Pension beneficiary list ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Updated on:

Pension beneficiary list:  ವೃದ್ಯಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಇನ್ನಿತರ ಪಿಂಚಣಿ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ  ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಕರ್ನಾಟಕ ರಾಜ್ಯದಲ್ಲಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದವರು ತಮಗೆ ಪಿಂಚಣಿ ಹಣ ಜಮೆಯಾಗುತ್ತಿದೆಯೋ ಇಲ್ಲವೋ ಹಾಗೂ ಯಾವ ಯಾವ ತಿಂಗಳಲ್ಲಿ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ದೇವಸ್ಥಾನದ ಹತ್ತಿರವಿರುವ ಬಾವಿ ಕೆರೆ ನದಿಗಳಲ್ಲಿ ನಾಣ್ಯಳನ್ನೇಕೆ ಎಸೆಯುತ್ತಾರೆ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ

Bhagayalakshmi

Pension beneficiary list ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ವೃದ್ಯಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಂಚಣಿ ಪಡೆಯುವವರ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.  ಪ್ರದೇಶವಾರು ಪಿಂಚಣಿ ಮಾಹಿತಿ ಕೆಳಗಡೆ ನಿಮಗೆ ಗ್ರಾಮೀಣ ಹಾಗೂ ನಗರ ಎಂಬ ಎರಡು ಆಯ್ಕೆಗಳು ಇರುತ್ತವೆ. ನೀವು ಗ್ರಾಮಾಂತರ ಪ್ರದೇಶದವರಾಗಿದ್ದರೆ ಗ್ರಾಮೀಣ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಹೋಬಳಿಯಲ್ಲಿಯಾವ ಯಾವ ಗ್ರಾಮಗಳು ಬರುತ್ತವೆ. ಆ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಊರು ಆಯ್ಕೆಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಂಚಣಿದಾರರ ಐಡಿ, ಪಿಂಚಣಿದಾರರ ಹೆಸರು, ತಂದೆಯ ಹೆಸರು, ವರ್ಗ, ಪಿಂಚಣಿ ಯೋಜನೆಯ ಹೆಸರು, ಯಾವಾಗಿನಿಂದ ಪಿಂಚಣಿ ಪಡೆಯುತ್ತಿದ್ದೀರಿ ಹಾಗೂ  ನಿಮಗೆ ಎಷ್ಟು ಪಿಂಚಣಿ ಜಮೆಯಾಗುತ್ತಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ : Bara parihara bidugade: ಈ ರೈತರಿಗೆ 8.90 ಕೋಟಿ ಬರ ಪರಿಹಾರ ಜಮೆ

ಪಿಂಚಣಿ ವಿವರಗಳು ಮೇಲೆ ಕ್ಲಿಕ್ ಮಾಡಿದರೆ  ನಿಮ್ಮ ಪಿಂಚಣಿ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಪಿಂಚಣಿ ಸಹಾಯವಾಣಿ

ಪಿಂಚಣಿ ಕುರಿತಂತೆ ಮಾಹಿತಿ ಪಡೆಯಲು ಫಲಾನುಭವಿಗಳು ಪಿಂಚಣಿ ಸಹಾಯವಾಣಿ ನಂಬರಿಗೆ ಕರೆ ಮಾಡಬಹುದು. 080 22232040 ಗೆ ಕರೆ ಮಾಡಬಹುದು. ಈ ನಂಬರಿಗೆ ಕರೆ ಮಾಡಿ ಪಿಂಚಣಿಯ ಮಾಹಿತಿ ಪಡೆಯಬಹುದು.

ಬೆಳೆ ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮ ಬೆಳೆ ಸಾಲಮನ್ನಾ ಸ್ಟೇಟಸ್ ನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.  2018 ರಲ್ಲಿ ಬೆಳೆ ಸಾಲಮನ್ನಾ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಆಗ ಕೆಲವು ರೈತರಿಗೆ ತಾಂತ್ರಿಕ ತೊಂದರೆಗಳಿಂದ ಸಾಲ ಮನ್ನಾ ಆಗಿದ್ದಿಲ್ಲ. ನಂತರ ದಾಖಲಾತಿಗಳ ಪರಿಶೀಲನೆ ನಂತರ ಕೆಲವು ರೈತರಿಗೆ ಸಾಲಮನ್ನಾ ಮಾಡಲಾಗಿತ್ತು. ಹಾಗಾಗಿ ಯಾರ ಯಾರ ಸಾಲಮನ್ನಾ ಆಗಿದೆ ಎಂಬುದನ್ನು ರೈತರು ಚೆಕ್ ಮಾಡಬಹುದು.

ಬೆಳೆ ಸಾಲಮನ್ನಾ ಸ್ಟೇಟಸ್ ನ್ನು ಚೆಕ್ ಮಾಡಲು  ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ವಾಣಿಜ್ಯ ಬ್ಯಾಂಕಿಗೆ ಸಾಲಮನ್ನಾ ವರದಿ ಕಾಣಿಸುತ್ತದೆ. ಅಂದರೆ ನೀವು ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಇಲ್ಲಿ ಚೆಕ್ ಮಾಡಬಹುದು.  ಇಲ್ಲಿ ಮಾದರಿಯಲ್ಲಿ ರೈತ, ಜಿಲ್ಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರು ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಅವರ ಸಾಲಮನ್ನಾ ರಿಪೋರ್ಟ್ಓಪನ್ ಆಗುತ್ತದೆ.

Leave a Comment