PM kisan fund release ಪಿಎಂ ಕಿಸಾನ್ 14ನೇ ಕಂತು ಜುಲೈ 27 ರಂದು ಬೆಳಗ್ಗೆ 11 ಗಂಟೆಗೆ ರೈತರ ಖಾತೆಗೆ ಜಮೆಯಾಗಲಿದೆ. ಹೌದು, ಈಗಾಗಲೇ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಅಧಿಕೃತಿವಾಗಿ ಪಿಎಂ ಕಿಸಾನ್ ಯೋಜನೆಯ ಪೇಜ್ ನಲ್ಲಿ ತಿಳಿಸಿದೆ.
ಪಿಎಂ ಕಿಸಾನ್ 14ನೇ ಕಂತಿನ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 27 ರಂದು ಸೀಕರ್ ಜಿಲ್ಲೆಯಿಂದ ಬೆಳಗ್ಗೆ 11 ಗಂಟೆಗೆ ರೈತರ ಖಾತೆಗೆ ಜಮೆ ಮಾಡಲು ಚಾಲನೆ ನೀಡಲಿದ್ದಾರೆ. ಅಂದು ದೇಶದ 9 ಕೋಟಿಗೂ ಅಧಿಕ ರೈತರಿಗೆ ಸುಮಾರು 18 ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು.
PM kisan fund release ಪಿಎಂ ಕಿಸಾನ್ ಹಣ ಯಾರಿಗೆ ಜಮೆಯಾಗಲಿದೆ? ಯಾರಿಗೆ ಜಮೆಯಾಗಲ್ಲ? ಮೊಬೈಲ್ ನಲ್ಲೇ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಈ ಸಲ ಯಾರಿಗೆ ಜಮೆಯಾಗಲಿದೆ ಯಾರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆನಿಫಿಶಿಯರಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರಿದೆಯೋ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಬೇಕು.
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿರುವ ರೈತರು ಈಗಾಗಲೇ ಇಕೆವೈಸಿ ಮಾಡಿಸಿರಬೇಕು. ಇಕೆವೈಸಿ ಮಾಡಿಸದೆ ಇರುವ ರೈತರಿಗೆ ಈ ಸಲ 14ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಲ್ಯಾಂಡ್ ಸೀಡಿಂಗ್ ಅಂದರೆ ತಮ್ಮ ಜಮೀನಿನ ದಾಖಲೆಗಳು ಸರಿಯಾಗಿ ಅಪ್ಲೋಡ್ ಆಗಿರುವುದರೊಂದಿಗೆ ಜಮೀನಿನ ದಾಖಲೆಯಲ್ಲಿ ಬ್ಯಾಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ಮತ್ತು ತಂದೆಯ ಹೆಸರು ಒಂದೇ ಆಗಿರಬೇಕು. ಹೆಸರಿನಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.
ಇದನ್ನೂ ಓದಿ : ಗೃಹಜ್ಯೋತಿಗೆ ನಿಮ್ಮಅರ್ಜಿ ಸ್ವೀಕೃತವಾಗಿದೆಯೇ? ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ಪಿಎಂ ಕಿಸಾನ್ ಫಲಾನುಭವಿಗಳ ಕುಟುಂಬದ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು. ಕುಟುಬದಲ್ಲಿ ಪತಿ ಅಥವಾ ಪತ್ನಿ ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಕುಟುಂಬದಲ್ಲಿ ಪಿಂಚಣಿ ಪಡೆಯುವವರಾಗಿರಬೇಕು. ತಾಪ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಅಧ್ಯಕ್ಷ, ಶಾಸಕ, ಸಚಿವರಿಗೂ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಖಾಸಗಿ ನೌಕರಿಯಲ್ಲಿದ್ದರೂ ಐಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದರೆ ಅವರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ.
ಪಿಎಂ ಕಿಸಾನ್ ಯೋಜನೆ ಮುಂದುವರೆಯುವುದೇ?
ಪಿಎಂ ಕಿಸಾನ್ ಯೋಜನೆ ಆರಂಭವಾಗಿ ಈ ವರ್ಷಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆ ಐದು ವರ್ಷ ಅವಧಿಯದ್ದಾಗಿದೆ. ಇದೇ ವರ್ಷ ಡಿಸೆಂಬರ್ ತಿಂಗಳಿಗೆ ಯೋಜನೆ ಐದು ವರ್ಷ ಪೂರ್ಣವಾಗುತ್ತದೆ. ಏಪ್ರೀಲ್ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರದ ಚುನಾವಣೆ ನಡೆಯಲಿದೆ. ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಮುುವರೆಸುತ್ತದೆಯೋ ಇಲ್ಲವೋ ಸರ್ಕಾರ ರಚನೆಯಾದನಂತರವೇ ಗೊತ್ತಾಗಲಿದೆ. ಒಂದು ವೇಳೆ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಮುಂದುವರೆಸುತ್ತಾರೋ ಅಥವಾ ಸ್ಥಗಿತಗೊಳಿಸುತ್ತಾರೋ ಅಥವಾ ಈ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗುವುದೇ ಎಂಬುದರ ಬಗ್ಗೆ ಹೊಸ ಸರ್ಕಾರ ರಚನೆಯಾದನಂತರವೇ ತಿಳಯಲಿದೆ.
ರೈತರ ಆರ್ಥಿಕ ಅಭಿವೃದ್ಧಿಗಾಗಿ ಅಂದರೆ ರೈತರು ಆರ್ಥಿಕವಾಗಿ ಸಬಲರಾಗಲೆಂಬ ಉದ್ದೇಶದಿಂದ ಈ ಯೋಜನೆ ಆರಂಭವಾಗಿದೆ. ಹಾಗಾಗಿ ಈ ಯೋಜನೆಯ ಮುಂದುವರೆಯಲೆಂದು ಆಶಿಸುತ್ತೇವೆ.