Rain alert these area ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ 7 ರಿಂದ 9 ರವರೆಗೆ ವಿವಿಧ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಹೌದು, ಹವಾಮಾನ ಇಲಾಖೆಯ ಪ್ರಕಾರ ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಚಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರ ಖಂಡದಲ್ಲಿ ಮಾರ್ಚ್ 7 ರವರೆಗ ಮಳೆ ಹಾಗೂ ಹಿಮಪಾತದ ಎಚ್ಚರಿಕೆಯನ್ನು ನೀಡಲಾಗಿದೆ.
ಮುಂದಿನ 60 ಗಂಟೆಗಳಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಗುಡುಗು ಮತ್ತು ಮಳೆಯೊಂದಿಗೆ ಮತ್ತೊಮ್ಮೆ ಭಾರಿ ಹಿಮಪಾತವಾಗಲಿದೆ ಎಂದು ಹೇಳಲಾಗಿದೆ. ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಮಾರ್ಚ್ 7 ಮತ್ತು 9 ರ ನಡುವೆ ಹದಗೆಡಲಿದೆ. ಹೀಗಾಗಿ ಈ ಮೂರು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Rain alert these area ಪ್ರಸಕ್ತ ಸಾಲಿನಲ್ಲಿ ಮಳೆಯ ಮುನ್ಸೂಚನೆ
ಪ್ರಸಕ್ತ ವರ್ಷ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ. ಹೌದು, ಕಳೆದ ವರ್ಷ ಮಳೆಯಿಲ್ಲದೆ ಕಂಗೆಟ್ಟಿದ ರೈತರಿಗೆ ಈ ವರ್ಷ ಭಾರಿ ಮಲೆಯಾಗುವ ಸುದ್ದಿಯೊಂದನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷ ದೇಶದ ಎಲ್ಲಾ ಕಡೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ ತಿಂಗಳ ನಂತರ ಫೆಸಿಪಿಕ್ ಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿ ಕಡಿಮೆಯಾಗಿ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಹೆಚ್ಚಾಗುವುದರಿಂದ ಮುಂಗಾರಿನಲ್ಲಿ ಉತ್ತಮ ಮಳಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ ತಿಂಗಳನಿಂದ ಮೇ ತಿಂಗಳ ಅವಧಿಯಲ್ಲಿ ಬಹುತೇಕ ಎಲ್ಲಾ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮತ್ತು ಕಡಿಮೆ ತಾಪಮಾನ ಕಾಣುವ ಸಾಧ್ಯತೆಯಿದೆ. ಮಾರ್ಚ್ ನಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಬಿಸಿಗಾಳಿ ಪರಿಸ್ಥಿತಿ ಹೇಗಿರಲಿದೆ ಎಂದು ಈಗಲೇ ಉಹಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.
Rain alert these area ನಿಮ್ಮೂರಿನಲ್ಲಿ ಮಳೆಯಾಗುವ ಮಾಹಿತಿ ಬೇಕೆ ಈ ನಂಬರಿಗೆ ಕರೆ ಮಾಡಿ?
ರೈತರು ಮನೆಯಲ್ಲಿಯೇ ಕುಳಿತು ತಮ್ಮೂರಿನಲ್ಲಿ ಮಳೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಒಂದು ಕರೆ ಮಾಡಿ ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಈಗ ಬೆಳೆದ ತಾಂತ್ರಿಕ ಯುಗದಲ್ಲಿ ಎಲ್ಲವೂ ಸಾಧ್ಯತೆ. ಹೌದು, ವರುಣಮಿತ್ರ ನಂಬರಿಗೆ ಕರೆ ಮಾಡಿದರೆ ಸಾಕು, ಕ್ಷಣಮಾತ್ರದಲ್ಲಿ ರೈತರು ತಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ವರುಣವಿತ್ರ ಉಚಿತ ಸಹಾಯವಾಣಿ ನಂಬರ್ ಯಾವುದು?
ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ತಮ್ಮೂರಿನ ಸುತ್ತಮುತ್ತ ಯಾವಾಗ ಮಳೆಯಾಗುತ್ತದೆ. ಮಳೆಯ ಪ್ರಮಾಣ ಎಷ್ಟಿರುತ್ತದೆ ಎಂಬ ಮಾಹಿತಿಗಳನ್ನು ಪಡೆಯಬಹುದು.
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ರಾಜ್ಯದಲ್ಲಿ ಮುಂದಿನ ಐದು ದಿನ ಮಳೆಯ ಮಾಹಿತಿ ಪಡೆಯಲು ಮೇಘದೂತ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ಆಗಾಗ ತಮ್ಮೂರಿನ ಸುತ್ತಮುತ್ತ ಆಗುವ ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಒಮ್ಮೆ ಇನ್ಸಟಾಲ್ ಮಾಡಿಕೊಂಡರೆ ಸಾಕು.
ರೈತರು ಮನೆಯಲ್ಲಿ ಕುಳಿತು ಯಾವಾಗ ಬೇಕಾದರೂ ಚೆಕ್ ಮಾಡಬಹುದು. ಇದೇ ರೀತಿ ರೈತರು ಸಿಡಿಲು ಎಂಬ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಂಡು ಸಿಡಿಲು ಬೀಳುವ ಐದು ನಿಮಿಷ ಮೊದಲೇ ತಿಳಿದುಕೊಳ್ಳಬಹುದು. ಇದು ರೈತರಿಗೆ ಮುನ್ಸೂಚನೆ ಸಹ ನೀಡುತ್ತದೆ.