Suggestion to farmers : ತೊಗರಿ, ಹತ್ತಿ, ಹೆಸರು, ಉದ್ದು ಹಾಗೂ ಕಬ್ಬು ಬೆಳೆಯುವ ರೈತರಿಗೆ ಇಲ್ಲಿದೆ ಕೆಲವು ಸಲಹೆಗಳು.
ಹೌದು, ತೊಗರಿ, ಹತ್ತಿ, ಹೆಸರು, ಉದ್ದು ಹಾಗೂ ಕಬ್ಬು ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪೋಶಕಾಂಶಗಳನ್ನು ಗಮನಿಸಿದಾಗ ಸಮತೋಲನವಾದ ಸಾರಜನಕ, ರಂಜಕ ಹಾಗೂ ಪೋಟಾಷ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಕೂಡ ಬಳಸುವ ಅವಶ್ಯಕತೆ ಇದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ ಅವರು ತಿಳಿಸಿದ್ದಾರೆ.
ಈಗಾಗಲೇ ಸುಮಾರು ವರ್ಷಗಳಿಂದ ಆಂP ರಸಗೊಬ್ಬರ ಬಳಸುತ್ತಿರುವುದರಿಂದ ಹೇರಳವಾಗಿ ರಂಜಕ ಪೋಷಕಾಂಶ ಭೂಮಿಯಲ್ಲಿ ಈIಘಿಇಆ ಈಔಖಒನಲ್ಲಿ ಇದ್ದು, DAP ರಸಗೊಬ್ಬರ ಬದಲಾಗಿ ಸಂಯುಕ್ತ ರಸಗೊಬ್ಬರಗಳಾದ 20:20:0:13 ಹಾಗೂ 14:35:14 ಬಳಕೆ ಮಾಡಬಹುದಾಗಿದೆ. ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10, 15:15:15, 15:15:15:9(S) ಇತ್ಯಾದಿ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಗೆ ಸಮತೋಲನ ಪೋಶಕಾಂಶಗಳನ್ನು ನೀಡಿದಂತಾಗುತ್ತದೆ.
ಇದನ್ನೂ ಓದಿ ಗ್ರಾಪಂನಿಂದ ನಿಮ್ಮೂರಿಗೆ ಯಾವ ಯಾವ ಕಾಮಗಾರಿ ಮಂಜೂರಾಗಿದೆ? ಇಲ್ಲೇ ಚೆಕ್ ಮಾಡಿ
ತಾಂತ್ರಿಕವಾಗಿ ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ: ರಂಜಕ: ಪೊಟ್ಯಾಷ್ ರಸಗೊಬ್ಬರಗಳನ್ನು 4:2:1ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಚವಾಗಿ ಸಾರಜನಕ ಹಾಗೂ ರಂಜಕ ಹೋಂದಿರುವ (DAP) ಹಾಗೂ UREA ರಸಗೊಬ್ಬರವನ್ನು ಮಾತ್ರ ಬಳಸುತ್ತಿರುವ ಕಾರಣ ಸದರಿ ರಸಗೊಬ್ಬರಗಳ ಜಿಲ್ಲೆಯ ಅನುಪಾತವು 5.08:2.83:1 ಆಗಿರುತ್ತದೆ. ಇದನ್ನು ಸರಿಪಡಿಸಲು ಹಾಗೂ ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನಾತ್ಮ ಕರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.
Suggestion to farmers ರೈತರಿಗೆ ಸಲಹೆಗಳು
DAP ರಸಗೊಬ್ಬರಕ್ಕೆ ಪರ್ಯಾಯವಾಗಿ ರೈತರು ತೊಗರಿ, ಉದ್ದು, ಹೆಸರು, ಹತ್ತಿ ಮತ್ತು ಕಬ್ಬು ಬೆಳೆಗೆ ಗಂಧಕ ಅಂಶ ಒದಗಿಸುವ ಸಂಯುಕ್ತ ರಸಗೊಬ್ಬರಗಳಾದ 20:20:0:13 ಹಾಗೂ ಸಮತೋಲನ ಪೋಷಕಾಂಶ ನೀಡುವ ಮತ್ತು ಭೂಮಿಯ ಆರೋಗ್ಯಕ್ಕೆ ಹಿತವಾದ ಸಂಯುಕ್ತಗೊಬ್ಬರಗಳಾದ 14:35:14, 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10, 15:15:15, 15:15:15:9(S) ಇತ್ಯಾದಿ ರಸಗೊಬ್ಬರಗಳನ್ನು ಬಳಸಬಹುದಾಗಿದೆ. ಇದರಿಂದ ಮಣ್ಣಿನ ಆರೋಗ್ಯದಲ್ಲಿ ಸ್ಮಧಾರಣೆ ಮತ್ತು ಬೆಳೆಗಳ ಆರೋಗ್ಯ ಕಾಪಾಡಲು ರೈತಬಾಂದವರು DAP ಮತ್ತು UREA ರಸಗೊಬ್ಬರಗಳ ಜೊತೆಗೆ ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಉತ್ತಮ ಇಳುವರಿ ಪಡೆಯಲು ಜೊತೆಗೆ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವೇ ಇಲ್ಲಿ ನೀಡಲಾದ ನಂಬರಿಗೆ ಸಂಪರ್ಕಿಸಿ
ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ? ಜಮೆಯಾಗುತ್ತಿಲ್ಲವೇ? ಇಲ್ಲಿ ನೀಡಲಾದ ನಂಬರುಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳ ಸಹಾಯಧನವನ್ನು ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ 2025 ಜನವರಿ ಮಾಹೆಯವರೆಗೆ ಅವರ ಖಾತೆಗೆ ಮಾಸಿಕ ಧನಸಹಾಯವನ್ನು ಪಾವತಿಸಲಾಗಿದೆ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆದರೆ ಕೆಲವು ಫಲಾನುಭವಿಗಳು ಸಹಾಯಧನ ಜಮಾ ಆಗಿರುವುದಿಲ್ಲ ಎಂದು ಮನವಿ ಸಲ್ಲಿಸುತ್ತಿದ್ದು, ಸದರಿ ತಿಂಗಳುಗಳ ಧನ ಸಹಾಯವು ಯಾವ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿರುವುದಿಲ್ಲವೊ, ಅಂತಹ ಫಲಾನುಭವಿಗಳು ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಸಂಪರ್ಕಿಸಬೇಕು.
ಈ ನಂಬರುಗಳಿಗೆ ಸಂಪರ್ಕಿಸಿ
ಸಂಪರ್ಕಿಸಬೇಕಾದ ತಾಲೂಕುವಾರು ದೂರವಾಣಿ ಸಂಖ್ಯೆಗಳ ವಿವರ ಇಂತಿದೆ. ಅಫಜಲಪೂರ ತಾಲೂಕು: ಮನೋಜ-9901560061, ಆಳಂದ ತಾಲೂಕು: ಚನ್ನಬಸಯ್ಯಾ-9480894476, ಚಿತ್ತಾಪೂರ ತಾಲೂಕು: ಚಂದ್ರಿಕಾ-88617271115, ಚಿಂಚೋಳಿ ತಾಲೂಕು: ಅವದೋತ-8861190417, ಕಲಬುರಗಿ(ನಗರ): ಪ್ರೀಯಾಂಕ-7975790070, ಕಲಬುರಗಿ (ಗ್ರಾಮೀಣ) ತಾಲೂಕು: ವರ್ಷಾ-9686168183, ಜೇವರ್ಗಿ ತಾಲೂಕು: ಪ್ರಕಾಶ-9880208047, ಸೇಡಂ ತಾಲೂಕು: ಗುರುದೇವಿ-9590863239. ಶಹಾಬಾದ ತಾಲೂಕು: ಸಚಿನ್-9686291861.
ಫಲಾನುಭವಿಗಳು ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳು ಸೂಚಿಸಿದ ಅಗತ್ಯ ದಾಖಲಾತಿಗಳನ್ನು ಒದಗಿಸಿದ್ದಲ್ಲಿ, ಅಂತಹ ಫಲಾನುಭವಗಳಿಗೆ ಗೃಹಲಕ್ಷ್ಮಿ ಯೋಜನೆಯ ಧನ ಸಹಾಯವನ್ನು ಪಾವತಿಸಲು ಕ್ರಮವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.