ಪಿಎಂ ಕಿಸಾನ್ ಹಣ ನಿಮಗೆಷ್ಟು ಕಂತು ಜಮೆಯಾಗಿದೆ?

Written by Ramlinganna

Updated on:

PM KISAN scheme status ಪಿಎಂ ಕಿಸಾನ್ ಹಣ ಇಲ್ಲಿಯವರೆಗೆ ನಿಮಗೆಷ್ಟು ಕಂತು ಜಮೆಯಾಗಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ರೈತರು ಮನೆಯಲ್ಲಿಯೇ ಕುಳಿತು  ತಮ್ಮಲ್ಲಿರುವ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

PM KISAN scheme status ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಹಣ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಜೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿದ ನಂತರ Get Data ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೈತರ ಹೆಸರು, ತಂದೆಯ ಹೆಸರು, ರೈತರ ಆಧಾರ್ ಕಾರ್ಡ್ ನಂಬರ್ ಕಾಣಿಸುತ್ತದೆ. ಇದರೊಂದಿಗೆ ನಿಮ್ಮ ಪಿಎಂ ಕಿಸಾನ್ ಅಕೌಂಟ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬ ಮಾಹಿತಿ ಚೆಕ್ ಮಾಡಬಹುದು. ಇಕೆವೈಸಿ ಮಾಡಿಸಿದ್ದರೆ ಇಕೆವೈಸಿ ಯಸ್ ಇಲ್ಲದಿದ್ದರೆ ನೋ ಎಂಬ ಮೆಸೇಜ್ ಇರುತ್ತದೆ. ಒಂದು ವೇಳೆ ಇಕೆವೈಸಿ ನೋ ಇದ್ದರೆ ಕೂಡಲೇ ನೀವು ಇಕೆವೈಸಿ ಮಾಡಿಸಿಕೊಳ್ಳಬೇಕು.ಇಲ್ಲದಿದ್ದರೆ ನಿಮಗೆ ಮುಂದಿನ ಕಂತಿನ ಹಣ ಜಮೆಯಾಗುವುದಿಲ್ಲ.

ಇದನ್ನೂ ಓದಿ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ಲ್ಯಾಂಡ್ ಸೀಡಿಂಗ್ ನಲ್ಲಿಯೂ ಯಸ್ ಇರುವುದು ಮುಖ್ಯವಾಗಿದೆ. ಏಕೆಂದರೆ ಅಕೌಂಟ್ ಎಲಿಜಿಬಿಲಿಟಿ ಯಸ್, ಹಾಗೂ ಇಕೆವೈಸಿ ಯಸ್ ಇದ್ದರಷ್ಟೇ ಸಾಲದು, ಇದರೊಂದಿಗೆ ಲ್ಯಾಂಡ್ ಸೀಡಿಂಗ್ ಯಸ್ ಇರಲೇಬೇಕು. ಆಗ ಮಾತ್ರ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ.

ರೈತರ ಖಾತೆಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ?

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿದ ರೈತರ ಖಾತೆಗೆ ಇಲ್ಲಿಯವರೆಗೆ 12 ಕಂತುಗಳ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಿರುವ ಮಾಹಿತಿ ಕಾಣುತ್ತದೆ. ಎಲ್ಲಾ ಕಂತುಗಳು ಯಾವ ಬ್ಯಾಂಕಿನಲ್ಲಿ ಹಾಗೂ ಯಾವಾಗ ಜಮೆಯಾಗಿದೆ ಎಂಬುದನ್ನು ನೋಡಬಹುದು.

ಪಿಎಂ ಕಿಸಾನ್ ಹಣ ಯಾವಾಗ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿ ಜಮೆಯಾಗುತ್ತದೆ. ಅಂದರೆ ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ಜಮೆಯಾಗುತ್ತದೆ.

ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಎಲ್ಲಾ ರೈತರಿಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗುವುದಿಲ್ಲ. ಇದರಲ್ಲಿ ನಿಜವಾದ ಫಲಾನುವಿಗಳಿಗೆ ಯೋಜನೆಯ ಲಾಭ ತಲುಪಲೆಂದು ಸರ್ಕಾರವು  ಇಕೆವೈಸಿ ಕಡ್ಡಾಯಗೊಳಿಸಿತ್ತು. ಇಕೆವೈಸಿ ಮಾಡಿಸಿದ ರೈತರಿಗೆ ಮಾತ್ರ ಇನ್ನೂ ಮುಂದೆ ಪಿಎಂ ಕಿಸಾನ್ ಯೋಜನೆಯ ಹಣ ಜಮಯಾಗುವುದು.  ಒಂದುವೇಳೆ ಇಕೆವೈಸಿ ಮಾಡಿಸಿದ ರೈತರು ಸರ್ಕಾರಿ ನೌಕರರಾಗಿದ್ದರೆ ಅಥವಾ ಕುಟುಂಬದಲ್ಲಿ ಸರ್ಕಾರಿ ನೌಕರ ಸದಸ್ಯರಾಗಿದ್ದರೆ ಅಂತಹವರಿಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗುವುದಿಲ್ಲ. 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು ಹಾಗೂ ತೆರಿಗೆ ಪಾವತಿಸುತ್ತಿರುವ ರೈತರಿಗೂ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದಿಲ್ಲ.

Leave a Comment