ರೈತರಿಗೆ ಗುಡ್ ನ್ಯೂಸ್ ಒಂದು ತಿಂಗಳ ಮೊದಲ ಪಿಎಂ ಕಿಸಾನ್ ಹಣ ಬಿಡುಗಡೆ

Written by Ramlinganna

Published on:

Pm kisan credit check : ರೈತ ಬಾಂಧವರಿಗೆ ಗುಡ್ ನ್ಯೂಸ್ ಇಲ್ಲಿದೆ. ಒಂದು ತಿಂಗಳ ಮೊದಲೈ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಿದೆ. ಹೌದು ರೈತ ಮಿತ್ರರೇ ಪ್ರಧಾನಿ ನರೇಂದ್ರ ಮೋದಿಯವರು ಒಂದು ತಿಂಗಳ ಮೊದಲೇ ಅಂದರೆ ಬುಧವಾರ ಬೆಳಗ್ಗೆ ಪಿಎಂ ಕಿಸಾನ್ ಯೋಜನೆಯ 21 ನೇ ಕಂತಿನ ಹಣ ಬಿಡುಗಡೆಯಾಯಿತು. ದೇಶದ 9 ಕೋಟಿ ರೈತರಿಗೆ 18000 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ. ರೈತರ ಖಾತೆಗೂ ಪಿಎಂ ಕಿಸಾನ್ ಹಣ ಜಮೆಯಾಗಿದೆ. ಯಾವ  ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಿದೆ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಇದನ್ನೂ ಓದಿ ನಿಮ್ಮ ಜಮೀನಿನ ಓರಿಜಿನಲ್ ಟಿಪ್ಪಣಿ Mobile ನಲ್ಲಿ ಹೀಗೆ ಚೆಕ್ ಮಾಡಿ

ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಮೇ 19 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ ಬಿಡುಗಡೆ ಮಾಡಿದರು.ಭೂಮಿ ವಿವರಘಲು, ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆ ಮತ್ತು ಇಕೆವೈಸಿ ಪೂರ್ಣಗೊಳಿಸಿದ ರೈತರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

Pm kisan credit check  ಖಾತೆಗೆ ಹಣ ಜಮೆ ಆಗಿದೆನೋ ಇಲ್ಲವೋ ತಿಳಿಯುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಡಿ ತಮ್ಮ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಪರಿಶೀಲಿಸಲು ರೈತರು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

https://pmkisan.gov.in/Rpt_BeneficiaryStatus_pub.aspx

ಅಲ್ಲಿ ಫಲಾನುಭವಿಗಳ ಪಟ್ಟಿ’ ಆಯ್ಕೆ ಮಾಡಬೇಕು. ನಂತರ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ ‘ವರದಿ ಪಡೆಯಿರಿ’ ಕ್ಲಿಕ್ ಮಾಡಿದರೆ, ಫಲಾನುಭವಿಗಳ ಪಟ್ಟಿ ಪ್ರದರ್ಶನಗೊಳ್ಳುತ್ತದೆ. ಆ ಪಟ್ಟಿಯಲ್ಲಿರುವವರ ಖಾತೆಗೆ ಹಣ ಜಮೆ ಆಗಿರುತ್ತದೆ. ಜತೆಗೆ ಬ್ಯಾಂಕ್‌ನಿಂದ ಮೆಸೇಜ್ ಕೂಡ ಬಂದಿರುತ್ತದೆ.

21ನೇ ಕಂತಿನ ಪಿಎಂ ಕಿಸಾನ್ ಹಣ ಬರದಿದ್ದರೆ, ಅದಕ್ಕೆ ಕೆಲವು ಕಾರಣಗಳಿರಬಹುದು. ಫೆಬ್ರವರಿ 1, 2019 ರ ನಂತರ ಭೂಮಿ ಮಾಲೀಕತ್ವ ಪಡೆದ ರೈತರು, ಒಂದೇ ಕುಟುಂಬದ ಇಬ್ಬರು ಸದಸ್ಯರು (ಉದಾಹರಣೆಗೆ ಗಂಡ-ಹೆಂಡತಿ, ವಯಸ್ಕ ಮಗ ಮತ್ತು ತಾಯಿ) ಲಾಭ ಪಡೆಯುತ್ತಿದ್ದರೆ, ಅಂತಹ ಪ್ರಕರಣಗಳಲ್ಲಿ ಹಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೌತಿಕ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ಹಣ ಬರುವುದಿಲ್ಲ.

ಅಲ್ಲದೆ, ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಅಥವಾ ವಿವರಗಳಲ್ಲಿ ವ್ಯತ್ಯಾಸವಿದ್ದರೆ ಕೂಡ ಹಣ ಬರುವುದಿಲ್ಲ.

Leave a Comment