Fruits software : ಹೂವು, ಹಣ್ಣು ಹಾಗೂ ತರಕಾರಿ ಬೆಳೆದ ರೈತರಿಗೆ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರಿಗೆ 10 ಸಾವಿರ ರೂಪಾಯಿ ಪ್ಯಾಕೇಜ್ (Relief package guidelines) ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಹಣ್ಣು ತರಕಾರಿ ಬೆಳೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಲಾಗುತ್ತಿದೆ.
2021-22ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ನೀಡಲಾಗುವುದು. ಈಗಾಗಲೇ ಸರ್ಕಾರವು ಹೂವಿನ ಬೆಳೆಗಾರರಿಗೆ 1273 ಲಕ್ಷ ಹಾಗೂ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 6900 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದೆ.
ಫಲಾನುಭವಿಗಳನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ, ರೈತರ ಖಾತೆಗೆ ಹಣ ವರ್ಗಾವಣೆ ಮಾಡಲು ಮಾನದಂಡಗಳೇನೆಂಬುದರ ಮಾಹಿತಿ ಇಲ್ಲಿದೆ.
ಜಿಲ್ಲಾಮಟ್ಟದಲ್ಲಿ ತೀವ್ರತರವಾಗಿ ಹಾನಿಗೊಳಗಾದ ವಾರ್ಷಿಕ ಮತ್ತು ಬಹುವಾರ್ಷಿಕ ಹೂವಿನ ಬೆಳೆಗಳು, ಹಣ್ಣಿನ ಬೆಳೆಗಳಾದ ಮಾವು, ಸಪೋಟ, ಆಂಜೂರ, ಕಲ್ಲಂಗಡಿ, ಕರಬೂಜ, ದಾಳಿಂಬೆ, ಪೇರಲ, ನಿಂಬೆ, ಮೋಸಂಬಿ, ದ್ರಾಕ್ಷಿ, ಅನಾನಸ್, ಪಪ್ಪಾಯ ಮತ್ತು ಬಾಳೆ ಹಾಗೂ ತರಕಾರಿ ಬೆಳೆಗಳಾದ ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ಬದನೆಕಾಯಿ, ಹೂಕೋಸು, ಎಲೆಕೋಸು, ಬೆಂಡೆಕಾಯಿ, ಸಿಹಿಕುಂಬಳ, ಹೀರೇಕಾಯಿ, ಹಾಗಲಕಾಯಿ, ಸೋರೆಕಾಯಿ, ಗಜ್ಜರಿ, ಸಿಹಿಗೆಣಸು, ಬೀನ್ಸ್, ಜವಳಿಕಾಯಿ, ದಪ್ಪ ಮೆಣಸಿನಕಾಯಿ, ಬೀಟ್ ರೂಟ್, ನುಗ್ಗೆಕಾಯಿ, ತೊಂಡೆಕಾಯಿ, ಮೂಲಂಗಿ ಮತ್ತು ಸೊಪ್ಪು ಜಾತಿಯ ತರಕಾರಿ ಬೆಳೆಗಳನ್ನು ಪರಿಹಾರಕ್ಕಾಗಿ ಪರಿಗಣಿಸಲಾಗುವುದು.
ಸಹಾಯಧನ ವಿವರ (Relief package)
ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಗೆ ಗರಿಷ್ಠ 1 ಹೆಕ್ಟೇರಿಗೆ 10 ಸಾವಿರ ರೂಪಾಯಿ ಮತ್ತು ಕನಿಷ್ಟ 2 ಸಾವಿರ ರೂಪಾಯಿ ಮಿತಿಗೊಳಿಸಲಾಗಿದೆ. ಪ್ರದೇಶಕ್ಕನುಸಾರವಾಗಿ ಪರಿಹಾರಧನ ವಿತರಿಸಲಾಗುವುದು. ಹೂವು, ಹಣ್ಣು ಮತತ್ ತರಕಾರಿ ಬೆಳೆಗಾರರಿಗೆ ವಿಸ್ತೀರ್ಣಕ್ಕನುಸಾರವಾಗಿ ಪರಿಹಾರಧನ ವಿತರಿಸಲಾಗುವುದು.
ಫಲಾನುಭವಿಗಳ ಆಯ್ಕೆ ಮತ್ತು ಅರ್ಹತೆ (Selection and Eligibility of Beneficiaries)
ಫಲಾನುಭವಿಗಳ ಆಯ್ಕೆಯನ್ನು ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ಸಮೀಕ್ಷೆಕ್ಕನುಗುಣವಾಗಿ ಆಯ್ಕೆ ಮಾಡಲಾಗುವುದು. ವಾರ್ಷಿಕ ಹೂವು,ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 2021-22ನೇ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಂಡು ಮತ್ತು ಬಹುವಾರ್ಷಿಕ ಬೆಳಗಳಿಗೆ 2020-21ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿ ಪರಿಹಾರ ನೀಡಲಾಗುವುದು.
ಲಾಕ್ಡೌನ್ ಅವಧಿಯಲ್ಲಿ ತೀವ್ರತರವಾಗಿ ಹಾನಿಗೊಳಗಾದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಪರಿಗಣಿಸಲಾಗುವುದು. ಈ ಪರಿಹಾರವನ್ನು ಏಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಬಾಳೆ ಮತ್ತು ಈರುಳ್ಳಿ ಬೆಳಗೆ ಸಂಬಂದಿಸಿದಂತೆ ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಗಣಿಸಿ, ಉಳಿದ ಬೆಳೆಗಳನ್ನು ಏಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಹಾರಧನಕ್ಕಾಗಿ ಪರಿಗಣಿಸಲಾಗುವುದು.
ಫಲಾನುಭವಿಗಳು Fruits software ದಲ್ಲಿ ನೋಂದಾಯಿಸರಬೇಕು. FRUITS ನಲ್ಲಿ FID ದಾಖಲಾಗದೆ ಇದ್ದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಫಲಾನುಭವಿವಾರು FID ಮಾಡಲಾಗುವುದು.ಫಲಾನುಭವಿಗಳಿಗೆ ಆನ್ಲೈನ್ ಮೂಲಕವೇ ಪಾವಿತಿಸಲಾಗುವುದು.
ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸದೆ ಇರುವ ರೈತರು ಈಗಲೂ ಸಹ ಆನ್ ಲೈನ್ ಮೂಲಕ ಅಥವಾ ಹತ್ತಿರದ ರೈತಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.