PM kisan eKYC ಆಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

Written by By: janajagran

Updated on:

PM kisan eKYC Mobile ನಲ್ಲೇ ಮಾಬಹುದು. ಹೌದು, ನೀವು ಇಕೆವೈಸಿ ಮಾಡಿದರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣ ಜಮೆಯಾಗಲಿದೆ. ಹಾಗಾದರೆ ಮನೆಯಲ್ಲಿ ನಿಮ್ಮ ಮೊಬೈಲ್ ನಲ್ಲಿ ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ

ಇನ್ನೂ ಮುಂದೆ ಇ-ಕೆವೈಸಿ ಪೂರ್ಣಗೊಳಿಸಿದರೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 19 ನೇ ಕಂತಿನ ಹಣ ಸಿಗಲಿದೆ. ಇಲ್ಲದಿದ್ದರೆ 19 ನೇ ಕಂತಿನ ಹಣ ಸ್ಥಗಿತಗೊಳ್ಳಬಹುದು.

PM kisan eKYC ಮಾಡಿಸುವುದು ಹೇಗೆ

ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಓಟಿಪಿ ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿರುವ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್  ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.  ರೈತರು ಈ

https://pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಪಿಎಂ ಕಿಸಾನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮಆಧಾರ್ ಕಾರ್ಡ್ ನ್ನು ನಮೂದಿಸೇಕು. ನಂತರ search ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಇಕೆವೈಸಿ ಆಗಿದ್ದರೆ ಅಲ್ಲಿ EKYC is Already Done ಎಂಬ ಮೆಸೇಜ್ ಕಾಣಿಸುತ್ತದೆ. ಅಲ್ಲಿ ನೀವು ಓಕೆ ಬಟನ್ ಮೇಲೆ ಕ್ಲಿಕ್ ಮಾಡಬಹುದು.

ಒಂದು ವೇಳೆ ಇಕೆವೈಸಿ ಆಗಿಲ್ಲವಾದರೆ ಅಲ್ಲಿ ಆಧಾರ್ ನಂಬರ್ ನಮೂದಿಸಿ ಇಮೇಜ್ ಟೆಕ್ಸ್ಟ್ ಬಾಕ್ಸ್ ನಲ್ಲಿ ಮುಂದುಗಡೆ ಕಾಣುವ ಕೋಡ್ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದ ನಂತರ EKYC Successfully submitted ಎಂಬ ಸಂದೇಶ ಕಾಣುತ್ತದೆ. ಆಗ ನಿಮ್ಮಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಒಂದು ವೇಳೆ ಇ-ಕೆವೈಸಿ  Invalid ಅಂತ ಕಂಡರೆ ನೀವು ಹತ್ತಿರದ CSC ಸೆಂಟರ್ ಗೆ ಹೋಗಿ ಸರಿಪಡಿಸಬಹುದು. ಅಥವಾ ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ 155261 ಅಥವಾ 011 24300606 ಗೆ ಕರೆ ಮಾಡಬಹುದು.

ಏನಿದು PM kisan eKYC (what is E-kYC)

EKYC means Electronic Know your Client ಅಂದರೆ ಬ್ಯಾಂಕುಗಳಂತಹ ಸಂಸ್ಥೆಗಳು ಬಳಸುವ ನಿವಾಸಿ ದೃಢೀಕರಣದ ಮಾರ್ಗವಾಗಿದೆ. ಆಧಾರ್ ಆಧಾರಿತ ದೃಢೀಕರಣದ ಮೂಲಕ ನಿಮ್ಮ ಗುರುತನ್ನು ವಿದ್ಯುನ್ಮಾನವಾಗಿ ಪರಿಶೀಲಿಸುವುದರಿಂದ ಇಕೆವೈಸಿಯನ್ನು ಆಧಾರ್ ಆಧಾರಿತ ಇಕೆವೈಸಿ ಎಂದು ಕರೆಯಲಾಗುವುದು. ಆಧಾರ್ ಆಧಾರಿತ ಇಕೆವೈಸಿ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಯನ್ನು ಸೇವಾ ಪೂರೈಕೆದಾರರಿಗೆ ತಕ್ಷಣವೇ ಒದಗಿಸುತ್ತದೆ.

ಇದನ್ನೂ ಓದಿ ಆಧಾರ್ ಲಿಂಕ್ ಆಗದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಆದಾರ್ ಕಾರ್ಡ್ ನಂತಹ ದಾಖಲೆ ಬಳಸಿಕೊಂಡು ನಮ್ಮ ಗುರುತು ಮತ್ತು ಇತರ ಮಾಹಿತಿ ನಿರ್ಧಿಷ್ಟತೆಗಳನ್ನು ಪರಿಶೀಲಿಸಲು ಬಳಸುವುದಕ್ಕಾಗಿ ಇಕೆವೈಸಿ ಮಾಡಲಾಗುವುದು.

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಬಹುದು. ಇದರಿಂದಾಗಿ ಹಿಂದಿನ ಎಷ್ಟು ಕಂತುಗಳು ನಿಮ್ಮ ಖಾತೆಗೆ ಬಂದಿದೆ ಈಗಿನ ಕಂತಿನ ಸ್ಟೇಟಸ್ ಏನೆಂಬುದರ ಮಾಹಿತಿಯನ್ನು ನೋಡಬಹುದು. ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಗೂಗಲ್ ನಲ್ಲಿ ಪಿಎಂ ಕಿಸಾನ್ ಸ್ಟೇಟಸ್ ಎಂದು ಟೈಪ್ ಮಾಡಬೇಕು. ಆಗ ಅಲ್ಲಿ ಕಾಣುವ ಪಿಎಂ ಕಿಸಾನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಪಿಎಂ ಕಿಸಾನ್ ಯೋಜನೆ ಪೇಜ್ ಓಪನ್ ಆಗುತ್ತದೆ.ಅಲ್ಲಿ ನೀವು ನಿಮ್ಮ ಆಧಾರ್ ನಂಬರ್, ಅಥವಾ ಬ್ಯಾಂಕ್ ಅಕೌಂಟ್ ನಂಬರ್ ಅಥವಾ ಮೊಬೈಲ್ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ Get Data ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ  ಆಧಾರ್ ಕಾರ್ಡ್ ನಂಬರ್ ಸೆಲೆಕ್ಟ್ ಮಾಡಿಕೊಂಡರೆ ಆಧಾರ್ ಕಾರ್ಡ್ ನಂಬರ್ ನಮೂದಿಸಿ Get Data ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು,  ಊರು, ನಿಮ್ಮ ಮೊಬೈಲ್ ನಂಬರ್, ಜಿಲ್ಲೆ ಸೇರಿದಂತೆ ಇಲ್ಲಿಯರೆಗೆ ಎಷ್ಟು ಕಂತುಗಳು ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮೆಯಾಗಿದೆ ಎಂಬುದು ಕಾಣುತ್ತದೆ.

Leave a Comment