Pradhana mantra avas yojana : ಭಾರತ ಸರ್ಕಾರದ ಪ್ರಧಾನಮಂತ್ರಿ ಆವಾಸ್ (ನಗರ)-2.0 ಯೋಜನೆಯಡಿ ಸರ್ವರಿಗೂ ಸೂರು ಒದಗಿಸಲು ಶಹಾಬಾದ ಪಟ್ಟಣದ ಅರ್ಹ ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಬಾದ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿ.ಎಲ್.ಸಿ.), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ.), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್.) ಹಾಗೂ ಬಡ್ಡಿ ಸಹಾಯಧನ ವಸತಿ ಯೋಜನೆ (ಇ.ಎಸ್.ಎಸ್.) ಗಳಡಿ ವಸತಿ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಯು ವಿವಾಹಿತ ಮಹಿಳೆ ಆಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ವಿಚ್ಛೇದಿತರು ಅರ್ಹರಾಗಿರುತ್ತಾರೆ.
ಅರ್ಹ ಫಲಾನುಭವಿಗಳು https://pmay-urban.gov.in ವೆಬ್‌ಸೈಟ್‌ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಫಲಾನುಭವಿಗಳು ಸ್ವತ: ಅವಶ್ಯಕ ದಾಖಲೆಗಳೊಂದಿಗೆ ಶಹಾಬಾದ ನಗರಸಭೆ ಕಚೇರಿಯಲ್ಲಿ 2025ರ ಜುಲೈ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಫಲಾನುಭವಿಗಳ ಅರ್ಹತೆ, ಹೊಂದಿರಬೇಕಾದ ದಾಖಲೆಗಳು, ಫಲಾನುಭವಿಗಳ ಆಯ್ಕೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಶಹಾಬಾದ ನಗರಸಭೆ ಕಚೇರಿಯ ಸಂಬAಧಪಟ್ಟ ವಸತಿ ಶಾಖೆಯ ಅಧಿಕಾರಿಗಳನ್ನು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.
Pradhana mantra avas yojana ಆಳಂದ ತಾಲೂಕಿನಿಂದಲೂ ಅರ್ಜಿ ಆಹ್ವಾನ
ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಅವಾಸ್ ಯೋಜನೆ 2.0 ಯೋಜನೆಯಡಿ ಆಳಂದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡಗಳಲ್ಲಿನ ವಸತಿ ರಹಿತ, ನಿವೇಶನ ರಹಿತ (ಕಚ್ಚಾ ಮನೆ ಹೊಂದಿರುವ) ಕುಟುಂಬಗಳಿಂದ ಆನ್‌ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿ.ಎಲ್.ಸಿ.), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ.), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್.) ಹಾಗೂ ಬಡ್ಡಿ ಸಹಾಯಧನ ವಸತಿ ಯೋಜನೆ (ಐಎಸ್‌ಎಸ್) ಗಳಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದ https://pmay.urban.gov.in ವೆಬ್‌ಸೈಟ್‌ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಫಲಾನುಭವಿಗಳಿಗೆ ಆದತ್ಯೆ ನೀಡಲಾಗುತ್ತದೆ.
ಇಚ್ಛೆಯುಳ್ಳ ಅರ್ಹ ಫಲಾನುಭವಿಗಳು 2025ರ ಜುಲೈ 15 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಆಳಂದ ಪುರಸಭೆ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಳಂದ ಪುರಸಭೆ ಕಾರ್ಯಾಲಯದ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಲು ಕೋರಲಾಗಿದೆ.
Pradhana mantra avas yojana ಮನೆ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಕೇಂದ್ರ ಪುರಷ್ಕೃತ ಪ್ರಧಾನಮಂತ್ರಿ ಅವಾಸ್ ಯೋಜನೆ 2.0 ಯೋಜನೆಯಡಿ ಅಫಜಲಪುರ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್ಗಳಲ್ಲಿನ ವಸತಿ ರಹಿತ, ನಿವೇಶನ ರಹಿತ (ಕಚ್ಚಾ ಮನೆ ಹೊಂದಿರುವ) ಕುಟುಂಬಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಫಜಲಪುರ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಜಮೀನಿನ podi ನಕ್ಷೆ ಮೊಬೈಲ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿ.ಎಲ್.ಸಿ.), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ.), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್.) ಹಾಗೂ ಬಡ್ಡಿ ಸಹಾಯಧನ ವಸತಿ ಯೋಜನೆ (ಇ.ಎಸ್.ಎಸ್.) ಗಳಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದ https://pmay-urban.gov.in ವೆಬ್‌ಸೈಟ್‌ದಲ್ಲಿ ಆನ್‌ಲೈನ್ ಮೂಲಕ 2025ರ ಜುಲೈ 15 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆನ್‌ಲೈನ್ ಅರ್ಜಿ ಸಲ್ಲಿಸಿ ಅರ್ಜಿಯೊಂದಿಗೆ ಜೊತೆಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಅಫಜಲಪುರ ಪುರಸಭೆ ಕಾರ್ಯಾಲಯಕ್ಕೆ ಮೇಲ್ಕಂಡ ಕೊನೆಯ ದಿನಾಂಕದೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಪುರಸಭೆ ಕಚೇರಿಯ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಲು ಕೋರಲಾಗಿದೆ.





