ಪಿಎಂ ಕಿಸಾನ್ 17ನೇ ಕಂತಿನ ಹಣ ರೈತರಿಗೆ ಜಮೆಯಾಗಲ್ಲ

Written by Ramlinganna

Updated on:

farmer pm kisan money ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಮುಂದಿನ 17ನೇ ಕಂತಿನ ಹಣ ಕೆಲವರಿಗೆ ಜಮೆಯಾಗಲ್ಲ. ಏಕೆ ಜಮೆಯಾಗಲ್ಲ. ಎಂಬುದರ ಮಾಹಿತಿ ಇಲ್ಲಿದೆ..

ಯಾವ ರೈತರು ಇಕೆವೈಸಿ ಮಾಡಿಸಿದ್ದಾರೋ ಆ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮೆಯಾಗಲಿದೆ. ಇಕೆವೈಸಿ ಮಾಡಿಸದ ರೈತರಿಗೆ ಮುಂದಿನ ಕಂತು ಜಮೆ ಮಾಡುವುದನ್ನು ನಿಲ್ಲಿಸಲಾಗುವುದು.

ಯಾವ ರೈತರು ಇಕೆವೈಸಿ ಮಾಡಿಸಿದ್ದಾರೆ? ಯಾವ ರೈತರು ಇಕೆವೈಸಿ ಮಾಡಿಸಿಲ್ಲ? ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈಗಾಗಲೇ ಇಕೆವೈಸಿ ಮಾಡಿಸಿದ್ದರೆ ತಮ್ಮ ಇಕೆವೈಸಿ ಪ್ರಕ್ರಿಯೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ OTP Based Ekyc ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನೀವು ಈಗಾಗಲೇ ಇಕೆವೈಸಿ ಮಾಡಿಸಿದ್ದರೆ EKYC is already done ಎಂಬ ಮೆಸೇಜ್ ಕಾಣುಸುತ್ತದೆ. ಆಗ ನೀವು ಓಕೆ ಮೇಲೆ ಕ್ಲಿಕ್ ಮಾಡಬಹುದು.

ಒಂದು ವೇಳೆ ನೀವು ಇಕೆವೈಸಿ ಮಾಡಿಸದೆ ಇದ್ದರೆ ಆಧಾರ್ ಕಾರ್ಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆಗ ಓಟಿಪಿ ನಮೂದಿಸಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇಕೆವೈಸಿ ಮಾಡಿಸುವುದೇಕೆ ಕಡ್ಡಾಯವಾಗಿದೆ?

ಪಿಎಂ ಕಿಸಾನ್ ಯೋಜನೆಗೆ ಪ್ರಾರಂಭದಲ್ಲಿ ಪ್ರತಿಯೊಬ್ಬ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಅಂದರೆ ಸರ್ಕಾರಿ ನೌಕರರು, ಶ್ರೀಮಂತ ರೈತರು, ಒಂದೇ ಕುಟುಂಬದಲ್ಲಿ ಜಮೀನು ಪತಿ, ಪತ್ನಿ, ಮಕ್ಕಳ ಹೆಸರಿನಲ್ಲಿದ್ದರೆ ಅವರೆಲ್ಲರೂ ಪ್ರತ್ಯೇಕವಾಗಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದರು. ಈಗ ಇಕೆವೈಸಿ ಮಾಡಿಸುವುದರಿಂದ ನಿಜವಾದ ಫಲಾನುಭವಿಗಳನ್ನು ಗುರುತಿಸಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನನ ಖಾತಾ / ಪಟ್ಟಾ ಪ್ರತಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ ಮಾಡಲು ಹಾಗೂ ಸರ್ಕಾರಿ ನೌಕರರು, ಪಿಂಚಣಿ ಸೌಲಭ್ಯ ಪಡೆಯುವವರು ಮತ್ತು ತೆರಿಗೆ ಪಾವತಿಸುವವರನ್ನು ಬಿಟ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮುಂದಿನ ಕಂತು ಜಮೆ ಮಾಡಲಾಗುವುದು.

farmer pm kisan money ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮೆಯಾಗಬಹುದು?

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜೂನ್ 18 ರಂದು  ಜಮೆಯಾಗಲಿದೆ.  ಹೌದು, ಪ್ರತಿ ನಾಲ್ಕು ತಿಂಗಳಿಗೆ ಪಿಎಂ ಕಿಸಾನ್ ಯೋಜನೆಯ ಹಣ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ಜಮೆ ಮಾಡಲಾಗುವುದು.  ಕಳೆದ 16ನೇ ಕಂತಿನ ಹಣ ಫೆಬ್ರವರಿಯಲ್ಲಿ ಜಮೆ ಮಾಡಲಾಗಿತ್ತು. ಹಾಗಾಗಿ ಮುಂದಿನ ಕಂತು ಜೂನ್ ತಿಂಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆಯ ಹಿಂದಿನ ಕಂತಿನ ಹಣ ಜಮೆಯಾಗಿಲ್ಲವೇ?

ಪಿಎಂ ಕಿಸಾನ್ ಯೋಜನೆಯ ಹಿಂದಿನ ಕಂತಿನ ಹಣ ಜಮೆಯಾಗದಿದ್ದರೆ  ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದು. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಬಹುದು.

ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ನಂಬರ್ 155261ಅಥವಾ  011 24300606  ಗೆ ಕರೆ ಮಾಡಿ ವಿಚಾರಿಸಬಹುದು.

Leave a Comment