PMkian ineligible list ಬಿಡುಗಡೆ: ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Updated on:

PMkian ineligible list ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ. ಹೌದು, ಇನ್ನೂ ಮುಂದೆ ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ.

ಹಾಗಾದರೆ ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಫಲಾನುಭವಿಗಳು ಯಾರ್ಯಾರಿದ್ದಾರೆ? ಅನರ್ಹ ಫಲಾನುಭವಿಗಳು ಯಾರಿದ್ದಾರೆ? ಅವರಿಗೇಕೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

PMkian ineligible list ಪಿಎಂ ಕಿಸಾನ್ ಅನರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಅನರ್ಹ ರೈತರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/VillageDashboard_Portal.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮವಾರು (village dashboard) ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಯಾವ ರೈತರು ಅರ್ಹರಾಗಿದ್ದಾರೆ ಯಾವ ರೈತರು ಅನರ್ಹರಾಗಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು. ಇಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ ನೀವು Submit ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ Summary, Payment status, Aadhaar authentication Status  ಹಾಗೂ online Registration status ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಆಧಾರ್ ಅಥೆಂಟಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ಹೆಸರು ಕಾಣಿಸುತ್ತದೆ. ಇದರೊಂದಿಗೆ Total Ineligible ಲಿಸ್ಟ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಅನರ್ಹ ರೈತರ ಹೆಸರು ಹಾಗೂ ತಂದೆಯ ಹೆಸರು ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಯ 15ನೇ ಕಂತಿಗೆ ಅನರ್ಹರಾಗಿದ್ದೀರೆಂದರ್ಥ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಜಮೆಯಾಗುವುದಿಲ್ಲ.

ಅನರ್ಹ ರೈತರು ಯಾರು?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಮಾತ್ರಕ್ಕೆ ಎಲ್ಲರೂ ಫಲಾನುಭವಿಗಳು ಆಗುವುದಿಲ್ಲ. ಪಿಎಂ ಕಿಸಾನ್ ಯೋಜನೆಗೆ ಅರ್ಹತೆಯಿದ್ದರೋ ಇಲ್ಲವೋ ಎಂಬುದು ಮುಖ್ಯವಾಗಿರುತ್ತದೆ. ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಸಣ್ಣಮತ್ತು ಅತೀ ಸಣ್ಣ ರೈತರಾಗಿರುಬೇಕು. ಅವರು ಸರ್ಕಾರಿ ನೌಕರರಾಗಿರಬಾರದು. ಅವರ ಕುಟುಂಬದಲ್ಲಿಯೂ ಕುಟುಂಬದ ಸದಸ್ಯರಿಗೆ ನೌಕರಿ ಇರಬಾರದು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಹಾಗೂ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಪಿಂಚಣಿ ಪಡೆಯುವವರಾಗಿರಬಾರದು. ತೆರಿಗೆ ಪಾವತಿಸುವವರಾಗಿರಬಾರದು. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಅಂದರೆ ಪತಿ, ಪತ್ನಿ, ಮಕ್ಕಳ ಹೆಸರು ನೋಂದಣಿ ಮಾಡಿಸಿಕೊಂಡರೆ  ಅವರೂ ಸಹ ಅನರ್ಹರಾಗಿರುತ್ತಾರೆ.

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸುವಾಗ ರೈತರು ತಪ್ಪಾಗಿ ದಾಖಲೆಗಳನ್ನು ಸಲ್ಲಿಸಿದ್ದರು ಅವರ ಹೆಸರು ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ.  ಆಧಾರ್ ಕಾರ್ಡ್, ಪಡಿತರಚೀಟಿ, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿಯಲ್ಲಿ ಹೆಸರು  ಒಂದೇ ರೀತಿಯಾಗಿರಬೇಕು. ಹೆಸರು ಮತ್ತು ತಂದೆಯ ಹೆಸರು ತಾಳೆಯಾಗದಿದ್ದರೆ ಅಂತಹವರ ಹೆಸರುಗಳನ್ನು ಸಹ ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅರ್ಹತೆ ಪಡೆದವರು ಇಕೆವೈಸಿ ಮಾಡಿಸುವುದು ಕಡ್ಡಾಯ

ಪಿಎಂ ಕಿಸಾನ್ ಯೋಜನೆಗೆ ಎಲ್ಲಾ ಅರ್ಹತೆ ಪಡೆದವರು ಇಕೆವೈಸಿ ಮಾಡಿರಲೇಬೇಕು. ಇಕೆವೈಸಿ ಮಾಡದಿದ್ದರೆ ಅವರು ಅರ್ಹತೆಯಿದ್ದರೂ ಸಹ ಮುಂದಿನ ಕಂತಿನ ಹಣ ಜಮೆಯಾಗುವುದಿಲ್ಲ. ಇಲ್ಲಿಯವರೆಗೆ ಎಲ್ಲಾಕಂತುಗಳು ಬಂದಿರಬಹುದು. ಆದರೆ ಮುಂದಿನ ಕಂತಿನ ಹಣ ತಡೆಹಿಡಿಯುವ ಸಾಧ್ಯತೆಯಿದೆ. ಹಾಗಾಗಿ ಇಕೆವೈಸಿ ಮಾಡದೆ ಇರುವ ರೈತರು ಕೂಡಲೇ ಇಕೆವೈಸಿ ಮಾಡಿಕೊಳ್ಳಬಹುದು.

Leave a Comment