one week rain alert ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಬೆಳಗ್ಗೆ ಹಾಗೂ ಸಾಯಂಕಾಲ ವೇಳೆಗೆ ಸಾಧಾರ ಮಳೆ ಮುಂದುವರೆದಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಒಂದು ವಾರ ಸಾಮಾನ್ಯ ಮಳೆಯಾಗಲಿದೆ.
ಮಂಗಳೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ಬೆಳಗ್ಗೆ ಮತ್ತು ಸಂಜೆ ಸಾಧಾರಣಹಾಗೂ ತುಂತುರು ಮಳೆಯಾಗಿದೆ. ಉಳಿದಂತೆ ಹಗಲು ಹೊತ್ತು ಅಲ್ಲಲ್ಲಿ ಹನಿ ಮಳೆಯಗಾಗಿದೆ. ಬಾಕಿ ಕಡೆಗಳಲ್ಲಿ ಮೋಡ ಬಿಸಿಲು ಕಂಡುಬಂದಿದೆ.
ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ
ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 12.77 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 17.98 ಮಿ.ಮೀ ಮಳೆಯಾಗಿದೆ. ಅದೇ ರೀತಿ ವಿರಾಜಪೇಟೆ ತಾಲೂಕಿನಲ್ಲಿ 10.12 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 10.20 ಮಿ.ಮೀ. ಸರಾಸರಿ ಮಳೆಯಾಗಿದೆ.
ನಾಪೋಕ್ಲು 3.80, ಸಂಪಾಜೆ 21.50, ಭಾಗಮಂಡಲ 27.80, ವಿರಾಜಪೇಟೆ ತಾಲೂಕಿನಲ್ಲಿ ಹುದಿಕೇರಿ 13.90, ಶ್ರೀಮಂಗಲ 14.80, ಪೊನ್ನಂಪೆಟೇ 5, ಅಮ್ಮತ್ತಿ 7, ಬಾಲೆಳೆ 15, ಸೋಮವಾರಪೇಟೆ ಕಸಬಾ 11 ಮಿ.ಮೀ ಮಳೆಯಾಗಿದೆ.
one week rain alert ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ 13 ರವರೆಗೆ ಸಾಧಾರಣ ಮಳೆ
ಭಾರತೀಯ ಹವಾಮಾನಇಲಾಖೆಯ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವವಿದೆ. ಮಣ್ಣನ ತೇವಾಂಶದ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮೇಲುಗೊಬ್ಬರಹಾಗೂ ಸಸ್ಯ ಸಂರಕ್ಷಣೆ ಸಿಂಪರಣೆ ಮಾಡಬಹುದು.
ಇದನ್ನೂ ಓದಿ : ನಿಮ್ಮ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರು ಸೇರಿಸಲಾಗಿದೆ? ಅವರಿಗೆಷ್ಟು ಜಮೀನಿದೆ? ಇಲ್ಲೇ ಚೆಕ್ ಮಾಡಿ
ತೊಗರಿಯಲ್ಲಿ ಸೊರಗು ರೋಗ ನಿರ್ವಹಣೆಗಾಗಿ ಮೆಟಲಾಕ್ಸಿಲ್ಮತ್ತು ಮ್ಯಾಂಕೋಜೆಬ್ 3 ಗ್ರಾಂ, ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ತೋಯಿಸುವುದು ಎಂದು ತಿಪಟೂರು ತಾಲೂಕು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿಗಳು ಹಾಗೂ ಮುಖ್ಯಸ್ಥರಾದ ಡಾ. ವಿ. ಗೋವಿಂದಗೌಡರು ಪತ್ರಿಕಾ ಪ್ರಕಟನೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಮಳೆಯ ಮಾಹಿತಿ ಪಡೆಯಲು ಕೇವಲ ಒಂದು ಕರೆ ಮಾಡಿ
ಸಾರ್ವಜನಿಕರು, ರೈತರು ತಮ್ಮೂರಿನ ಸುತ್ತಮುತ್ತಇಂದು ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಒಂದು ಕರೆ ಮಾಡಿದರೆ ಸಾಕು, ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಬೇಕು. ಆಗ ಕರೆ ಸ್ವೀಕರಿಸಿದ ಸಿಬ್ಬಂದಿ ನಿಮ್ಮೂರಿನ ವ್ಯಾಪ್ತಿಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ನೀಡುವರು.
ಕಲಬುರಗಿ ಜಿಲ್ಲೆಯಾದ್ಯಂತ ಸಾಧಾರಣ ಮಳೆ
ಕಲಬುರಗಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಕಳೆದೆರಡು ದಿನಗಳ ಹಿಂದೆ ಸೇಡಂ, ಚಿಂತೋಳಿ, ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಆದರೆ ತಾಲೂಕಿನಾದ್ಯಂತ ಮಳೆಯಾಗದೆ ಇರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ಸೇಡಂ ತಾಲೂಕಿನ ಇಟಕಾಲ್ ಗ್ರಾಮ ಸುತ್ತಮುತ್ತ ರಭಸದ ಮಳೆಯಾಗಿದ್ದರೆ ಹಳ್ಳಕೊಳ್ಳಗಳು ತುಂಬಿರ ಹರಿದಿವೆ. ಇದರಿಂದಾಗಿ ಇಟಕಾಲ ತಾಂಡದ ವ್ಯಾಪ್ತಿಯಲ್ಲಿರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಈ ಭಾಗದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ತಗ್ಗುಪ್ರದೇಶಗಳಲ್ಲಿ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಆದರೂ ಸಹ ಬಿಸಿಲನ ಝಳಕ್ಕೆ ಕಮರಿ ಹೋಗಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ.
ಇದನ್ನೂ ಓದಿ ರೇಷನ್ ಕಾರ್ಡ್ ಲಿಸ್ಟ್ ನಿಂದ 5 ಲಕ್ಷ ಜನರ ಹೆಸರು ಡಿಲಿಟ್- ಯಾರ ಹೆಸರು ಡಿಲೀಟ್ ಆಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಯಾದಗಿರಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿಯೂ ಕಳೆದೆರಡು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲಿದ್ದ ರೈತರಿಗೆ ಅಲ್ಪ ಮಳೆ ಜೀವ ತುಂಬಿದೆ. ಮಳೆಯ ಪ್ರಮಾಣ ತುಂಬಾ ಕಡಿಮೆಯಿದೆ.