ಜುಲೈ 18 ರೊಳಗೆ 12.84 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ

Written by Ramlinganna

Updated on:

Pay 12.84 crore to farmers  ಕಳೆದ 2022-2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಮಳೆ ಬಂದು 4-10 ದಿನಗಳೊಳಗೆ ದೂರು ದಾಖಲಿಸಿದ ರೈತರಿಗೆ ಬೆಳೆ ವಿಮೆ ಪಾವತಿಸಲು ಸೂಚನೆ ನೀಡಲಾಗಿದೆ.

ಹೌದು, ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದಾಗ ಯಾವ ರೈತರೂ 4-10 ದಿನದೊಳಗೆ ಬೆಳೆ ವಿಮಾ ಕಂಪನಿಗೆ ದೂರು ದಾಖಲಿಸಿದ 22,217 ರೈತರಿಗೆ 12.84 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಇದೇ ಜುಲೈ 18 ರೊಳಗೆ ಪಾವತಿಸುವಂತೆ ಯೂನಿವರ್ಸಲ್ ಸೊಂಪೋ ಜನರಲ್ ಇನ್ಸುರೆನ್ಸ್ ವಿಮಾ ಕಂಪನಿಗೆ ಡಿ.ಸಿ. ಬಿ. ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ವಿಮಾ ಸಂಸ್ಥೆಯೊಂದಿಗ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮಾ ಕಂಪನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿರುವಂತೆ ವಿಮಾ ಪರಿಹಾರ ನೀಡಬೇಕು ಎಂದಿದ್ದಾರೆ. ಅಲ್ಲದೆ, ಸ್ಥಳೀಯ ವಿಕೋಪದಡಿ ರೈತರಿಂದ ಸ್ವೀಕೃತ ದೂರುಗಳಲ್ಲಿ 8884 ಪ್ರಕರಣಗಳನ್ನು ವಿಮಾ ಕಂಪನಿ ತಿರಸ್ಕರಿಸಿದ್ದು, ಆದರೆ ದಾಖಲಾತಿಗಳನ್ನು ಪರಿಶೀಲನೆಗೆ ಸಲ್ಲಿಸಿರುವುದಿಲ್ಲ. ಒಂದು ವಾರದೊಳಗೆ ಸದರಿ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಸಲ್ಲಿಸಿ, ಅವರಿಂದ ಪರಿಶೀಲನೆಗೊಳಪಟ್ಟ ವಿಸ್ತೃತ ವರದಿ ಸಹ ಸಲ್ಲಿಸುವಂತೆ ವಿಮಾ ಕಂಪನಿಗೆ ತಿಳಿಸಿದರು.

ಇದನ್ನೂ ಓದಿ ಅನ್ನಭಾಗ್ಯದ ಹಣ ಯಾರಿಗೆ ಎಷ್ಚು ಜಮೆಯಾಗಿದೆ? ಅನ್ನಭಾಗ್ಚದ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಇನ್ನೂ 2022-2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಜಿಲ್ಲೆಯಲ್ಲಿ ಒಟ್ಟು 1,18,924 ರೈತರು ದೂರು ನೀಡಿದ್ದಾರೆ. ಮಾರ್ಗಸೂಚಿ ಅನ್ವಯ 72 ಗಂಟೆಯಲ್ಲಿ ದೂರು ನೀಡಿದ 64,764 ರೈತರಿಗೆ 39.93 ಕೋಟಿ ರೂಪಾಯಿಗಳನ್ನು ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Pay 12.84 crore to farmers  ಬೆಳೆ ವಿಮೆಯ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಕಳೆದ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ರೈತರು ತಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆ ವಿಮೆಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರಿಗೆ ಪ್ರೊಪಸಲ್, ಮೊಬೈಲ್ ನಂ.  ಹಾಗೂ ಆಧಾರ್ ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಮೊಬೈಲ್ ನಂ.ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನ್ನು ನಮೂದಿಸಬೇಕು. ಇದಾದ ಮೇಲೆ Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಎದುರಗುಡೆ ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬ ಮೆಸೆಜ್ ಕಾಣಿಸುತ್ತದೆ. ಅರ್ಜಿ ಎಲ್ಲಿ ಸಲ್ಲಿಸಲಾಗಿದೆ. ಅದರ ಎದುರುಗಡೆ Select ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಯಾವಾಗ ಸಲ್ಲಿಸಲಾಗಿದೆ ಹಾಗೂ ಅರ್ಜಿಯ ವಿಮಾ ಕಂಪನಿಗೆ ಕಳುಹಿಸಲಾಗಿದೆಯೋ ಇಲ್ಲವೋ ಎಂಬ ಮೆಸೆಜ್ ಕಾಣಿಸುತ್ತದೆ.

ಇದೆಲ್ಲಾ ಸರಿಯಿದ್ದರೆ ನಿಮಗೆ ಮುಂದಿನ ಮೂರು ದಿನಗಳೊಳಗೆ ಬೆಳೆ ವಿಮೆ ಹಣ ಜಮೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ರೈತರು ಮೂರು ದಿನಗಳ ನಂತರ ತಮ್ಮ ಅರ್ಜಿಯ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ಯೂನಿವರ್ಸಲ್ ಸ್ಯಾಂಪೋ ವಿಮಾ ಕಂಪನಿಯ ಸಹಾಯವಾಣಿ 1800 200 5142 ಗೆ ಸಂಪರ್ಕಿಸಬಹುದು.

Leave a Comment