Nano Urea fertilizer benefit ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಗೋವನ ಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ ಹಾಗೂ ಇತರ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದು, ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮಿ.ಲೀ ನ್ಯಾನೋ ಯೂರಿಯಾ ಬಳಸಬೇಕು.
ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಬೇಕಾದ ಪೋಷಕಾಂಶಗಳು ಕೇವಲ ಶೇ. 50 ರಷ್ಟು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ. ಹಾಗೂ ಉಳಿದ ಪೋಷಕಾಂಶಗಳು ನೀರಿನ ಹರಿವಿಕೆಯಿಂದ ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸುವುದರಿಂದ ಬೆಳಗಳಿಂದ ಶೇ. 80 ರಷ್ಟು ಪೋಷಕಾಂಶಗಳು ಉಪಯುಕ್ತವಾಗುತ್ತದೆ.
Nano Urea fertilizer benefit ಏನಿದು ನ್ಯಾನೋ ಯೂರಿಯಾ?
ನ್ಯಾನೋ ಯೂರಿಯಾ ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆ ನಿರ್ವಹಣೆಯಾಗುವ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕವು ಸಸ್ಯಗಳಲ್ಲಿ ಹೈಡ್ರೋಲೈಸಿಸ್ ಬಿಎಕ್ಸ್ ಅಮೋನಿಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಬೆಳೆಗಳಿಗೆ ಬೇಕಾಗಿರುವ ಸಾರಜನಕರವನ್ನು ಸರಿಯಾದ ಪ್ರಮಾಣದಲ್ಲಿಒಧಗಿಸುತ್ತದೆ ಮತ್ತು ಇತರ ಪೋಷಕಾಂಶವನ್ನು ತೆಗೆದುಕೊಳ್ಳುವ ಸಂಯೋಜಿತ ಮಾರ್ಗವನ್ನು ಪ್ರಚೋದಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಿ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಈ ಲಿಸ್ಟ್ ನಲ್ಲಿರುವವರಿಗೆ ಜುಲೈ 24 ರಂದು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ
ಸಾಮಾನ್ಯವಾಗಿ ಹರಳು ರೂಪದ ಯೂರಿಯಾ ಬಳಕೆಯನ್ನು ಶೇ. 50 ರಷ್ಟು ಕಡಿಮೆ ಮಾಡಬಹುದು. ರೈತರು ಇದನ್ನು ಸುಲಭವಾಗಿ ಶೇಖರಿಸಿ ಸಾಗಾಣಿಕೆ ಮಾಡಬಹುದು. ಇದು ಮಣ್ಣು, ಗಾಳಿ, ನೀರಿನ ಗುಣಮಟ್ಟ ಹಾಗೂ ಒಟ್ಟಾರೆ ಪರಿಸರ ಸಂರಕ್ಷಣಗೆ ಸಹಕಾರಿಯಾಗಿರುತ್ತದೆ. ಏಕದಳ, ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳಲ್ಲಿ ಮೊದಲನೇ ಸಿಂಪಡಣೆಯನ್ನು ಮೊಳಕೆ ಹೊಡೆದ 30-35 ದಿನಗಳ ನಂತರ ಹಾಗೂ ಎರಡನೇ ಸಿಂಪಡಣೆಯನ್ನು 50-60 ದಿನಗಳ ನಂತರ ಮಾಡಬಹುದು.
ಒಂದು ಬಾಟಲ್ ನ್ಯಾನೋ ಯೂರಿಯಾ (500 ಮಿ.ಲೀ.) ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾಗಿರುತ್ತದೆ. ಒಂದು ಬಾಟಲ್ ನ್ಯಾನೋ ಯೂರಿಯಾದ ದರವು 225 ರೂಪಾಯಿ ಇದ್ದು, ಸಬ್ಸಿಡಿರಹಿತವಾಗಿರುತ್ತದೆ. ಹರಳು ರೂಪದ ನ್ಯಾನಾ ಯೂರಿಯಾದ ದರ ಸಬ್ಸಿಡಿ ಒಳಗೊಂಡಂತೆ 266 ರೂಪಾಯಿ ಇದೆ. ಕೇಂದ್ರ ಸರ್ಕಾರದ ಆಮದು ಮೂಲಕ ದೇಶಕ್ಕೆ ಸಬ್ಸಿಡಿ ರೂಪದಲ್ಲಿ ಆಮದು ಹೆಚ್ಚಿನ ಹೊರೆಯಾಗುತ್ತಿದೆ. ಹಾಗೂ ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾದ ಬಳಕೆಯು ಸಬ್ಸಿಡಿ ಹೊರೆಯನ್ನು ತಗ್ಗಿಸುವುದರ ಜೊತೆಗೆ ವಿದೇಶಿ ವಿನಿಮಯದ ಉಳಿಕೆಗೆ ಸಹ ಉತ್ತೇಜನ ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ಇಫ್ಕೋ ಸಂಸ್ಥೆಯ ಪ್ರತಿನಿಧಿ ಗಣೇಶ ಮೊಬೈಲ್ ಸಂಖ್ಯೆ 9448090423 ಇವರನ್ನು ಸಂಪರ್ಕಿಸಬಹುದು ಎಂದು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಮೊದಲ ಪರಿಸರ ಸ್ನೇಹಿ ಗೊಬ್ಬರ ನ್ಯಾನೋ ಯೂರಿಯಾ
ವಿಶ್ವದ ಮೊದಲ ಪರಿಸರ ಸ್ನೇಹಿ ಗೊಬ್ಬರ ನ್ಯಾನೋ ಯೂರಿಯಾವಾಗಿದೆ. ಹೌದು, ಕೃಷಿಯಲ್ಲಿ ಉತ್ತಮ ಫಸಲು ಪಡೆಯಲು ನ್ಯಾನೋ ಯೂರಿಯಾ ಸಹಾಯಕವಾಗಲಿದೆ.
ಗುಜರಾತಿನ ಕಲೋಲದಲ್ಲಿರುವ ಇಫ್ಕೋ ಸಂಸ್ಥೆ ಇತ್ತೀಚೆಗ ನ್ಯಾನೋ ಯೂರಿಯಾವನ್ನು ಆವಿಷ್ಕಾರ ಮಾಡಿದೆ. ಇದು ಸಾರಜನಕದ ಮೂಲವಾಗಿದ್ದು, ಜೈವಿಕ ತಂತ್ರಜ್ಞಾನ ಸಂಶೋಧನ ಕೇಂದ್ರದಲ್ಲಿ ದೇಶೀಯ ಸ್ವತಂತ್ರ ಪೇಟೇಂಟ್ ಬಳಸಿ ಅಭಿವೃದ್ಧಿಗೊಳಿಸಲಾಗಿದೆ. ಎಫ್.ಸಿ.ಓ ಅನುಮೋದಿಸಿರುವ ವಿಶ್ವದ ಮೊದಲ ನ್ಯಾನೋ ಗೊಬ್ಬರ ಇದಾಗಿದೆ. ಬೆಳೆಗಳ ಸಮಗ್ರ ಬೆಳವಣಿಗೆಗೆ ಬೇಕಾದ ಸಾರಜನಕ ಪೋಷಕಾಂಶವನ್ನು ಇದು ಒದಗಿಸುತ್ತದೆ.
ನ್ಯಾನೋ ಯೂರಿಯಾ ಹೇಗೆ ಬಳಸಬೇಕು? ಯಾವ ಹಂತದಲ್ಲಿ ಬಳಸಬೇಕೆಂಬುದು ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.