Pm kisan likely to be credit ಪಿಎಂ ಕಿಸಾನ್ ಯೋಜನೆಯ 14ನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗೆ ಇದೇ ತಿಂಗಳ ಜುಲೈ 28 ರಂದು ಜಮೆ ಮಾಡಲಾಗುವುದು. ಹೌದು, ಇದೇ ತಿಂಗಳು ಜುಲೈ 28 ರಂದು ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ನಡೆಯುವ ರೈತರ ಕಾರ್ಯಕ್ರಮದಲ್ಲಿ ದೇಶದ 9 ಕೋಟಿಗೂ ಅಧಿಕ ರೈತರ ಖಾತೆಗೆ 14ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ರೈತರು 14ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಅಂದು ದೇಶದ ಎಲ್ಲಾ ರೈತರ ಖಾತೆಗೆ ಏಕಕಾಲದಲ್ಲಿ ಪ್ರತಿಯೊಬ್ಬ ರೈತರ ಖಾತೆಗೆ 2 ಸಾವಿರ ರೂಪಾಯಿಯಂತೆ ಒಟ್ಟು 18 ಸಾವಿರ ಕೋಟಿಗೂ ಅಧಿಕ ಹಣವನ್ನು ಜಮೆ ಮಾಡುವ ಎಲ್ಲಾ ಸಾಧ್ಯತೆಯಿದೆ.
Pm kisan likely to be credit ಪಿಎಂ ಕಿಸಾನ್ 14ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮರಾಜ್ಯ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಅಲ್ಲಿ ನಿಮ್ಮೂರಿನಲ್ಲಿ ಯಾವ ಯಾವ ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರಿರಬೇಕು. ಇದರೊಂದಿಗೆ ನೀವು ಇಕೆವೈಸಿ ಮಾಡಿಸಿರಬೇಕು.
ಫಲಾನುಭವಿಗಳ ಪಟ್ಟಿಯಲ್ಲಿದ್ದುಇಕೆವೈಸಿ ಆಗಿರದಿದ್ದರೆ ನಿಮಗೆ 14ನೇ ಕಂತಿನ ಹಣ ಜಮೆಯಾಗುವುದಿಲ್ಲ. ಇದರೊಂದಿಗೆ ನಿಮ್ಮ ಹೆಸರು ಆಧಾರ್ ಕಾರ್ಡ್ ಜಮೀನಿನ ಪಹಣಿ (ಉತಾರ) ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿಯಾಗಿರಬೇಕು.
ನಿಮ್ಮ ಹೆಸರಿನಲ್ಲಿರುವ ಜಮೀನು ರೈತ ಸಂಪರ್ಕ ಕೇಂದ್ರದ ಮೂಲಕ ಲಿಂಕ್ ಆಗಿರಬೇಕು. ಅಂದರೆ ಎಫ್ಐಡಿ ಆಗಿದ್ದರೆ ಮಾತ್ರ ನಿಮ್ಮಗೆ 14ನೇ ಕಂತಿನ ಹಣ ಜಮೆಯಾಗುವ ಎಲ್ಲಾಸಾಧ್ಯತೆಗಳಿವೆ.
ಯಾವ ಯಾವ ತಿಂಗಳಲ್ಲಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ?
ನಿಮಗೆಲ್ಲಾ ಗೊತ್ತಿದ್ದ ಹಾಗೆ ಪಿಎಂ ಕಿಸಾನ್ ಹಣವನ್ನು ಫಲಾನುಭವಿಗಳ ಖಾತೆಗೆ ಪ್ರತಿ ವರ್ಷ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಜಮೆ ಮಾಡುತ್ತದೆ. ಪಿಎಂ ಕಿಸಾನ್ ಯೋಜನೆಯ ಪ್ರಕಾರ ಮೊದಲನೇ ಕಂತು ಏಪ್ರೀಲ್ – ಜುಲೈ ತಿಂಗಳ ಅವಧಿಯಲ್ಲಿ ಜಮೆಯಾಗುತ್ತದೆ. ಎರಡನೇ ಕಂತು ಆಗಸ್ಟ್ – ನವೆಂಬರ್ ತಿಂಗಳ ಅವಧಿಯಲ್ಲಿ ಜಮೆಯಾಗುವುದು.
ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ
ಅದೇ ರೀತಿ ಮೂರನೇ ಕಂತು ಡಿಸೆಂಬರ್ –ಮಾರ್ಚ್ ತಿಂಗಳಲ್ಲಿಜಮೆಯಾಗುವುದು. ಕಳೆದ ಕಂತು ಅಂದರೆ 13ನೇ ಕಂತು ಫೆಬ್ರವರಿ 27 ರಂದು ಜಮೆಯಾಗಿತ್ತು. ಜುಲೈ 28 ರಂದು ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ರೈತ ಸಮಾವೇಶ ಇರುವುದರಿಂದ ಜುಲೈ 28 ರಂದು ಜಮೆಯಾಗುವ ಎಲ್ಲಾ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
14ನೇ ಕಂತು ಜಮೆಯಾಗಲು ಲ್ಯಾಂಡ್ ಸೀಡಿಂಗ್ ಆಗಿರಬೇಕು ಹಾಗೂ ಇಕೆವೈಸಿ ಮಾಡಿಸುವುದು ಕಡ್ಡಾಯ
ಪಿಎಂ ಕಿಸಾನ್ ಯೋಜನೆಯ ಹಣ ನಿಜವಾದ ಫಲಾನುಭವಿಗಳಿಗೆ ತಲುಪಬೇಕೆಂದು ಇಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದೆ. ಸ್ಟೇಟಸ್ ಪೇಜ್ ನಲ್ಲಿ ಲ್ಯಾಂಡ್ ಸೀಡಿಂಗ್ ಹಾಗೂ ಇಕೆವೈಸಿ ಎದುರು ಯಸ್ ಇರಲೇಬೇಕು. ಪಿಎಂ ಕಿಸಾನ್ ಸ್ಟೇಟಸ್ ಪೇಜ್ ನಲ್ಲಿ ಚೆಕ್ ಮಾಡುವಾಗ ಇಕೆವೈಸಿ ಹಾಗೂ ಲ್ಯಾಂಡ್ ಸೀಡಿಂಗ್ ಯಸ್ ಇರದಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಇಕೆವೈಸಿ ಹಾಗೂ ಲ್ಯಾಂಡ್ ಸೀಡಿಂಗ್ ಸರಿಪಡಿಸಿಕೊಳ್ಳಬಹುದು.