SSC constable GD recruitment ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಎಸ್ಎಸ್ಬಿ, ಎಸ್ಎಸ್ಎಫ್, ಎನ್ಐಎ, ಐಟಿಬಿಪಿ ಪಡೆಗಳಲ್ಲಿ ಖಾಲಿಯಿರುವ (SSC constable GD recruitment) 25271 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇತ್ತೀಚೆಗೆ ಜೆನೆರಲ್ ಡ್ಯೂಟಿ ಕಾನ್ಸ್ಟೇಬಲ್ಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಎಸ್ಎಸ್ಎಲ್ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
SSC constable GD recruitment ಹುದ್ದೆಗಳ ವಿವರ:
ಗಡಿ ಭದ್ರತಾ ಪಡೆಯಲ್ಲಿ-7545 ಹುದ್ದೆಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 8464, ಸಶಸ್ತ್ರ ಸೀಮಾ ಬಲ್ ನಲ್ಲಿ 3806, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ 1431 ಹುದ್ದೆಗಳು, ಅಸ್ಸಾ ರೈಫಲ್ಸ್ ನಲ್ಲಿ 3785 ಸೇರಿದಂತೆ ಒಟ್ಟು 25271 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ 23 ವರ್ಷ.ತುಂಬಿರಬೇಕು.
ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ
ವಯೋಮಿತಿ ಸಡಿಲಿಕೆ ನಿಯಮಗಳು ಆಯಾ ವರ್ಗಕ್ಕೆ ಮೀಸಲಾತಿಯಿರಲಿದೆ. ಆನ್ಲೈನ್ ಮೂಲಕ ಜುಲೈ 17 ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2021 ಆಗಿದೆ.
ಆನ್ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 02-09-2021 ಆಗಿದ್ದು, ಚಲನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ 04-09-2021 ಆಗಿದೆ.
ಶುಲ್ಕ ವಿವರ: ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ ಆಗಿದೆ. ST / SC / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ನೆಟ್ಬ್ಯಾಂಕಿಂಗ್, ಎಸ್ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ವೇತನ ಶ್ರೇಣಿ- 21700-69100 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಯನ್ನು ವೆಬ್ಸೈಟ್ https://ssc.nic.in/ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಯಸುವವರು ಈ ಲಿಂಕ್ https://ssc.nic.in/ ಮೇಲೆ ಕ್ಲಿಕ್ ಮಾಡಬೇಕು.
ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮ ಕಾಯಕ ಮಿತ್ರ ನೇಮಕಕ್ಕೆ ಅರ್ಜಿ ಆಹ್ವಾನ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬಳ್ಳಾರಿ ತಾಲೂಕಿನ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ 18 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರರನ್ನು ಗೌರವಧನ ಆಧಾರದಲ್ಲಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅಮರಾಪುರ, ಬಸರಕೋಡು, ಬೆಳಗಲ್ಲು, ಬೈರದೇವನಹಳ್ಳಿ, ಚಾನಾಳು, ಹನಕುಂದಿ, ಕಪ್ಪಗಲ್ಲು, ಕಾರೇಕಲ್ಲು, ಕೊಳಗಲ್ಲು, ಕೊರ್ಲಗುಂದಿ, ಮೋಕ, ಪರಮದೇವನಹಳ್ಳಿ, ರೂಪನಗುಡಿ, ಸಂಗನಕಲ್ಲು, ಸಂಜೀವರಾಯಕೋಟೆ, ಶಂಕರಬಂಡೆ, ಸಿರವಾರ, ಯರ್ರಗುಡಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಜುಲೈ 12 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.