Subsidy Pink Rikshaw scheme : ಆರ್ಥಿಕ ಅಗತ್ಯವಿರುವ ಮಹಿಳೆಯರಿಗೆ ಜೀವನೋಪಾಯದ ಸಾಧನವಾಗಿ ಪಿಂಕ್ ರಿಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ರಿಕ್ಷಾ ಖರೀದಿಸುವವರಿಗೆ ಸಬ್ಸಿಡಿ ಸಹ ಸಿಗಲಿದೆ.
ಹೌದು, ನಗರಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ರಿಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೊದಲ ವರ್ಷದಲ್ಲಿ 5000 ಪಿಂಕ್ ರಿಕ್ಷಾಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯುಕ್ತ ಡಾ. ಪ್ರಶಾಂತ್ ನಾರ್ಣವಾಲೆ ತಿಳಿಸಿದ್ದಾರೆ.
ಮಹಿಳೆಯರ ಸುರಕ್ಷತೆಯನ್ನು ಹೆಚ್ಚುಸಲು ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಮಹಾರಾಷ್ಟ್ರ ಸರ್ಕಾರವು ಈ ವಿನೂತನ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಯೋಜನೆಯು ಮುಂಬೈ, ಥಾಣೆ, ನವಿ ಮುಂಬೈ, ಪುಣ ಮತ್ತು ನಾಗ್ಪುರ ಸೇರಿದಂತೆ ಒಂಬತ್ತು ಪ್ರಮುಖ ನಗರಗಳಲ್ಲಿ ಪಿಂಕ್ ರಿಕ್ಷಾ ಯೋಜನೆಯನ್ನು ಪರಿಚಯಿಸಿದೆ. ಈ ಪಿಂಕ್ ರಿಕ್ಷಾಗಳು ಪರಿಸರ ಕಾಳಜಿಯನ್ನು ಪರಿಹರಿಸಲು ಜಾರಿಗೆ ತರಲಾಗಿದೆ.
ಈ ಪಿಂಕ್ ರಿುಕ್ಷಾಗಳು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ಸರ್ಕಾರವು ಪಿಂಕ್ ರಿಕ್ಷಾಗಳನ್ನು ಸೇರಿಸಿದೆ. ಏಕೆಂದರೆಈ ರಿಕ್ಷಾಗಳಿಗೆ ಕಡಿಮೆ ನಿರ್ವಹಣೆ ಅಗತ್ಯವಿರುತ್ತದೆ.
Subsidy Pink Rikshaw scheme ಪಿಂಕ್ ರಿಕ್ಷಾ ಸಬ್ಸಿಡಿ ಯಾರಿಗೆ ಸಿಗಲಿದೆ?
ಈ ರಿಕ್ಷಾಗಳನ್ನು ಮಹಿಳಾ ಚಾಲಕರೇ ನಿರ್ವಹಿಸುತ್ತಾರೆ. ನಿರುದ್ಯೋಗಿ ಮಹಿಳೆಯರಿಗೆ ರಿಕ್ಷಾ ಖರೀದಿಸಲು ಶೇ. 20 ರಷ್ಟು ಸಬ್ಸಿಡಿ ನೀಡಲು ಸರ್ಕಾರ ಯೋಜಿಸಿದೆ. ಅರ್ಜಿದಾರರು ವೆಚ್ಚದ 10 ಪ್ರತಿಶತವನ್ನು ಭರಿಸಬೇಕಾಗುತ್ತದೆ. ಉಳಿದ 70 ಪ್ರತಿಶತವನ್ನು ಬ್ಯಾಂಕ್ ಸಾಲಗಳ ಮೂಲಕ ಹಣಕಾಸು ಒದಗಿಸಲಾಗುತ್ತದೆ.
ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಪಿಂಕ್ ರಿಕ್ಷಾ ಯೋಜನೆಯಡಿಯಲ್ಲಿ ಈ ರಿಕ್ಷಾಗಳನ್ನು ಮಹಿಳೆಯರೇ ಓಡಿಸಲಿದ್ದಾರೆ. ಈ ಹಿಂದೆ ಈ ಇ-ರಿಕ್ಷಾಗಳನ್ನು ಗೋವಾ, ಲಕ್ನೋ ಹಾಗೂ ಸೂರತ್ ನಲ್ಲಿ ಪ್ರಾರಂಭಿಸಲಾಯಿತು.
ಮಹಿಳಾ ಚಾಲಿತ ರಿಕ್ಷಾಗಳನ್ನು ಪರಿಚಯಿಸಲು ಈ ಹಿಂದೆ ಮಹಾರಾಷ್ಟ್ರ ರಾಜ್ಯ ಸರ್ಕಾರವು ಅಬೋಲಿ ರಿಕ್ಷಾ ಯೋಜನೆಯನ್ನು ಜಾರಿಗೆ ತಂದಿತ್ತು.
ಹೌದು 2023 ರ ಅಕ್ಟೋಬರ್ 2 ರಿಂದ 2024 ರ ಅಕ್ಟೋಬರ್ 1 ರವರೆಗೆ ಒಂದು ವರ್ಷದ ಅವಧಿಯ ಮುಖ್ಯಮಂತ್ರಿ ಮಹಿಳಾ ಸಶಕ್ತಿಕರಣ ಅಭಿಯಾನ (ಮುಖ್ಯಮಂತ್ರಿ ಮಹಿಳಾ ಸಬಲೀಕರಣ ಅಭಿಯಾನ)ಅನ್ನು ಪರಿಚಯಿಸಿತು. ಈ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 1 ಲಕ್ಷ ಮಹಿಳೆಯರಿಗೆ ಪ್ರಯೋಜನೆ ಸಿಗಲಿದೆ. ಸರ್ಕಾರಿ ಇಲಾಖೆಗಳು ಎನ್.ಜಿ.ಓಗಳು ಮತ್ತು ತರಬೇತಿ ಸಂಸ್ಥೆಯನ್ನು ಕನಿಷ್ಠ 10 ಲಕ್ಷ ಮಹಿಳೆಯರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಯಾರಿಗೆ ಜಮೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ
ಈ ಹಿಂದಿನ ಅಬೋಲಿ ರಿಕ್ಷಾ ಯೋಜನೆಯಡಿಯಲ್ಲಿ ರಿಕ್ಷಾ ಖರೀದಿಸಲು ಸಬ್ಸಿಡಿಗೆ ಅವಕಾಶವಿರಲಿಲ್ಲ. ಆದರೆ ಈಗ ಪರಿಚಯಿಸಿರುವ ಪಿಂಕ್ ರಿಕ್ಷಾ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆಯಬಹುದು.