Rain alert seven districts ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಕಳೆದ 25 ದಿನಗಳಿಂದ ದುರ್ಬಲಗೊಂಡಿದ್ದ ಮಂಗಾರು ಮಳೆ ಇದೀಗ ಮತ್ತೆ ಚುರುಕುಗೊಂಡಿದ. ಮೈಸೂರು, ದಕ್ಷಿಣ ಕನ್ನಡ ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿಶನಿವಾರ ಮತ್ತೆ ಮಳೆಯಾಗಿದೆ. ಈ ಮಧ್ಯೆ ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಎರಡ್ಮೂರು ವಾರಗಳಿಂದ ರಾಜ್ಯಾದ್ಯಂತ ಮಳೆ ನಾಪತ್ತೆಯಾಗಿತ್ತು. ಇದರಿಂದಾಗಿ ಬೆಳೆಗಳು ಅಲ್ಲೇ ಕಮರಿಹೋಗುತ್ತಿದ್ದವು. ಬೆಳೆಗಳು ಒಣಗುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಇದರ ನಡುವೆಯೇ ಇದೀಗ ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದರೆ, ಕೊಪ್ಪಳ, ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.
ಚಿಕ್ಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಶುಕ್ರವಾರ ಸಂಜೆಯಿಂದಲೇ ಮಳೆ ಆರಂಭವಾಗಿದ್ದು, ರಾತ್ರಿ ದಿನವಿಡೀ ವರುರಣ ಅಬ್ಬರ ಜೋರಾಗಿತ್ತುದ. ದಿಢೀರ್ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನಮಟ್ಟ ಕೊಂಚ ಏರಿಕೆಯಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
Rain alert seven districts ಮಂಗಳೂರು ಜಿಲ್ಲಾದ್ಯಂತ ಉತ್ತಮ ಮಳೆ
ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರ ಜಿಲ್ಲೆಯಲ್ಲಿ ಮತ್ತೆ ಪುನಾರಂಭಗೊಂಡಿದೆ. ಮೂಡಿಗೇರೆ, ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ ಸೇರಿದಂತೆ ಮಲೆನಾಡಿನಲ್ಲಿ ಶುಕ್ರವಾರರಾತ್ರಿ ಆರಂಭವಾದ ಮಳೆ ಶನಿವಾರ ಸಂಜೆ ನಂತರವೂ ಮುಂದುವರೆದಿತ್ತು. ಜುಲೈ ನಲ್ಲಿ ಬಂದಿದ್ದ ಮಳೆ ಆಗ್ಸಟ್ ಆರಂಭದಿಂದಲೇ ಕೈಕೊಟ್ಟಿತ್ತು. ಹೀಗಾಗಿ ಮಳೆಯಮೇಲೆ ಅವಲಂಬಿತ ಬೆಳೆಗಳು ಕಮರಿಹೋಗಿದ್ದವು. ಮಳೆಯಾಶ್ರಿತ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ.
ದಾವರಣಗೆರೆಯಲ್ಲಿ ಉತ್ತಮ ಮಳೆ
ಕಳೆದ ಹದಿನೈದು ರಿಂದ ಇಪ್ಪತ್ತು ದಿನವಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ದಾವರಣಗೆರೆ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ. ಇದರೊಂದಿಗೆ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗಿದ್ದರಿಂದ ರೈತರಲ್ಲಿ ಸಂತಸ ಉಂಟಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಹಣ ಈ ಲಿಸ್ಟ್ ನಲ್ಲಿದ್ದವರಿಗೆ ಜಮೆ- ನಿಮ್ಮ ಹೆಸರಿದೆಯೇ ಚೆಕ್ ಮಾಡಿ
ಮಳೆಯ ಪ್ರಮಾಣ ತೀವ್ರ ಕಡಿಮೆಯಿತ್ತು. ಅಲ್ಲಲ್ಲಿ ತುಂತುರು ಮಳೆಯಾಗಿದ್ದರಿಂದ ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆ ಕಂಡಿದ್ದರಿಂದ ರೈತರಲ್ಲಿ ಸಂತಸ ಇಮ್ಮಡಿಯಾಗಿತ್ತು. ಆದರೆ ಮಳೆ ನಿರೀಕ್ಷೆಯಂತೆ ಆಗದಿದ್ದರಿಂದ ನಿರಾಶೆಯುಂಟು ಮಾಡಿತು.
ನಿಮ್ಮ ಜಿಲ್ಲೆಯಲ್ಲಿ ಎಲ್ಲಿಲ್ಲಿ ಎ ಮಳೆಯಾಗುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಳೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ
https://www.ksndmc.org/default.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹವಾಮಾನ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನಿಮಗೆ ಕರ್ನಾಟಕದ ಮ್ಯಾಪ್ ಕಾಣಿಸುತ್ತದೆ. ಒಂದು ವೇಳ ನಿಮಗೆ ಕರ್ನಾಟಕದ ಮ್ಯಾಪ್ ಕಾಣಿಸದಿದ್ದರಿಂದ ಅಲ್ಲಿ ಮೇಲ್ಗಡೆ ಕಾಣುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿದ ನಂತರ ಡೆಸ್ಕ್ ಟಾಪ್ ಸೈಟ್ ಮೇಲೆ ಕ್ಲಿಕ್ ಮಾಡಬೇಕು.. ಅಲ್ಲಿ ಎಡಗಡೆ ಪ್ಲಸ್ ಸಿಂಬಲ್ ಪಕ್ಕದಲ್ಲಿ Today’s weather, Forecast, Lightning and All map ಕಾಣಿಸುತ್ತದೆ. ಅಲ್ಲಿ Forecast ಮೇಲೆ ಕ್ಲಿಕ್ ಮಾಡಬೇಕು.
ಆಗ ನಮ್ಮ ಕರ್ನಾಟಕ ಮ್ಯಾಪ್ ನಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿಮಳೆಯಾಗುತ್ತದೆ ಎಂಬುದನ್ನು ಚೆಕ್ ಮಾಡಬಹುದು. ಆಗ ನಿಮ್ಮ ಜಿಲ್ಲೆಯಲ್ಲಿ ಮಳೆಯಿದ್ದರೆ ಯಾವ ತಾಲೂಕಿನಲ್ಲಿ ಮಳೆಯಿದೆ ಅಲ್ಲಿ ಕಾಣಿಸುತ್ತದೆ. ನಿಮ್ಮ ಜಿಲ್ಲೆ ಮೇಲೆ ಕ್ಲಿಕ್ ಮಾಡಿದರೆ ಯಾವ ತಾಲೂಕಿನಲ್ಲಿ ಮಳೆಯಿದೆ ಎಂಬುದನ್ನು ಚೆಕ್ ಮಾಡಬಹುದು.
ಪೋನ್ ಕರೆ ಮಾಡಿ ಮಳೆಯ ಮಾಹಿತಿ ಪಡೆಯಿರಿ
ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಮೂಲಕ ಹವಾಮಾನದ ವರದಿ ನೋಡಲು ಸಮಸ್ಯೆಯಾಗುತ್ತಿದ್ದರೆ ವರುಣಮಿತ್ರ ನಂಬರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹೌದುಈ 92433 45433 ನಂಬರಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಕರೆ ಮಾಡಿ ತಿಳಿದುಕೊಳ್ಳಬಹುದು.