ರೈತರಿಗಾಗಿ ಎಸ್.ಎಂ. ಕೃಷ್ಣ ಜಾರಿಗೆ ತಂದ ಯೋಜನೆಗಳ ಮಾಹಿತಿ

Written by Ramlinganna

Published on:

SM Krishna’s contribution to Karnataka : ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಡಿಸೆಂಬರ್ 10 ರಂದು ಬೆಳಗ್ಗೆ ನಮ್ಮನಗಲಿದ್ದಾರೆ. ಎಸ್ ಎಂ ಕೃಷ್ಣ (93) ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು.

ಅವರು ಮುಖ್ಯಮಂತ್ರಿಯಾಗಿದ್ದಾಗ ಯಾವ ಯಾವ ಯೋಜನೆಗಳನ್ನುಜಾರಿಗೆ ತಂದಿದ್ದರು ಎಂಬುದರ ಮಾಹಿತಿ ಇಲ್ಲಿದೆ.

ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ಈಗ ಮೊಬೈಲ್ ನಲ್ಲೇ ನೋಡಲು ವ್ಯವಸ್ಥೆ ಮಾಡಿಸಿದವರೇ ಎಸ್.ಎಂ ಕೃಷ್ಣರವರು. ಭೂಮಿ ತಂತ್ರಾಂಶದ ಮೂಲಕ ಕಂದಾಯ ಇಲಾಖೆಯಲ್ಲಿ ಮಹಾಕ್ರಾಂತಿ ಮಾಡಿದರು.

2001 ರಲ್ಲಿ.ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಂದಾಯ ದಾಖಲಾತಿಗಳನ್ನು ಕಾಗದರಹಿತವನ್ನಾಗಿ ಮಾಡಲು ಆರಂಭಿಸಿದ ಭೂಮಿ ಸಾಫ್ಟ್ ವೇರ್ ಈಗಲೂ ಚಾಲ್ತಿಯಲ್ಲಿದೆ.

ಇದನ್ನೂ ಓದಿ ವಾಯುಭಾರ ಕುಸಿತ ಮತ್ತೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ

ಈ ಹಿಂದೆ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಲು ವಾರಗಟ್ಟಲೆ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಿತ್ತು. ಇದನ್ನು ತಪ್ಪಿಸಲು ಎಸ್. ಎಂ. ಕೃಸ್ಮ ಮುಖ್ಯಮಂತ್ರಿಯಾಗಿದ್ದ ಭೂಮಿ ಸಾಫ್ಟ್ ವೇರ್ ಅನ್ನು ಘೋಷಿಸಿದ್ದರು.  ಇಂದು ರೈತರು ಕೇವಲ ಒಂದೇ ನಿಮಿಶದಲ್ಲಿ ಮೊಬೈಲ್ನಲ್ಲೇ ಪಹಣಿಯನ್ನು ಪಡೆಯುವದರಸ್ಟರ ಮಟ್ಟಿಗೆ ಭೂಮಿ ಸಾಫ್ಟ್ ವೇರ್ ಅಭಿವೃದ್ಧಿಗೊಂಡಿದೆ.

ಮಹಿಳಾ ಸಬಲೀಕರಣದ ಮುಂಚೂಣಿ ನಾಯಕ

ಎಸ್​ಎಂ ಕೃಷ್ಣ ಅವರು ಹಲವು ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಕೂಡ ಒಂದು. ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಆರಂಭಿಸಿದರು. ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಮನೆ ಮನೆ ತಲುಪಿದ್ದು, ಇದರಿಂದ ಕೋಟ್ಯಾಂತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಎಸ್.ಎಂ. ಕೃಸ್ಣ ಜಾರಿಗೆತಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಹೆಸರುವಾಸಿಯಾಯಿತು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಇಂದಿಗೂ ಚಾಲನೆಯಲ್ಲಿದೆ.

SM Krishna’s contribution to Karnataka ಬಡವರಿಗೆ ವರವಾದ ಯಶಸ್ವಿನಿ ಯೋಜನೆ

ಅನಾರೋಗ್ಯ ಬಡವರಿಗೂ ದೊಡ್ಡ ಶಾಪ. ಈ ಬಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಖರ್ಚು ಮಾಡುವಷ್ಟು ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಬಡವರಿಗೆ ನೆರವಾಗಲು 2003 ರಲ್ಲಿ ಯಶಸ್ವಿನಿ ಯೋಜನೆಯನ್ನು ಎಸ್.ಎಂ.ಕೃಷ್ಣ ಅವರು ಜಾರಿಗೆತಂದರು.

ಬೆಂ-ಮೈ ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ ಕೀರ್ತಿ ಎಸ್.ಎಂ. ಕೃಸ್ಣರವರಿಗೆ ಸಲ್ಲಬೇಕು.

ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ  ಅವರಿಗೆ ಜಗತ್ತಿನಾದ್ಯಂತ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ

ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ನೆರವೇರಿಸಲಾಗುವುದು ಎಂದು ಡಿಸಿಎಂ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೃಷ್ಣ ಅಜಾತಶತ್ರು ಎಂದ ಸಿಎಂ ಸಿದ್ದರಾಮಯ್ಯ

ಕೃಷ್ಣ ನಿಧನದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ” ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ” ಎಂದು ಹೇಳಿದ್ದಾರೆ.

Leave a Comment