹಿಕ ವಿಕಲತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಗದಿತ ಅರ್ಜಿ ನಮೂನೆಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ 029, (ನೆಲಮಹಡಿ), ಜಿಲ್ಲಾಡಳಿತ ಭವನ, ಗದಗ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08372 220419 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Three wheeler bike free distribute ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಫಲಾನುಭವಿಗಳ ಬಳಿ ಆಧಾರ್ ಕಾರ್ಡ್ ಇರಬೇಕು. ಅಂಗವಿಕಲತೆ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳದ ಪುರಾವೆ ಇರಬೇಕು.

ವಿಕಲಚೇತನರು ಕರ್ನಾಟಕದಲ್ಲ ಕನಿಷ್ಠ 10 ವರ್ಷಗಳಿಂದ ವಾಸವಾಗಿರಬೇಕು. ಇತರೆ ಇಲಾಖೆಗಳು ಅಥವಾ ಸಂಘ ಸಂಸ್ಥೆಗಳಿಂದ ಯಂತ್ರಚಾಲಿತ ವಾಹನ ಪಡೆದಿದ್ದರೆ ಅಂತಹವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಯಂತ್ರಚಾಲಿತ ವಾಹನವನ್ನು ಅವರ ಜೀವಿತವಾವಧಿಯಲ್ಲಿ ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು.

ವಿಕಲಚೇತನರಿಗೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ

ವಿಕಲಚೇತನರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಸಹ ವಿತರಿಸಲಾಗುವುದು. ವಿಕಲಚೇತನರಿಗ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ಸೌಲಭ್ಯ ನೀಡಲಾಗುವುದು. ವಿಕಲಚೇತನರ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ನೀಡಲಾಗುವುದು. ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಎಸ್.ಎಸ್.ಎಲ್.ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ಟಾಕಿಂಗ್ ಲ್ಯಾಟ್ ಟಾಪ್ ವಿತರಿಸಲಾಗುವುದು. ಅರ್ಜಿ ಆಹ್ವಾನಿಸುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅಂಗವಿಕಲರು ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಗ್ರಾಮ ಒನ್ ಯೋಜನೆಗೆ ಅರ್ಜಿ ಆಹ್ವಾನ

ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್ ಪ್ರಾಂಚೈಸಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಯಾದಗಿರಿ ತಾಲೂಕಿನಿಂದ ಕಡೇಚೂರು ಪಂಚಾಯತ್ ದಲ್ಲಿ ಗ್ರಾಮ ಒನ್, ಗುರುಮಠಕಲ್  ತಾಲೂಕಿನಿಂದ ಕಾಳೆಬೆಳಗುಂದಿ ಪಂಚಾಯತದಲ್ಲಿ ಗ್ರಾಮ ಒನ್, ವಡಗೇರಾ ತಾಲೂಕದಿಂದ ಐಕೂರು, ಬೆಂಡೆಬೆಂಬಳ್ಳಿ, ಗುಂಡಗುರ್ತಿ, ಹೈಯಾಳ (ಬಿ) ವಡಗೇರಾ ಪಂಚಾಯತದಲ್ಲಿ ಗ್ರಾಮ ಒನ್ ಕೇಂದ್ರ, ಸುರಪುರ ತಾಲುಕುದಿಂದ ದೇವರಗೋನಾಲ, ಖಾನಾಪೂರ, ಅಲ್ದಾಳ ಪಂಚಾಯತದಲ್ಲಿ ಗ್ರಾಮ ಒನ್, ಹುಣಸಗಿ ತಾಲೂಕುದಿಂದ ಗೆದ್ದಲಮರಿ ಪಂಚಾಯತದಲ್ಲಿ ಗ್ರಾಮ ಒನ್ ಅರ್ಜಿ ಆಹ್ವಾನಿಸಿದೆ.

ಗ್ರಾಮ ಒನ್ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾ ಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ. ಸರ್ಕರಾದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಯೋಜನೆ ಅಡಿಯಲ್ಲಿ 750 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ನೀಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಕೆಲವು ಪಂಚಾಯತಿಗಳು ಗ್ರೈಡ್ -2 ನಿಂದ ಗ್ರೇಡ್ 1 ಗೆ ಪಂಚಾಯತಿಗಳಾಗಿದ್ದು, ಅದಕ್ಕೆ ತಕ್ಕಂತೆ ಸ್ಥಾಪನೆಗಾಗಿ ಬಾಕಿ ಉಳಿದಿರುವ ಗ್ರಾಮ ಒನ್ ಕೇಂದ್ರಗಳಿಗೆ ವೆಬ್ಸೈಟ್  ನಲ್ಲಿ ಮಾರ್ಚ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

Leave a Comment