ರೈತರು ಬಳಸುವ ಈ ಉಪಕರಣಗಳಿಗೆ ಏನೇನ್ನುತ್ತಾರೆ? ಹೇಳಬಲ್ಲಿರಾ?

Written by Ramlinganna

Published on:

Name this equipment : ಹಿಂದೆ ರೈತರು ದಿನನಿತ್ಯ ಬಳಸುವ ಉಪಕರಣಗಳ ಹೆಸರುಗಳು ನಿಮಗೆ ನೆನಪಿದೆಯೇ? ಹಾಗಾದರೆ ಇವುಗಳ ಹೆಸರು ಹೇಳಲು ಇಲ್ಲೇ ಕಾಮೆಂಟ್ ಮಾಡಬಹುದು.

ನಾವು ನೀವುಗಳೆಲ್ಲಾ ಆಧುನೀಕರಣಗೊಂಡ  ನಮ್ಮ ಬದುಕಿನ ಜೀವನದಲ್ಲಿ ನಮ್ಮ  ಮೂಲಭೂತ ಆಚರಣೆಗಳು, ಹಿಂದೆ ನಾವು ಬಳಸುತ್ತಿದ್ದ ಉಪಕರಣಗಳನ್ನು ಮರೆತುಬಿಟ್ಟಿದ್ದೇವೆ.

ನಗರೀಕರಣಗೊಂಡ ಬದುಕಿನಲ್ಲಿ ನಮ್ಮ ಜೀವನನದ ಅರ್ಥಪೂರ್ಣ ಆಚರಣೆ ಮತ್ತು ನಂಬಿಕೆ ನಡಾವಳಿಗಳನ್ನು ಮರೆತು ನಾವು ಪೂರ್ಣವಾಗಿ ಜೀವನಸೆಲೆಯನ್ನೇ ಕಳೆದುಕೊಂಡಿದ್ದೇವೆ. ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ನಮ್ಮ ಬದುಕಿನಲ್ಲಿ ನಮ್ಮ ಅಮೂಲ್ಯವಾದ ಹಬ್ಬ ಹರಿದಿನಗಳು, ನಾವು ಬಳಸುವ ಅರ್ಥಪೂರ್ಣ ಉಪಕರಣಗಳು, ಸಂಸ್ಕೃತಿ, ಸೇರಿದಂತೆ ಇನ್ನಿತರ ಮಹತ್ವದ ಆಚರಣಗಳು ನಮಗೆ ನೆನಪಿವೆಯೇ? ನೆನಪಿದ್ದರೆ ಇಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಬಹುದು.

ರೈತನ ಬದುಕು ನಿಜಕ್ಕೂ ಸ್ವಾವಲಂಬಿ ಬದುಕು ಎಂದು ಹೇಳಬಹುದು. ಇಂದು ನಾವು ಎಷ್ಟೇ ಓದಿದರೂ, ಎಷ್ಟೇ ಆಧುನೀಕರಣಗೊಂಡರೂ, ಉನ್ನತ ಅಧಿಕಾರಿಯಾದರೂ, ದೊಡ್ಡಸಾಧನೆ ಮಾಡಿದರೂ ಅನ್ನಕ್ಕಾಗಿ ನಾವು ಅವಲಂಬಿತರಾಗಲೇಬೇಕು.  ಹಾಗಾಗಿ ಹಿಂದೆ ಸರ್ವಜ್ಞ ಕೋಟಿ ವಿಧ್ಯೆಗಿಂತ ಮೇಟಿ ವಿಧ್ಯೆಯೇ ಲೇಸೆಂದು ಹೇಳಿದ್ದಾರೆ.

ಇಂದು ಈ ಲೇಖನದಲ್ಲಿ ಹಿಂದೆ ರೈತರು ತಾವು ಬಳಸುತ್ತಿದ್ದ ಕೆಲವು ಉಪಕರಣಗಳು ಹಾಗೂ ಕಣ (ರಾಶಿ) ಮಾಡುವ ಬಳಸುವ ಉಪಕರಣಗಳ ಬಗ್ಗೆ ಕೇಳುತ್ತೇನೆ. ಕೃಷಿ ಉಪಕರಣಗಳಾಗಲಿ, ಆಚರಣೆಗಳಿಗಾಗಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಹೌದು, ಒಂದು ಕಡೆ ಆಚರಣೆ ಮಾಡುವ ಹಬ್ಬಗಳು ಇನ್ನೊಂದು ಕಡೆ ವಿಭಿನ್ವವಾಗಿ ಆಚರಣೆ ಮಾಡಲಾಗುತ್ತದೆ.

Name this equipment ಹಾಲು, ಮೊಸರು, ಬೆಣ್ಣೆ ತುಪ್ಪ ಎಲ್ಲಿಇಡುತ್ತಿದ್ದರು?

ಹಿಂದೆ, ಬೆಣ್ಣೆ, ತುಪ್ಪ, ಮೊಸರು, ಹಾಲನ್ನು ಬೆಕ್ಕು ಹಾಗೂ ಇನ್ನಿತರ ಪ್ರಾಣಿಗಳು ಕೆಡವಬಾರದೆಂದು ಪ್ರತ್ಯೇಕವಾಗಿ ಇಡುತ್ತಿದ್ದರು. ಹಾಗಾದರೆ ಹಿಂದೆ ಬೆಣ್ಣೆ.ತುಪ್ಪ, ಮೊಸರು, ಹಾಲಿನ ಗಡಿಗೆಗಳನ್ನು ಎಲ್ಲಿ ಇಡುತ್ತಿದ್ದರು. ಅದಕ್ಕೇನೆನ್ನುತ್ತಾರೆ?

Name this equipment  ಕಣ ಮಾಡುವಾಗ ಧಾನ್ಯ ಯಾವುದರ ಮೇಲೆ ನಿಂತು ತೂರುತ್ತಿದ್ದರು?

ಹಿಂದೆ ಒಕ್ಕಣೆಯ ಸಂದರ್ಭದಲ್ಲಿ ಧಾನ್ಯಗಳಿಂದ ಹೊಟ್ಟನ್ನು ಬೇರ್ಪಡಿಸಲು  ಧಾನ್ಯ ತೂರುತ್ತಿದ್ದರು. ಅದೊಂದು ನಿಜಕ್ಕೂ ಕಲೆಯಾಗಿತ್ತು. ಗಾಳಿಯ ವೇಗವನ್ನು ಆಧರಿಸಿ ಧಾನ್ಯವನ್ನು ತೂರುತ್ತಿದ್ದರು. ತೂರಿದಾಗ ಕೆಳಗಡೆ ಕಸಕಡ್ಡಿಗಳು ಮತ್ತು ಹೊಟ್ಟನ್ನು ಬೇರ್ಪಡಿಸಲಾಗುತ್ತಿತ್ತು. ನಂತರ ಚೀಲಗಳಲ್ಲಿ ಧಾನ್ಯ ತುಂಬುತ್ತಿದ್ದರು.

ಬಿತ್ತನೆಯಿಂದ ಹಿಡಿದು ರಾಶಿ ಮಾಡುವವರೆಗೂ ರೈತರು ಬಳಸುವ ಉಪಕರಣಗಳು, ಆಚರಣೆಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪ್ರತಿ ನಿತ್ಯ ಬರೆಯಬೇಕೆಂದುಕೊಂಡಿದ್ದೇನೆ. ನಮ್ಮ ಸಂಸ್ಕೃತಿ ಕಣ್ಮರೆಯಾಗಬಾರದು. ನಿಮ್ಮ ಮುಂದಿನ ಪೀಳಿಗೆಗಾದರೂ ನೆನಪಿರಲೆಂಬ ಉದ್ದೇಶದಿಂದ ಈ ಲೇಖನ ಆರಂಭಿಸಿದ್ದೇನೆ. ನಿಮ್ಮ ಸಹಕಾರ ಇರುತ್ತದೆ ಎಂಬ ಆಶಾಭಾವನೆ ಹೊಂದಿದ್ದೇನೆ.

ಇದನ್ನೂ ಓದಿ ಯಾವ ಯಾವ ಸರ್ವೆ ನಂಬರ್ FID ಗೆ ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ

ಜನಜಾಗರಣವು ಕಳೆದ ಮೂರೂ ವರ್ಷಗಳಿಂದ ನಿರಂತರವಾಗಿ ರೈತರಿಗೆ ಉಪಯುಕ್ತವಾಗುವ ಮಾಹಿತಿಗಳನ್ನುನೀಡುತ್ತಿದೆ. ಸರ್ಕಾರದ ಯೋಜನೆಗಳು, ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಕೃಷಿ ಯಂತ್ರೋಪಕರಣಗಳು , ಸೌಲಭ್ಯಗಳು, ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪ್ರತಿ ನಿತ್ಯ ನೀಡಲಾಗುತ್ತಿದೆ. ಇದಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ. ಹಾಗಾಗಿ ಈ ಲೇಖನವನ್ನು ಇಂದು ವಿಭಿನ್ನವಾಗಿ ಆರಂಭಿಸಿದ್ದೇನೆ.

ನಿಮ್ಮೂರಿನ ಮಳೆಯ ಮಾಹಿತಿ ಬೇಕೆ?

ನಿಮ್ಮೂರಿನಲ್ಲಿ ಮಳೆಯಾಗುವ ಬರುತ್ತದೆ ಎಂಬ ಮಾಹಿತಿ ಬೇಕೆ?  ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು. ಇನ್ನೇಕೆ ತಡ ಕೂಡಲೇ ವರುಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಿ ನಿಮ್ಮೂರಿನ ಸುತ್ತಮುತ್ತ ಮಳೆ ಯಾವಾಗ ಬರುತ್ತದೆ ಎಂಬುದನ್ನು ಈಗಲೇ ತಿಳಿದುಕೊಳ್ಳಬಹುದು.

Leave a Comment