Pm kisan farmers list ಈ ರೈತರಿಗೆ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

Pm kisan farmers list : ಪಿಎಂ ಕಿಸಾನ್ ಯೋಜನೆಯ 18 ನೇ ಕಂತಿನ ಹಣ ಇನ್ನೂ ಮುಂದೆ ಕೆಳಗಿರುವ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಜಮೆಯಾಗಲಿದೆ.

ಹಾಗಾದರೆ  ಯಾವ ರೈತರಿಗೆ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಜಮೆಯಾಗಲಿದೆ? ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. ಹಾಗಾದರೆ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ? ಇಲ್ಲೇ ಚೆಕ್ ಮಾಡಿ.

Pm kisan farmers list  ಪಿಎಂ ಕಿಸಾನ್ ಯೋಜನೆಯ ಹಣ ಯಾವ ರೈತರಿಗೆ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 18 ನೇ ಕಂತಿನ ಹಣ ಯಾವ ರೈತರಿಗೆ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸೆಲೆಕ್ಟ್ ಸ್ಟೇಟ್ ನಲ್ಲಿ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮತಾಲೂಕು ಆಯ್ಕೆ ಮಾಡಿಕೊಳ್ಳಬೇಕು ಇದಾದ ನಂತರ ಸೆಲೆಕ್ಟ್ ಬ್ಲಾಕ್ ನಲ್ಲಿಯೂ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು Get Report ಮೇಲೆ ಕ್ಲಿಕ್ ಮಾಡಬೇಕು.

ಆಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ಎ ದಿಂದ ಝಡ್ ವರೆಗೆ ಕ್ರಮಾನುಸಾರ ಹೆಸರುಗಳಿರುತ್ತದೆ. ಮೊದಲ ಪೇಜ್ ನಲ್ಲಿ 50 ರೈತರ ಹೆಸರು ಇರುತ್ತದೆ. ಇನ್ನೊಂದು ಪೇಜ್ ನಲ್ಲಿ 50 ರೈತರ ಹೆಸರು ಕಾಣಿಸುತ್ತದೆ. ಕೆಳಗಡೆ ಇರುವ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡುತ್ತಾ ನಿಮ್ಮ ಹೆಸರು ಚೆಕ್ ಮಾಡಬಹುದು. ಹೌದು ನಿಮ್ಮ ಹೆಸರು ಆ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲವೇ? 

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲವಾದರೆ ನೀವು ಅರ್ಹತೆ ಹೊಂದಿಲ್ಲವೆಂದರ್ಥ.  ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಹೊಂದಿದ್ದರೂ ನಿಮಗೆ ಹಣ ಜಮೆಯಾಗುತ್ತಿಲ್ಲವಾದರೆ ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಒಂದೇ ರೀತಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮಹೆಸರು ಎಲ್ಲಾ ದಾಖಲೆಗಳಲ್ಲಿ ವ್ಯತ್ಯಾಸವಿಲ್ಲದಿದ್ದರೆ ನೀವು ಇಕೆವೈಸಿ ಮಾಡಿಸಿದ್ದೀರೋ ಇಲ್ಲವೋ ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿಈ ಮಹಿಳೆಯರ ಖಾತೆಗೆ ಇಂದು ಗೃಹಲಕ್ಷ್ಮೀ ಯೋಜನೆಯ ಹಣ ಜಮೆ

ನೀವು ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಯಸಸ್ವಿಯಾಗಿ ಮಾಡಿಸಿದ್ದರೂ ನಿಮಗೆ ಹಣ ಜಮಯಾಗುತ್ತಿಲ್ಲವಾದರೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಪತಿ ಅಥವಾ ಪತ್ನಿಅಥವಾ ಮಕ್ಕಳು ಸರ್ಕಾರಿ ನೌಕರಿಯಲ್ಲಿರಬಹುದು. ಅಥವಾ ನೀವು ಪಿಂಚಣಿ ಪಡೆಯುತ್ತಿರಬಹುದು. ಅಥವಾ ನೀವು ಖಾಸಗಿ ನೌಕರರರಾಗಿದ್ದರೂ ತೆರಿಗೆ ಪಾವತಿಸುತ್ತಿದ್ದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆ ಮಾಡುವುದನ್ನು ತಡೆಹಿಡಿಯಲಾಗಿರುತ್ತದೆ.

ಪಿಎಂ ಕಿಸಾನ್ ಯೋಜನೆಗೆ ಮೇಲೆ ತಿಳಿಸಿದ ಎಲ್ಲಾ ಅರ್ಹತೆ ಹೊಂದಿದ್ದರೂ ನಿಮಗೆ ಹಣ ಜಮೆಯಾಗುತ್ತಿಲ್ಲವಾದರೆ ಪಿಎಂ ಕಿಸಾನ್ ಯೋಜನೆ ಆರಂಭವಾದ ನಂತರ ನಿಮ್ಮ ಹೆಸರಿಗೆ ಜಮೀನು ವರ್ಗಾವಣೆಯಾಗಿರಬಹುದು. ಏಕೆಂದರೆ 2019 ರ ನಂತರ ರೈತರ ಹೆಸರಿಗೆ ಜಮೀನು ವರ್ಗಾವಣೆಯಾಗಿದ್ದರೆ ನಿಮಗೆ ಯೋಜನೆಯ ಹಣ ಜಮೆ ಮಾಡುವುದನ್ನು ತಡೆಹಿಡಿಯಲಾಗುತ್ತಿದೆ ಎಂಬುದು ಮಾಧ್ಯಮಗಳಿಂದ ತಿಳಿದುಬಂದಿದೆ.

ಹೆಚ್ಚಿನ ಮಾಹಿತಿಗಾಗಿ 155261 ಅಥವಾ 01124300606 ಗೆ ಸಂಪರ್ಕಿಸಬಹುದು.

Leave a Comment