Nagara panchami importance : ನಾಗರ ಪಂಚಮಿಯಂದು ನಾಗರಾಜನನ್ನು ಪೂಜಿಸುವ ಪ್ರತೀತಿ ಇದೆ. ಇಂದು ತಮಗೆಲ್ಲಾ ಗೊತ್ತಿದ್ದ ಹಾಗೆ ನಾಗರಾಜನಿಗೆ ಹಾಲೆರೆದು ಪೂಜಿಸಲಾಗುತ್ತಿದೆ. ಇದರ ಹಿನ್ನೆಲೆಯ ಮಾಹಿತಿಇಲ್ಲಿದೆ.
ನಾಗರ ಪಂಚಮಿ ಕಥೆ
ಒಂದೂರಿನಲ್ಲಿ ನಾಲ್ಕು ಜನ ಅಣ್ಣತಮ್ಮಂದಿರಿಗೆ ಒಬ್ಬಳೇ ತಂಗಿಯಿದ್ದಳು. ಪಂಚಮಿಯಂದು ನಾಗರ ಹಾವು ನಾಲ್ಕು ಜನ ಸಹೋರರಿಗೆ ಕಚ್ಚಿದ್ದರಿಂದ ನಾಲ್ಕು ಜನ ಅಣ್ಣತಮ್ಮಂದಿರು ಸಾವನ್ನಪ್ಪಿದ್ದರು. ನಾಲ್ಕು ಜನ ಅಣ್ಣಂದಿರನ್ನು ಕಳೆದುಕೊಂಡ ತಂಗಿ ನಾಲ್ಕು ಜನರಲ್ಲಿ ಒಬ್ಬ ಸಹೋದರನನ್ನಾದರೂ ಬದುಕಿಸುಕೊಡು ಎಂದು ಪ್ರಾರ್ಥಿಸಿದ್ದರಂತೆ. ಆಕೆಯ ನೋವು, ಸಂಕಟ ಅರಿತ ನಾಗರಹಾವು ಒಬ್ಬ ಅಣ್ಣನನ್ನು ಬದುಕಿಸಿತ್ತಂತೆ. ಅಂದಿನಿಂದ ಇಲ್ಲಿಯವರೆಗೆ ನಾಗರ ಪಂಚಮಿ ಆಚರಿಲಾಗುತ್ತಿದೆ.
Nagara panchami importance : ನಾಗರ ಪಂಚಮಿಯ ಪಾರಾಣಿಕ ಹಿನ್ನೆಲೆ
ಜನಮೇಜಯ ರಾಜನ ತನ್ನ ತಂದೆ ಪರೀಕ್ಷಿತನಿಗೆ ಹಾವು ಕಚ್ಚಿದ್ದರಿಂದ ರಾಜ ಸಾವನ್ನಪ್ಪಿದ್ದರು. ಇದರಿಂದಾಗಿ ಕುಪಿತಗೊಂಡ ಜನಮಜೇಯ ಭೂ ಲೋಕದಲ್ಲಿರುವ ಎಲ್ಲಾ ಹಾವುಗಳನ್ನು ನಾಶ ಮಾಡಲು ಸರ್ಪಯಜ್ಞ ಆರಂಭಿಸುತ್ತಾನೆ. ಆಗ ಆಸ್ತಿಕ ಮುನಿಯು ಜನಮಜೇಯನಿಗೆ ಸಮಾಧಾನಗೊಳಿಸಿ ಪ್ರಾಣಿ ಹಿಂಸೆ ಮಹಾಪಾಪ ಎಂದು ಹೇಳಿ ಸರ್ಪಯಜ್ಞ ನಿಲ್ಲಿಸುತ್ತಾರೆ. ಈ ದಿನದಿಂದ ನಾಗರ ಪಂಚಮಿ ಆಚರಿಸಲಾಗುತ್ತದೆ ಎಂದು ಹೇಳುತ್ತದೆ ಪೌರಾಣಿಕ ಕಥೆ.
Nagara panchami importance : ರೈತರೇಕೆ ಹುತ್ತಕ್ಕೆ ಹಾಲೆರೆಯುತ್ತಾರೆ?
ಹಾವುಗಳು ಮಣ್ಣಿನಲ್ಲಿರುವ ಕೀಟಗಳನ್ನು ತಿಂದು ಫಸಲು ರಕ್ಷಿಸುತ್ತವೆ. ಹಾಗಾಗಿ ವಿಶಜಂತುಗಳು ರೈತರಿಗೆ ಕಾಟನೀಡದೆ, ಭೂಮಿಯಲ್ಲಿಯ ಕೀಟಗಳನ್ನುತಿಂದು ಉತ್ತಮ ಫಸಲು ಬರಲಿ ಎಂದು ರೈತರು ಹುತ್ತಕ್ಕೆ ಹಾಲೆರೆದು ಪ್ರಾರ್ಥಿಸುತ್ತಾರೆ.
ಹುತ್ತಕ್ಕೆ ಹಾಲೆರೆಯಬೇಡಿ? ಹಸಿದವರಿಗೆ ಕೊಡಿ ಎಂದ ವಾದ
ಹುತ್ತಕ್ಕೆ ಹಾಲೆರೆಯುವುದು ಬೇಡ, ಹಾವುಗಳು ಹಾಲು ಕುಡಿಯುವುವುದಿಲ್ಲ. ಹುತ್ತಕ್ಕೆ ಕಲ್ಲ ನಾಗರ ಮೇಲೆ ಹಾಲೆರೆಯುವುದು ವ್ಯರ್ಥವಾಗುತ್ತದೆ. ಹಾಗಾಗಿ ಹಸಿದವರಿಗೆ ಹಾಲು ಕೊಟ್ಟು ಪುಣ್ಯ ಕಟ್ಟುಕೊಳ್ಳಿಯೆಂದು ಪ್ರಗತಿಪರ ಚಿಂತಕರ ವಾದವಾಗಿದೆ.
ಉತ್ತರ ಕರ್ನಾಟಕದಲ್ಲಿ ನಾಲ್ಕು ದಿನ ಆಚರಿಸುವ ಹಬ್ಬ
ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿಯನ್ನು ನಾಲ್ಕು ದಿನ ಆಚರಿಸುತ್ತಾರೆ. ಶ್ರಾವಣ ಶುದ್ಧ ತೃತೀಯ ದಿನ ರೊಟ್ಟಿ ಪಂಚಮಿ. ಶ್ರಾವಣ ಶುದ್ಧ ಚತುರ್ಥಿ ದಿನವನ್ನು ನಾಗಚತುರ್ಥಿ ಅಥವಾ ನಾಗಚೌತಿ ಎಂದು ಕರೆಯುತ್ತಾರೆ.
ಇದನ್ನೂ ಓದಿ ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
ಈ ದಿನ ಕುಟುಂಬದ ಸದಸ್ಯರೆಲ್ಲರೂ ಆಕಳ ಹಾಲನ್ನು ಕರಕಿಯ ಗುಚ್ಚದಿಂದ ನಾಗಪ್ರತಿಮೆಗಳಿಗೆ ಶಿಲ್ಪಗಳಿಗೆ ಎರೆಯುತ್ತಾರೆ. ಆಗ ಎಲ್ಲರೂ ಸೇರಿ ಶ್ರೀಗುರುವಿನ ಪಾಲು, ಅಜ್ಜನ ಪಾಲು, ಅಮ್ಮನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ಅವ್ವನ ಪಾಲು, ತಮ್ಮನ ಪಾಲು, ಸರ್ವಗಳದ ಪಾಲು ಎಂದು ಹೇಳುತ್ತಾ ಹಾಲು ಹಾಕುವ ಪರಂಪರೆ ಜನಪದರದಲ್ಲಿದೆ. ಇದು ಕೂಡಿ ಬಾಳುವುದನ್ನು ಸಂಕೇತಿಸುವ ಆಚರಣೆಯಾಗಿದೆ.
ಉಂಡಿ ತಿನ್ನು ಜೋಕಾಲಿ ಜೀಕು
ನಾಗರ ಪಂಚಮಿಯಂದು ಉಂಡಿ (ಲಾಡು)ತಿನ್ನುವುದು ಮತ್ತುಜೋಕಾಲಿ ಜೀಕುವುದು. ಬೇಸನ್, ರವೆ, ಶೇಂಗಾ, ಎಳ್ಳು, ಬೂಂದಿ, ಗುಳ್ಳಡಕಿ ಮುಂತಾದ ಉಂಡಿಗಳ ಜತೆಗೆ ಅಳ್ಳಿಟ್ಟು ಮತ್ತು ತಂಬಿಟ್ಟು ಸಿಹಿ ಖಾದ್ಯಗಳನ್ನು ಸಿದ್ದಗೊಳಿಸಿ ನಾಗಪ್ಪನಿಗೆ ನೈವೇದ್ಯ ಮಾಡುವುದು ಒಂದೆಡೆಯಾದರೆ ಮನೆಯ ಒಳಗೆ ಮತ್ತು ಮರಗಳಿಗೆ ಜೋಕಾಲಿ ಜೀಕುವುದು ಮತ್ತೊಂದು ಕಡೆಯಾಗಿದೆ.
ಪಂಚಮಿ ಹಬ್ಬ ಬಂದೈತಿ, ಜೋಕಾಲಿ ಕಟ್ಟೈತಿ, ಸುಯ್ಯಂತ ತೂಗಾಕ, ಬರತಿಯೇನವ ತಂಗಿ ಹಳ್ಳಿಗೆ ಎಂಬ ಜನಪದ ಹಾಡು ಕೇಳಿರಬಹುದು. ನಾಗರ ಪಂಚಮಿ ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ.