Rainalert in 14 districts ರಾಜ್ಯದ ಕೆಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವುದರಿಂದರಾಜ್ಯದ 14 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಹೌದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ದಾವಣೆಗೆರೆ, ಹಾಸನ, ಚಿಕ್ಕಮಗಳೂರು, ಚಿತ್ತದುರ್ಗ, ತುಮಕೂರು, ಕೊಡಗು, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಮೂರು ದಿನ ದಕ್ಷಿಣ ಒಳನಾಡಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ.ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಇಲಾಖೆ ತಿಳಸಿದೆ.
ಭಾನುವಾರ ಬೆಳಗ್ಗೆ 8.30 ಕ್ಕೆ ಅನ್ವಯಿಸಿದಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕೆಲವೆಡೆ ಮಳೆಯಾಗಿದೆ. ರಾಯಚೂರಿನ ಸಿಂಧಗಿಯಲ್ಲಿ ಗರಿಷ್ಠ (5 ಸೆಂ.ಮೀ) ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ವಾಯುವ್ಯ ದಿಕ್ಕಿನಿಂದ ಗಾಳಿ ಬಿಸುತ್ತಿರುವ ಪರಿಣಾಮ ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ ಸರಾಸರಿ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಅನ್ನಭಾಗ್ಯದ ಹಣ ಬಿಡುಗಡೆ- ನಿಮಗೆ ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಜೂನ್ ನಿಂದ ಈವರೆಗೆ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 666 ಮಿ.ಮೀ ಮಳೆಯಾಗಬೇಕಿತ್ತು, ಆದರೆ, ರಾಜ್ಯದಲ್ಲಿ ಈವರೆಗೆ ಕೇವಲ 490 ಮಿ.ಮೀ ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿಯೇ ಶೇ. 23 ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ಜುಲೈ ಕೊನೆಯ ವಾರದಲ್ಲಿ ರಾಜ್ಯದಲ್ಲಿ ಒಂದಿಷ್ಟು ಉತ್ತಮ ಮಳೆಯಾಗಿತ್ತು.ಅದಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ.
Rainalert in 14 districts ಕಲಬುರಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ
ಕಲಬುರಗಿ ಜಿಲ್ಲೆಯ ಸೇಡಂ ಹಾಗೂ ಚಿಂಚೋಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿಅಲ್ಲಲ್ಲಿ ಅಲ್ಪ ಮಳೆಯಾಗಿದೆ. ಹೆಸರು, ಉದ್ದು ಬೆಳೆಗಳ ರಾಶಿ ಮಾಡುವವರಿಗೆ ಮಳೆಯಿಂದಾಗಿ ತೊಂದರೆಯಾಗಿದೆ. ಕೆಲವು ರೈತರ ಬೆಳೆ ಹಾಳಾಗಿದೆ.ಆದರೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ಸೇಡಂ ತಾಲೂಕಿನ ಕೋಲಕುಂದಾ ವ್ಯಾಪ್ತಿಯಲ್ಲಿ ಶನಿವಾರ ಉತ್ತಮ ಮಳೆಯಾಗಿದೆ ಎಂಬುದು ರೈತರಿಂದ ತಿಳಿದುಬಂದಿದೆ.
ನಿಮ್ಮೂರಿನಲ್ಲಾಗುವ ಮಳೆಯ ಮಾಹಿತಿ ಪಡೆಯಿರಿ
ರೈತರು ತಮ್ಮ ಬಳಿಯಿರುವ ಮೊಬೈಲ್ ನಿಂದ ವರುಣಮಿತ್ರ ಉಚಿತ ಸಹಾಯವಾಣಿ 92433 45433 ಗೆ ಕರೆ ಮಾಡಿ ಮಳೆಯ ಮಾಹಿತಿ ಪಡೆದುಕೊಳ್ಳಬಹುದು. ಹೌದು, ಈ ನಂಬರಿಗೆ ಕರೆ ಮಾಡಿದರೆ ಸಾಕು, ನಿಮ್ಮ ಊರಿನಲ್ಲಿ ಎಷ್ಟು ಪ್ರಮಾಣದ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮಳೆಗಾಗಿ ನಡೆಯುತ್ತಿದೆ ನಿತ್ಯ ಪ್ರಾರ್ಥನೆ
ಮುಂಗಾರು ಮಳೆಗಾಗಿ ರಾಜ್ಯದ ವಿವಿಧೆಡೆ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಮಳೆಯಾಗದೆ ಬೆಳೆಗಳು ಅಲ್ಲೇ ಕಮರಿಹೋಗಿದೆ. ಕೆಲುವು ಕಡೆ ಕಾಯಿಕಟ್ಟುವ ಸಂದರ್ಭದಲ್ಲಿ ಮಳೆಯಾಗದೆ ಇರುವುರಿಂದ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಬರ ಘೋಷಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯ ಸರ್ಕಾರವು ಸಹ ಮುಂದೀನ ವಾರದೊಳಗೆ ರಾಜ್ಯದ 120 ಕ್ಕೂ ಹೆಚ್ಚುತಾಲೂಕುಗಳಿಗೆ ಬರಗಾಲ ಪ್ರದೇಶವೆಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯ ಸರ್ಕಾರವು ಕೂಡಲೇ ಬರಗಾಲ ಘೋಷಣೆ ಮಾಡಿದರೆ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಹಾಯವಾಗಲಿದೆ. ಆದರೆ ಎಕರೆಗೆ ಎಷ್ಟು ಹಣ ಪರಿಹಾರ ನೀಡಬೇಕೆಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅತೀ ಶೀಘ್ರದಲ್ಲಿ ಈ ಕುರಿತು ಆದೇಶ ಹೊರಡಿಸುವ ಸಾಧ್ಯತೆಯಿದೆ.
ಮಳೆಯ ಕೊರತೆಯಿಂದಾಗಿ ಬೆಳೆ ಹಾಳಾದರೂ ಸಹ ಬೆಳೆ ವಿಮೆ ಮಾಡಿಸಿದ ರೈತರು ವಿಮಾ ಕಂಪನಿಗೆ ತಿಳಿಸಿ ಬೆಳೆ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.