veerashaiva lingayata abhivrudhi nigama ದಿಂದ ಅರ್ಜಿ ಆಹ್ವಾನ

Written by Ramlinganna

Updated on:

veerashaiva lingayata abhivrudhi nigama (ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ) ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಬಸವ ಬೆಳಗು ಯೋಜನೆ, ವಿದೇಶ ವಿದ್ಯಾ ವಿಕಾಸ ಯೋಜನೆ, ಜೀವ ಜಲ ಯೋಜನೆ, ಕಾಯಕಕಿರಣ ಯೋಜನೆ, ಭೋಜನಾಲಯ ಕೇಂದ್ರ, ವಿಭೂತಿ ನಿರ್ಮಾಣ ಘಟಕ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆಯಡಿಯಲ್ಲಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜೀವ ಜಲ ಯೋಜನೆ

ಜೀವ ಜಲ ಯೋಜನೆಯಡಿಯಲ್ಲಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನಿಸಲಾಗಿದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರ ರೂಪಾಯಿ ಹಾಗೂ ಪಟ್ಟಣ ಪ್ರದೇಶದವರಿಗೆ 1.20 ರೂಪಾಯಿಗಳ ಮಿತಿಯೊಳಗಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕವೆಚ್ಚ 4.75 ಲಕ್ಷರೂಪಾಯಿಗಳಲ್ಲಿ 4.25 ಲಕ್ಷ ಸಹಾಯಧನ ನೀಡಲಾಗುವುದು. ಉಳಿದ ಜಿಲ್ಲೆಗಳಿಗೆ ಘಟಕವೆಚ್ಚ 3.75 ಲಕ್ಷ ಗಳಲ್ಲಿ 3.25 ಲಕ್ಷರೂಪಾಯಿ ಸಹಾಯಧನ ನೀಡಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50 ಸಾವಿರ ರೂಪಾಯಿ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

ಇದನ್ನೂ ಓದಿ : ಬೆಳೆ ಹಾನಿ ಪರಿಹಾರ ಯಾವಾಗ ಯಾರಿಗೆ ಜಮೆ ಆಗುತ್ತದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೈತರು ಫಾರ್ಮರ್ಸ್ ಫ್ರೂಟ್ಸ್ ಐಡಿ ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರಹೊಂದಿರಬೇಕು.

ಭೋಜನಾಲಯ ಕೇಂದ್ರ

ವೀರಶೈವ ಲಿಂಗಾಯತ ಸಮುದಾಯದ ಜನರು ಹೋಟೆಲ್ (ಖಾನಾವಳಿ)ಉದ್ಯಮ ಕೈಗೊಳ್ಳಲು  ಘಟಕ ವೆಚ್ಚ 5 ಲಕ್ಷಇದರಲ್ಲಿ 4.60 ಲಕ್ಷಸಾಲ ಮತ್ತು 40 ಸಾವಿರ ರೂಪಾಯಿ ಸಹಾಯಧನ ನೆರವು ನೀಡಲಾಗುವುದು. ಹೋಟೆಲ್ ಸ್ಥಾಪನೆ ಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20 x 30  ಅಡಿ ಅಳತೆಯುಳ್ಳ ನಿವೇಶನ ಹೊಂದಿರಬೇಕು.

ವಿಭೂತಿ ನಿರ್ಮಾಣ ಘಟಕ

ವೀರಶೈವ ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸಲು ಸಾಲ ಮತ್ತು ಸಹಾಯಧನ ನೀಡಲಾಗುವುದು. ಕುಟುಂಬ ವಾರ್ಷಿಕ ವರಮಾನ 3.50 ಲಕ್ಷ ರೂಪಾಯಿ,18 ರಿಂದ 55 ವಯೋಮಾನದೊಳಗಿರಬೇಕು.

ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚ 4 ಲಕ್ಷ ರೂಪಾಯಿ ಇದರಲ್ಲಿ 3.60 ಲಕ್ಷ ರೂಪಾಯಿಸಾಲ ಮತ್ತು 40 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ

ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ. 50 ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುವುದು. ಫಲಾನುಭವಿಗಳು ಉಳಿದ ಮೊತ್ತವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು.

ಸ್ವಯಂ ಉದ್ಯೋಗ ಸಾಲ ಯೋಜನೆ

ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ ಅಥವಾ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಖರೀದಿಸಲು ಉದ್ಯಮಿಗಳಿಗೆ ವಾಣಿಜ್ಯ ಬ್ಯಾಂಕ್ ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ. 20 ರಷ್ಟು ಸಾಲ ಅಥವಾ ಗರಿಷ್ಠ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.

ಕಾಯಕ ಕಿರಣ ಯೋಜನೆ

ಕಾಯಕ ಕಿರಣ ಯೋಜನೆಯಡಿ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳನುಸಾರ ಸಾಲ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ 2 ಲಕ್ಷ ರೂಪಾಯಿಗಳಿಗೆ ಗರಿಷ್ಠ ಶೇ. 15 ರಷ್ಟು ಸಹಾಯಧನ ನೀಡಲಾಗುವುದು. ಉಳಿದ ಶೇ. 85 ರಷ್ಟುಹಣವನ್ನು ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಅರ್ಜಿಗಳನ್ನು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಲ್ಲಿ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ಮೂಲಕಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ veerashaiva lingayata abhivrudhi nigama ದ ಜಾಲತಾಣ

https://kvldcl.karnataka.gov.in/

ಅಥವಾ 080 22865522 ,  9900012351 ಗೆ ಸಂಪರ್ಕಿಸಬಹುದು.

Leave a Comment