women’s will get next installment ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ ಜಮೆಯಾಗುವಾಗ ಈ ಹಿಂದೆ ಜಮೆಯಾಗದಿರುವ ಮಹಿಳೆಯರಿಗೂ ಒಟ್ಟು 6 ಸಾವಿರ ರೂಪಾಯಿ ಹಣ ಜಮೆಯಾಗಲಿದೆ.
ಹೌದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಮಂದಿನ ವಾರದೊಳಗೆ ಅದಾಲತ್ ಆರಂಭಿಸಿ ಗೃಹಲಕ್ಷ್ಮೀ ಯೋಜನೆಗೆ ಉಂಟಾಗಿರುವ ಸಣ್ಣಪುಟ್ಟ ಅಡ್ಡಿಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾಡನಾಡಿ, ಇದುವರೆಗೂ ಮೂರು ಕಂತಿನ ದುಡ್ಡು ಬಾರದೆ ಇರುವವರಿಗೆ ಏಕಕಾಲಕ್ಕೆ ಆರು ಸಾವಿರ ರೂಪಾಯಿ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಈ ವರೆಗೆ 1.10 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಸಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.
ಯೋಜನೆಗೆ ಸುಮಾರು 50 ಸಾವಿರ ತೆರಿಗೆದಾರರು ಕೂಡ ಅರ್ಜಿ ಹಾಕಿದ್ದು, ಅರ್ಜಿಗಳನ್ನು ನಿರಾಕರಿಸಿ ಡಿಲೀಟ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
women’s will get next installment ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಬೇಕಾದರೆ ಫಲಾನುಭವಿಯ ಹೆಸರು ಈ ಪಟ್ಟಿಯಲ್ಲಿರಬೇಕು. ಅಂದರೆ ರೇಶನ್ ಕಾರ್ಡ್ ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥೆ ಎಂದು ನಮೂದಾಗಿರಬೇಕು. ನಿಮ್ಮ ರೇಶನ್ ಕಾರ್ಡ್ ಈ ಪಟ್ಟಿಯಲ್ಲಿ ಯಾರ ಹೆಸರು ಕುಟುಂಬದ ಮುಖ್ಯಸ್ಥೆ ಎಂದು ನಮೂದಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೇಶನ್ ಕಾರ್ಡ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿಪಟ್ಟಿ (ವಿಲೇಜ್ ಲಿಸ್ಟ್) ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ರೇಶನ್ ಕಾರ್ಡ್ ಪಡೆದಿರುವವರ ಹೆಸರು ಕಾಣಿಸುತ್ತದೆ. ಅಲ್ಲಿ ಕುಟುಂಬದ ಮುಖ್ಯಸ್ಥರಿರುವ ಹೆಸರು ಮೊದಲು ಕಾಣಿಸುತ್ತದೆ. ಮಹಿಳೆಯ ಹೆಸರಿದ್ದರೆ ಅವರ ಖಾತೆಗೆ ಇನ್ನು ಮುಂದೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಲಿದೆ.
women’s will get next installment ಗೃಹಲಕ್ಷ್ಮೀ ಯೋಜನೆಯ ಹಣ ಈ ಮಹಿಳೆಯರ ಖಾತೆಗೆ ಜಮೆ
ವಿವಿಧ ಕಾರಣಗಳಿಂದಾಗಿ ಇದುವರೆಗೂ ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಸಂದಾಯವಾಗದ ಕುಟುಂಬಗಳಿಗೆ ಇನ್ನು ಮುಂದೆ ಆ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ.
ಇದನ್ನೂ ಓದಿ : ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ ಬರಗಾಲ ಹಣ ಜಮೆ- ಹೆಸರು ಇಲ್ಲೇ ಚೆಕ್ ಮಾಡಿ
ಮನೆಯೊಡತಿ ಘೋಷಣೆ ಮಾಡದ ಕಾರಣ, ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಆಗದಿರುವುದು ಸೇರಿ ವಿವಿಧ ಕಾರಣಗಳಿಂದ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆ ಹಣ ತಲುಪಿಲ್ಲ.
ಅದೇ ರೀತಿ 7.67 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಹಣ ಸಂದಾಯ ಮಾಡಲಾಗಿಲ್ಲ. ಅಂತಹ ಕುಟುಂಬಗಳಿಗೂ ಯೋಜನೆ ತಲುಪಿಸುವ ದೃಷ್ಟಿಯಿಂದ ಆ ಎಲ್ಲಾ ಕುಟುಂಬಗಳ ಪಡಿತರ ಚೀಟಿಯಲ್ಲಿರುವ ಹಿರಿಯ ಮಹಿಳಾ ಸದಸ್ಯೆ ಖಾತೆಗೆ ಇನ್ನು ಮುಂದೆ ನೇರ ನಗದು ವರ್ಗಾವಣೆ ಮೂಲಕ ಎರಡೂ ಯೋಜನೆಗಳ ಹಣ ಸಂದಾಯ ಮಾಡಲು ಸಂಪುಟ ನಿರ್ಣಯಿಸಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.