ಈ ದಾಖಲೆ ಸಲ್ಲಿಸಿದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

PM Kisan to submit document  ಪಿಎಂ ಕಿಸಾನ್ ಯೋಜನೆಯಲ್ಲಿ ಈಗ ಬದಲಾವಣೆ ಮಾಡಲಾಗಿದೆ. ಅದೇನಾಪ್ಪಾ ಬದಲಾವಣೆ ಅಂದುಕೊಂಡಿದ್ದೀರಾ. ಈಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಲು ಕೆಲವು ದಾಖಲೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಪಲಾನುಭವಿಯಾಗಬೇಕಾದರೆ ಇನ್ನೂ ಮುಂದೆ ರೈತರು ಪಡಿತರ ಚೀಟಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಿಂತ ಮುಂಚಿತವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿ ಸಲ್ಲಿಸಿ ನೋಂದಣಿ ಮಾಡಿಸಲಾಗುತ್ತಿತ್ತು. ಆದರೆ ಈಗ ಪಡಿತರ ಚೀಟಿಯನ್ನು ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

ರೈತರೇಕೆ ಪಡಿತರ ಚೀಟಿ ಸಲ್ಲಿಸಬೇಕು?

ಪಿಎಂ ಕಿಸಾನ್ ಯೋಜನೆಯಡಿ  ಕೆಲವು ರಾಜ್ಯಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಹೆಸರು ನೋಂದಾಯಿಸಿ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆಂದು ಈಗ ಪಡಿತರ ಚೀಟಿ ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವುದಕ್ಕಾಗಿ ಹಾಗೂ ಅರ್ಹರಿಗೆ ಮಾತ್ರ ಸೌಲಭ್ಯ ಒದಗಿಸಲು ಈಗ ಪಿಎಂ ಕಿಸಾನ್ ಯೋಜನೆಯ ನೋಂದಣಿಯಲ್ಲಿ ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.

ಪಡಿತರ ಚೀಟಿ ಸಲ್ಲಿಸುವುದು ಹೇಗೆ

ರೈತರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸುವಾಗ ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು.  ಹೆಸರು ನೋಂದಾಯಿಸುವಾಗ ಪಡಿತರ ಚೀಟಿಯ ಪ್ರತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಪಡಿತರ ಚೀಟಿಯನ್ನು ಪಿಡಿಎಫ್ ಪೈಲ್ ನಲ್ಲಿ ಸೇವ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.

PM Kisan to submit document  ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನಲ್ಲೂ ಬದಲಾವಣೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇದಕ್ಕಿಂತ ಮುಂಚಿತವಾಗಿ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಎರಡರಲ್ಲಿ ಒಂದನ್ನು ನಮೂದಿಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಸ್ಟೇಟಸ್ ಚೆಕ್ ಮಾಡಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ರೈತರು ಸ್ಟೇಟಸ್ ಚೆಕ್ ಮಾಡಬೇಕಾದರೆ ಮೊಬೈಲ್ ನಂಬರ್ ಅಥವಾ ರೆಜಿಸ್ಟ್ರೇಶನ್ ನಂಬರ್ ನಮೂದಿಸಬೇಕಾಗುತ್ತದೆ. ನಂತರ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಸ್ಟೇಟಸ್ ಚೆಕ್ ಮಾಡಬಹುದು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ನೋಂದಣಿ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಹೊಸ ಫಲಾನುಭವಿಯಾಗಲು ರೈತರು ಮೊಬೈಲ್ ನಲ್ಲೇ ನೋಂದಣಿ ಮಾಡಿಸಬಹುದು. ಹೌದು, ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಬಹುದು. ರೈತರು ನೋಂದಣಿ ಮಾಡಿಸಲು ಈ

https://pmkisan.gov.in/RegistrationFormnew.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಗರ ಪ್ರದೇಶದ ರೈತರೋ ಅಥವಾ ಗ್ರಾಮಾಂತರ ರೈತರೋ ಎಂಬುನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ  ಆಧಾರ್ ಕಾರ್ಡ್ ಹಾಗೂ  ಮೊಬೈಲ್ ನಂಬರ್ ನಮೂದಿಸಿ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಕಾಣುವ  ಇಮೇಜ್ ಟೆಕಸ್ಟ್ ಕೋಡ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲಿಗೆ ಓಟಿಪಿ ಮೆಸೆಜ್ ಬರುತ್ತದೆ. ಅದನ್ನು ನಮೂದಿಸಿದ ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ತಂದೆಯ ಹೆಸರು, ಊರು, ಹೋಬಳಿ, ತಾಲೂಕು, ಜಿಲ್ಲೆ ಜಮೀನಿನ ಸರ್ವೆ ನಂಬರ್, ಪಾಸ್ಬುಕ್ ಹಾಗೂ ಪಡಿತರ ಚೀಟಿಯನ್ನು ಅಲ್ಲಿ ತಿಳಿಸಿದಂತೆ ಭರ್ತಿ ಮಾಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತರು 011-24300606 ಅಥವಾ 155261 ಗೆ ಸಂಪರ್ಕಿಸಬಹುದು.

Leave a Comment