Panchamitra Whatsapp number 8277506000 : ಗ್ರಾಮೀಣ ಜನರು ತಮ್ಮ ಮನೆಯಲ್ಲಿಯೇ ಕುಳಿತು ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಸೇವೆಗಳಿಗೆ ಅರ್ಜಿ ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ಪಂಚಮಿತ್ರ ಪೋರ್ಟಲ್ ನ್ನು ಆರಂಭಿಸಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿ ನಂತರ ಅರ್ಜಿಗಳ ಸ್ಟೇಟಸ್ ಪರಿಶೀಲಿಸಲು ಪಂಚಮಿತ್ರ ವ್ಯಾಟ್ಸ್ ಆ್ಯಪ್ ಚಾಟ್ ಆರಂಭಿಸಲಾಗಿದೆ.
ಹೌದು, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಪಂಚಮಿತ್ರ ವ್ಯಾಟ್ಸ್ ಆ್ಯಪ್ ಚಾಟ್ ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಂಚಮಿತ್ರ ಪೋರ್ಟಲ್ ನ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತ್ ಗಳ ವಿವಿಧ ಮಾಹಿತಿ, ವಿವರಗಳನ್ನು ಪಡೆಯಲು ಮತ್ತು ಗ್ರಾಪಂಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್ಸೈಟ್ ಮತ್ತು ಪೋರ್ಟಲ್ ಗಳಿಗೆ ಭೇಟಿ ನೀಡಬೇಕಿತ್ತು. ಅಲ್ಲದೆ ಎಲ್ಲಾ ಬಗೆಯ ಕುಂದುಕೊರೆತಗಳನ್ನು ದಾಖಲಿಸಿ, ನಿವಾರಿಸಿಕೊಳ್ಳಲು ಯಾವುದು ನಿರ್ಧಿಷ್ಟವಾದ ವೆಬ್ಸೈಟ್ ಅಥವಾ ಪೋರ್ಟಲ್ ಗಳು ಇರಲಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಬರುವರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ ಆಡಳಿತ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ವ್ಯಾಟ್ಸ್ ಆ್ಯಪ್ ಚಾಟ್ ತಂತ್ರಜ್ಞಾನವನ್ನು ದೇಶದಲ್ಲೇ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಏನಿದು ಪಂಚಮಿತ್ರ ಪೋರ್ಟಲ್?
ಪಂಚಮಿತ್ರ ಪೋರ್ಟಲ್ ಮೂಲಕ ಗ್ರಾಮ ಪಂಚಾಯತ್ ಗಳ ಮಾಹಿತಿಗಳಾದ ಚುನಾಯಿತ ಜನಪ್ರತಿನಿಧಿಗಳ ವಿವರ, ಸಿಬ್ಬಂದಿ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡವಳಿ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಸೇರಿದಂತೆ ಇನ್ನಿುತರ ವಿವರಗಳನ್ನುಪಡೆಯಬಹುದು.
Panchamitra Whatsapp number 8277506000 ನಲ್ಲಿ ಚಾಟ್ ಮಾಡಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿರುವ ಮಹತ್ವದ ಪಂಚಮಿತ್ರ ಎಂಬ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಆಗಿುತ್ತದೆ. ಈ ನಂಬರ್ ನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ವ್ಯಾಟ್ಸ್ ಆ್ಯಪ್ ಚಾಟ್ ಮಾಡಬಹುದು.
ವ್ಯಾಟ್ಸ್ ಆ್ಯಪ್ ನಲ್ಲಿಏನೇನು ಮಾಹಿತಿ ಪಡೆಯಬಹುದು?
ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರ ಸಂಪರ್ಕ ಮೂಲ ಸೌಕರ್ಯ, ಗೋಪುರಕ್ಕೆ ಅನುಮತಿ ಓವರ್ ಗ್ರೌಂಡ್ ಕೇಬಲ್ ಮೂಲ ಸೌಕರ್ಯ, ಭೂಗತ ಕೇಬಲ್ ಮೂಲ ಸೌಕರ್ಯ ಗಳ ಅನುಮಿತಿ, 9 / 11ಎ, ನಮೂನೆ 11 ಬಿ ಸೇರಿದಂತೆ ಇನ್ನಿತರ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.
Panchamitra Whatsapp number 8277506000 ವ್ಯಾಟ್ಸ್ ಆ್ಯಪ್ ನಲ್ಲಿ ಚಾಟ್ ಹೇಗೆ ಮಾಡಬೇಕು?
ನಿಮ್ಮಮೊಬೈಲ್ ನಲ್ಲಿ ಪಂಚಮಿತ್ರದ ಇಲಾಖೆಯ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಂಡು ಚಾಟ್ ಆರಂಭಿಸಿದರೆ ಮೊದಲಿಗೆ ಭಾಷೆ ಕೇಳುತ್ತದೆ. ಅಲ್ಲಿ ನೀವು ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಂತರ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ತಾನಾಗಿಯೇ ಕೆಲ ಆಯ್ಕೆಗಳು ಆರಂಭವಾಗುತ್ತಾ ಸಾಗುತ್ತದೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ನೀವು ಬಯಸುವ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ಅಲ್ಲಿನ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ನೀವು ಯಾವುದರ ಕುರಿತು ತಿಳಿದುಕೊಳ್ಳಬೇಕೆಂದುಕೊಂಡಿದ್ದೀರೋ ಅದನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ. ಒಂದು ವೇಳೆ ನೀವು ತಪ್ಪಾಗಿ ನಮೂದಿಸಿದರೆ ಹಿಂದೆ ಹೋಗುವ ಆಯ್ಕೆ ಸಹ ಇರುತ್ತದೆ. ಇಲ್ಲಿ ಹಿಂದಿನ ಮೆನುವಿಗೆ ಹೋಗಿ ನೀವು ಕೇಳಲಿಚ್ಚಿಸುವ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಪಂಚತಂತ್ರ 2.0 ವೆಬ್ಸೈಟ್ ಗೆ ಭೇಟಿ ನೀಡಿ