ಈ ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ಜಮೆ: ಇಲ್ಲಿದೆ ಮಾಹಿತಿ

Written by Ramlinganna

Updated on:

crop insurance and crop damage  ಈ ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಲಿದೆ.  ಯಾವ ಯಾವ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಜಮೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯದ ಎಲ್ಲಾ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಹಣ ಜಮೆಯಾಗುವುದಿಲ್ಲ.  ಕೆಲವು ರೈತರಿಗೆ ಮಾತ್ರ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಇನ್ನೂ ಕೆಲವು ರೈತರಿಗೆ  ಬೆಳೆ ಹಾನಿ ಪರಿಹಾರ ಹಣ ಜಮೆಯಾಗುತ್ತದೆ. ಹಾಗಾದರೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಬೇರೆ ಬೇರೆ. ಇದೇನಿದು? ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡೂ ಒಂದೇ ಅಲ್ವಾ ಎಂಬ ಪ್ರಶ್ನೆ ಮೂಡುತ್ತಿದೆ. ಹೌದು, ಬೆಳೆ ವಿಮೆ ಪರಿಹಾರವೇ ಬೇರೆ ಹಾಗೂ ಬೆಳೆ ಹಾನಿ ಪರಿಹಾರವೇ ಬೇರೆಯಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರದ ವ್ಯತ್ಯಾಸದ ಬಗ್ಗೆಇಲ್ಲಿದೆ ಸಂಕ್ಷೀಪ್ತ ಮಾಹಿತಿ.

 crop insurance and crop damage  ಬೆಳೆ ವಿಮೆ ಪರಿಹಾರ ಎಂದರೇನು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆಗಳಿಗೆ ವಿಮೆ ಕಟ್ಟಿದ ರೈತರಿಗೆ ಅತೀವೃಷ್ಟಿ, ಅಕಾಲಿಕ ಮಳೆ, ಪ್ರವಾಹ,ಬಿರುಗಾಳಿ, ಗುಡುಗು ಸಿಡಿಲು ಸೇರಿದಂತೆ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾಳಾದರೆ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಬೆಳೆ ಹಾಳಾದಾಗ 72 ಗಂಟೆಯೊಳಗೆ ಆಯಾ ಜಿಲ್ಲೆಯ ರೈತರು ತಮ್ಮ ಜಿಲ್ಲೆಯ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ನೀಡಿದ ರೈತರ ಜಮೀನಿಗೆ ಬಂದು ಹಾಳಾದ ಬೆಳೆಯನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮಾ ಪರಿಹಾರಕ್ಕೆ ವರದಿ ಸಲ್ಲಿಸುತ್ತಾರೆ. ನಂತರ ರೈತರಿಗೆ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂಬುದನ್ನು ನೋಡಿಕೊಂಡು ರೈತರ ಖಾತೆಗೆ ಬೆಳೆ ವಿಮೆ ಹಣವನ್ನು ಜಮೆ ಮಾಡಲಾಗುತ್ತದೆ.

ಪ್ರಾಕೃತಿಕ ವಿಕೋಪದಿಂದಾಗಿ ರೈತರ ಬೆಳೆ ಹಾಳಾಗಿ ಸಂಕಷ್ಟಕ್ಕೀಡಾದ ರೈತರಿಗೆ ಪಾರು ಮಾಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.

2022-23ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದರೆ ರೈತರು ಆನ್ಲೈನ್ ನಲ್ಲೇ ಬೆಳೆ ವಿಮೆ ಅರ್ಜಿಯ ಸ್ಟೇಟಸನ್ನು ಚೆಕ್ ಮಾಡಬಹುದು. ಸ್ಟೇಟಸ್ ಚೆಕ್ ಮಾಡಲು ರೈತರು ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್  ಮಾಡಬಹುದು.

ಬೆಳೆ ಹಾನಿ ಪರಿಹಾರ ಎಂದರೇನು?

ಅತೀವೃಷ್ಟಿ, ಪ್ರವಾಹ, ಬರಗಾಲದಿಂದಾಗಿ ಬೆಳೆ ಹಾನಿಯಾಗಿದ್ದರೆ ಎಕರೆಗೆ ಇಂತಿಷ್ಟು ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಘೋಷಿಸುತ್ತದೆ.

ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು, ಫ್ಲಡ್ ಆಯ್ಕೆ ಮಾಡಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ  ಸ್ಟೇಟಸ್ ಚೆಕ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಬೆಳೆ ವಿಮೆಗೆ ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬಿತ್ತನೆ ಮಾಡಿರುತ್ತಾರೋ ಆ ಬೆಳೆಗೆ ವಿಮೆ ಮಾಡಿಸಿದರೆ ಬೆಳೆ ವಿಮೆ ಹಣ ಬರುತ್ತದೆ. ಆದರೆ ಬೆಳೆ ಹಾನಿಯನ್ನು ರಾಜ್ಯ ಸರ್ಕಾರವು ಪ್ರತಿ ಎಕರೆಗೆ ಎಷ್ಟು ಹಣ ಪರಿಹಾರ ನೀಡಬೇಕೆಂಬುದನ್ನು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಘೋಷಣೆ ಮಾಡಲಾಗುತ್ತದೆ.

Leave a Comment